Tuesday, January 16, 2007

ಅವಳು ಹೇಳಿದ್ದು

ನಿನ್ನ ಬಗ್ಗೆ ಒಂದು ಚಿಕ್ಕ ಅನುಮಾನ ಕಾಡಿ
ಮುನಿಸಿಕೊಂಡೆ ನೋಡು?
ನೀನು ಪ್ರಾಮಾಣಿಕ ಎಂದು ತೋರಿಸಲೋಸುಗ
'ನಿನ್ನ ಹೆಸರೇ ನನ್ನ ಪಾಸ್‍ವರ್ಡ್‍ ಕಣೇ,
ಬೇಕಾದ್ರೆ ಚೆಕ್ ಮಾಡ್ಕೋ ಇನ್‍ಬಾಕ್ಸು' ಎಂದದ್ದೇ,
ನಿನ್ನ ಪ್ರಾಮಾಣಿಕತೆಯ ಪ್ರವಾಹದಲ್ಲಿ
ನನ್ನ ಅನುಮಾನವು ಕೊಚ್ಚಿಹೋಗಿ,
ಅರೆ! ನಿನ್ನ ಐಡಿಯೇ ಮರೆತುಹೋಯ್ತಲ್ಲೋ ಗೆಳೆಯಾ...!
ನಿನ್ನೆಡೆಗಿನ ಪ್ರೀತಿಯ ಧ್ಯಾನದಲ್ಲಿ ಮುಳುಗಿಹೋಗಿ,
ಅರೆ! ನನ್ನ ಹೆಸರೇ ನನಗೆ ಮರೆತುಹೋಯ್ತಲ್ಲೋ ಮಿತ್ರಾ...!
ಈಗ ಹೇಗೆ ಲಾಗಿನ್ ಆಗಲಿ...?

7 comments:

ಶ್ರೀನಿಧಿ.ಡಿ.ಎಸ್ said...

!!!! ಕವನ!!

ಒಂತರಾ ಚನ್ನಾಗಿದೆ!

sritri said...

ಸುಶ್ರುತ,ಪ್ರೇಮದಲ್ಲಿ ಮೈ ಮರೆತು ಪಾಸ್‍ವರ್ಡ್,ಐಡ್,ಅಕೌಂಟ್ ನಂಬರ್ ಎಲ್ಲಾ ಮರೆತು ಹೋಗುವುದು ಅಷ್ಟೇನೂ ಒಳ್ಳೆಯ ಅಭ್ಯಾಸವಲ್ಲ :)

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ..

ಹೂಂ ಕವನ! ನಂಗೂ ಗೊತ್ತು: ಇದು 'ತುಂಬಾ ಚನಾಗಿಲ್ಲ' ಆದ್ರೆ 'ಒಂಥರಾ ಚನಾಗಿದೆ' ಅಂತ! Actually ಇದು ನಾಗ್ತಿ ಸರ್ 'ಹಾಯ್' ನಲ್ಲಿ ಬರೆದ ಪ್ರೇಮಪತ್ರವೊಂದನ್ನು ಓದಿದಾಗ ಮೂಡಿದ್ದು. ಹೇಗೆ ತಲೆಗೆ ಬಂತೋ ಹಾಗೇ ಬರೆದಿಟ್ಟೆ. Alter ಮಾಡ್ಲಿಕ್ಕೆ ಹೋಗ್ಲಿಲ್ಲ. ಅದಕ್ಕಾಗಿ.... Anyways, 'ಒಂತರಾ ಧನ್ಯವಾದ' ! :)

ಸುಶ್ರುತ ದೊಡ್ಡೇರಿ said...

@ sritri

ಅಯ್ಯೋ ಏನ್ಮಾಡೋದು ಮೇಡಂ.. ಅಭ್ಯಾಸ ಒಳ್ಳೇದಲ್ಲ ಅಂತ ಗೊತ್ತಿದ್ರೂ ಅಭ್ಯಾಸ ಮಾಡ್ಕೊಂಡ್ಬಿಟ್ಟಿದೀವಿ. ಈಗ ಅಭಾಸ ಆಗ್ದೇ ಇರೋ ಹಾಗೆ ಬದುಕಿದ್ರೆ ಸಾಕಾಗಿದೆ..! ಎನಿವೇ, ಥ್ಯಾಂಕ್ಸ್ ಮೇಡಂ..

Shiv said...

ಸುಶ್ರುತ,

ಈ ಐಡಿ-ಪಾಸ್‍ವರ್ಡ್ ಬೇಡವೇ ಬೇಡ.. ನಿಮ್ಮ ಫಿಂಗರ್ ಪ್ರಿಂಟ್ ನಿಂದ ಲಾಗ್-ಇನ್ ಆಗಿ :)

ಸುಶ್ರುತ ದೊಡ್ಡೇರಿ said...

@ Shiv

ಶಿವು, ನಾನು ಫೇಸ್ ರೀಡರ್ ಸಹಾಯದಿಂದ ಲಾಗಿನ್ ಆಗೋಣ ಅಂತಿದ್ದೆ :)

Shiv said...

ಸುಶ್ರುತ,ಯಾರ ಫೇಸ್ ರೀಡ್ ಮಾಡಬೇಕೆಂದು ಇದೀರಾ :)