Thursday, October 25, 2007

ಎರಡು ಚಾಟ್‍ಗಳು ಮತ್ತು ನಾಲ್ಕು ಪ್ರಶ್ನೆಗಳು!!

ದೃಢ ಚಿತ್ತದ ದಡ
ಉತ್ತೇಜನ ಕೊಡದಿದ್ದರೂ ಕೂಡ
ಮತ್ತೆ ಮತ್ತೆ ಯತ್ನಿಸುತ್ತೆ ಕಡಲು
ಮುತ್ತು ಕೊಡಲು

ಡುಂಡೀರಾಜರ ಈ ಪುಟ್ಟ-ಚಂದ ಹನಿ ನನ್ನ status message ಆಗಿತ್ತು ಅವತ್ತು. ನೋಡಿದ ಈ ಹುಡುಗಿ ಫಕ್ಕನೆ ping ಮಾಡಿದ್ದಳು:

"ತುಂಬಾ ಚೆನ್ನಾಗಿದೆ ಸ್ಟೇಟಸ್. ಕಡಲನ್ನು ಚಂಚಲಚಿತ್ತೆ ಅಂತ ಹೇಳಲಿಕ್ಕಾ ಈ ಲೈನು?"

ಒಂದು ಕ್ಷಣ ಬಿಟ್ಟು ಹೇಳಿದ್ದೆ: "ಹಾಂ, ಆದರೆ ಯಾರು ಕಡಲು ಯಾರು ದಡ ಅನ್ನೋದು ಅವರವರ ಪರಾಮರ್ಶೆಗೆ ಬಿಟ್ಟಿದ್ದು!"

"I think ಹುಡುಗರು ದಡ"


"May be. But not in all the cases."


"Most of the cases. ಮತ್ತೆ ಆ ಸಾಲು love is blind ಅಂತಾನು ಹೇಳುತ್ತೆ ಅಲ್ವಾ?"


"ಅಂದ್ರೆ ನೀನನ್ನೋದು ಕಡಲು ಮುತ್ತು ಕೊಡೋಕೆ ಬರೋದೇ ತಪ್ಪು ಅಂತಾನಾ? :O"


"ಹಾಗಲ್ಲ ಕಣೋ.. ದಡ ತನ್ನ ಕಡೆ interest ತೋರಿಸ್ತಾ ಇಲ್ಲ ಅಂತ ಗೊತ್ತಿದ್ದೂ ಕಡಲು ದಡದ ಹತ್ತಿರ ಹೋಗತ್ತಲ್ಲಾ, ಅದ್ಕೇ ಹೇಳ್ದೆ."


"But ದಡ ಕಡಲನ್ನ ತುಂಬಾ ತುಂಬಾ ಪ್ರೀತ್ಸೊತ್ತೆ ಗೊತ್ತಾ?"


"ಇರಬಹುದು.. ಆದ್ರೆ ಅಷ್ಟೊಂದು ದೃಢತೆ ಯಾಕೆ ಸುಶ್ರುತಾ..? ದಡ ಯಾಕೆ ತನ್ನ interestನ್ನ ತೋರ್ಸೋದಿಲ್ಲ?"


"ಯಾಕೇಂದ್ರೆ, ದಡಾನೆ ಎದ್ದು ಕಡಲಿಗೆ ಮುತ್ತು ಕೊಡ್ಲಿಕ್ಕೆ ಹೋದ್ರೆ ಕಡಲು ಉಳಿಯೋಲ್ಲ! ದಡ gives protection to ಕಡಲು. ತನ್ನ ತೆಕ್ಕೆಯಲ್ಲೇ ಬಂಧಿಸಿಟ್ಟುಕೊಂಡು... ಸದಾ ಕಡಲಿನ ಮುತ್ತಿನ ಸುಖವನ್ನು ಅನುಭವಿಸ್ತಾ.. (sorry, ನಾನು ಪ್ರೇಮಕವಿ ಅಲ್ಲ!).. ದಡಕ್ಕೆ ಕಡಲು ಅಂದ್ರೆ ತುಂಬಾ ಇಷ್ಟ.. ಅದಿಲ್ಲಾಂದ್ರೆ ಅದು ಕಡಲಿನೊಂದಿಗೆ ಜಗಳ ಆಡಿರೋದು.. ತನ್ನ ಪಾಡಿಗೆ ತಾನು ಮುತ್ತು ಕೊಡಿಸ್ಕೊಂಡು ಇರಲ್ವಾ? ;)"


"ವ್ಹಾವ್ ವ್ಹಾವ್! ತುಂಬಾ ಚೆನ್ನಾಗಿದೆ ಈ explanation. ಆದ್ರೆ ಹಾಗೆ ಸುಮ್ನೇ ಇದ್ದುಬಿಟ್ರೆ ಕಡಲಿಗೆ ದಡದ ಪ್ರೀತಿ ಅರ್ಥ ಆಗೋದು ಹ್ಯಾಗೆ ಸುಶ್ರುತಾ..?"


"ಚಂಚಲಚಿತ್ತೆ ಕಡಲಿಗೆ ಅದು ಅರ್ಥ ಆಗೋದೂ... ಹ್ಮ್... ಡೌಟ್‌ಫುಲ್! ಆದ್ರೆ ನೋಡು, ದಡದ್ದು ಪ್ರೀತಿಯೆಡೆಗಿನ ಏಕನಿಷ್ಠೆ. ಅದು ಎಂದಿಗೂ ಚಂಚಲವಾದದ್ದಿಲ್ಲ. ಯಾವತ್ತೂ ಕಡಲು ತನ್ನವಳೂಂತ ಅಂದ್ಕೊಂಡು ಅವಳ ಸಿಹಿ (sorry, ಉಪ್ಪು!) ಮುತ್ತಿಗಾಗಿ ಕಾಯ್ತಾ ಬಿದ್ದುಕೊಂಡಿರೊತ್ತೆ.. ಆದ್ರೆ ಬಹುಶಃ ಕಡಲು ದಡವನ್ನ ಗಾಢವಾಗಿ ಪ್ರೀತೀನೇ ಮಾಡೊಲ್ಲ. ಅದು ಒಂದೇ ದಡಕ್ಕೆ ಎಂದೂ ಅಪ್ಪಳಿಸೊಲ್ಲ.. ಆಗಾಗ ಕೊರೆತ ಉಂಟುಮಾಡಿ ದಡವನ್ನೇ ಸೀಳಿಬಿಡೊತ್ತೆ ಕ್ರೂರಿ ಕಡಲು! ತೀರಾ ಕೋಪ ಬಂದ್ರೆ ಸುನಾಮಿಯಾಗಿ ದಡವನ್ನೇ ಮುಳುಗಿಸಿಬಿಡೊತ್ತೆ!! :D"


"ಏಯ್! ಅದು ಕಡಲಿನ ಪ್ರೀತಿಯ ಪರಾಕಾಷ್ಟೆ ಕಣೋ! :P"


"ಹಹ್ಹ! ಸಾಕು ಸುಮ್ನಿರು :D"


* *

ಅದೊಂದು ರಾತ್ರಿ ಊಟ ಮುಗಿಸಿ, ಉಂಡದ್ದು ಜಾಸ್ತಿಯಾದಂತೆ ಅನ್ನಿಸಿದ್ದರಿಂದ ಒಂದು ಬೀಡಾವನ್ನಾದರೂ ಹಾಕಿಕೊಂಡು ಬರೋಣ ಅಂತ ನಾನೂ-ನನ್ನ ರೂಂಮೇಟೂ ಡೋರ್ ಲಾಕ್ ಮಾಡಿಕೊಂಡು ಹೊರ ಹೊರಟೆವು. ಬೀಡಾ ಹಾಕೋಣಾಂತ ನೋಡಿದರೆ ಬೀಡಾ ಅಂಗಡಿಯವನು ವೀಳ್ಯದೆಲೆ ಖಾಲಿಯಾಗಿದೆ ಅಂದ. ಸರಿ ಅಡಿಕೆ ಪುಡಿಯನ್ನಾದರೂ ತಿನ್ನೋಣ ಅಂತ ಇಬ್ರೂ ಒಂದೊಂದು ರಾಜು ಸುಪಾರಿ ತಗೊಂಡು, ಸ್ಯಾಚೆಟ್ ಒಡೆದು, ಬಾಯಿಗೆ ಹಾಕಿಕೊಂಡೆವು. ಅಷ್ಟರಲ್ಲಿ ಮೊಬೈಲು ಪೀಂಗುಟ್ಟಿತು:

[ನೆನಪಿದ್ದಷ್ಟನ್ನು ಇಲ್ಲಿ ಕೊಟ್ಟಿದ್ದೇನೆ. ನೀವು ಸುಮ್ಮನೇ ಓದಿಕೊಂಡು ಹೋಗಿ. ಅಂದಹಾಗೆ, ಮೊದಲಿಗೆ ನನ್ನೊಂದಿಗೆ ಚಾಟ್ ಮಾಡಿದವರೇ ಬೇರೆ; ಇವರೇ ಬೇರೆ. ಆಯ್ತಾ? ;) ]

"‘ದೇವದಾಸ್’ ಮೂವಿ ನೋಡಿದೆ. ಕೋಯೀ ಕಿಸೀ ಸೇ ಇತನಾ ಪ್ಯಾರ್ ಕರ್ ಸಖತಾ ಹೈ ಕೀ ವೋ ಖುದ್ ಮರ್ ಜಾಯೇ?!"

"ಕರ್ ಸಖತಾ ಹೈ!! ಪ್ರೀತಿ ಅನ್ನೋದು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ಹರಿಯೋ ನದಿ. ಮನುಷ್ಯ ಪ್ರೀತೀಲಿ ಇರೋಷ್ಟು ದಿನ ಆ ನದಿ ನೀರನ್ನೇ ಅವಲಂಭಿಸಿರ್ತಾನೆ. ಈ ಜಗದ ಪ್ರತಿಯೊಂದನ್ನೂ ಆ ಪ್ರೀತಿನದಿಯ ಮೂಲಕವೇ ನೋಡ್ತಿರ್ತಾನೆ. ಆ ನದಿಯ ಮೀನಾಗಿರ್ತಾನೆ. ಆ ನದಿ ಬತ್ತಿ ಹೋದಾಗ, of course, ಅವನು ಸಾಯ್ತಾನೆ!"


"ಪ್ರೀತಿನದಿಯ ನೀರು ಬತ್ತಿ ಹೋದಾಗ ಅವನು ಸಾಯ್ತಾನೆ, ಸರಿ. ಆದ್ರೆ ಆ ನದಿಯ ಒಂದು ಒರತೆ ತಾನು ಹರಿಯುವ ಮುಖವನ್ನು ತಿರುಗಿಸಿದಾಗ ನದಿಯೇ ಬತ್ತಿಹೋಯಿತು ಅಂದುಕೊಳ್ಳುವುದು ಹುಚ್ಚುತನ ಅಲ್ವಾ? ನಾನು ಅದ್ನೇ ಕೇಳಿದ್ದು: ಯಾರನ್ನಾದ್ರೂ ಸಾಯೋಷ್ಟು ಪ್ರೀತ್ಸೋಕೆ ಸಾಧ್ಯಾನಾ ಅಂತ.. ನದಿಯಲ್ಲಿ ಎಷ್ಟೋ ಒರತೆಗಳು ಇರುವಾಗ..?"


"ಕೆಲವೊಂದು ಮೀನುಗಳಿಗೆ ಹಾಗೇ. ಒಂದೇ ಒರತೆಯನ್ನ ತುಂಬಾ ಹಚ್ಚಿಕೊಂಡು ಬಿಡ್ತವೆ.. ಆ ಒರತೆಯ ನೀರ ಸವಿ ಬೇರೆ ಒರತೆಯಲ್ಲಿ ಸಿಗಲಾರದು.. ಒಂದು ನದಿ ಬತ್ತಿತು ಅಂತ ಬೇರೆ ನದಿಗೆ ವಲಸೆ ಹೋಗುವ ‘ಬುದ್ಧಿವಂತ’ ಮೀನುಗಳ ಬಗ್ಗೆ ನನ್ನ ಮಾತಿಲ್ಲ.. ಆದರೆ ಈ ಭಾವುಕ ಮೀನುಗಳಿದಾವಲ್ಲಾ, ಇವು ತಾವು ಪ್ರೀತಿಸಿದ ನೀರ ನದಿ ಬತ್ತುತ್ತಿದ್ದಂತೆ ತಾವೂ.. .."


"ಭಾವುಕ ಮೀನುಗಳು ಈಗ್ಲೂ ಸಿಗ್ತಾವಾ?"


"ಅಯ್ಯೋ! ಸಿಗ್ತಾವಾ ಏನು, ಅಸಂಖ್ಯ ಇದಾವೆ. ಈಗ್ಲೂ ಪ್ರೀತಿ ಕೈ ಕೊಡ್ತು ಅಂತ ದೇವದಾಸ್ ಆಗೋರು ಸಿಕ್ಕಾಪಟ್ಟೆ ಜನ ಇದಾರೆ.."


"ಆದ್ರೆ ಅದು ಹುಚ್ಚುತನ ಅನ್ಸಲ್ವಾ?"


"ದೇವದಾಸ್ ಆಗೋದು ಹುಚ್ಚಿರಬಹುದು.. ಆದ್ರೆ ದೇವದಾಸ್ ತರಹ ಪ್ರೀತಿ ಮಾಡೋದು ಹೇಗೆ ತಪ್ಪಾಗೊತ್ತೆ? ಪ್ರೀತಿ ಮಾಡಿದ್ರೆ ಸಾಯೋಷ್ಟು ಆಳವಾಗಿಯೇ ಮಾಡ್ಬೇಕು. Or, I mean, that is my view. And I’m going to love my girl like that.. ಆದ್ರೆ ಇನ್ನೂ ಸಿಕ್ಕಿಲ್ಲ ಪೋರಿ..! ಎಲ್ಲಿದಾಳೋ? ;) "


"ನಿನಗೆ ನಿನ್ನ ಪೋರಿ ಬೇಗ ಸಿಗ್ಲಿ. ಆದ್ರೂ ಈ ಸಾಯೋಷ್ಟು ಪ್ರೀತಿ ಮಾಡೋದು... ಊಹೂಂ, ಈ conceptಏ ನಂಗೆ ಅರ್ಥವಾಗಲ್ಲ.. :( "


"Thanx for the wish! ಸಾಯೋಷ್ಟು ಅಂದ್ರೆ.. ಅವಳ ಪ್ರೀತಿ ಕೊಳದಲ್ಲಿ ಮುಳುಗಿ ಹೋಗೋದು.. ಅಲ್ಲೇ ಉಸಿರು ಕಟ್ಟಿ....... ಊಹೂಂ, ಸಾಯೋದಿಲ್ಲ, ಪ್ರೀತಿ ಕೊಳ ನೋಡು, ಮೀನು ಬದುಕಿಕೊಂಡು ಬಿಡೊತ್ತೆ..!"


"ನಿಂಗೆ ಒಳ್ಳೇದಾಗ್ಲಿ. ಈ ಜಗತ್ತು ಮೃಗಜಲ.. ಭ್ರಮಾಲೋಕ.. Be careful.."


"ಹಹಾ! ಎಚ್ಚರಿಕೆಗೂ ಥ್ಯಾಂಕ್ಸ್! ಹಾಗಂತ ನೀನು ಈ ಥರದ ಹುಚ್ಚು ಸಾಹಸಕ್ಕೆ ಕೈ ಹಾಕ್ಲಿಕ್ಕೆ ಹೋಗ್ಬೇಡಪ್ಪಾ.. ಸಿಕ್ಕಾಪಟ್ಟೆ ತಾಳ್ಮೆ ಬೇಕು, ತುಂಬಾ ನಂಬಿಕೆ ಬೇಕು, ಸಾಕಷ್ಟು ನಿಷ್ಠೆ ಬೇಕು.. ಅವೆಲ್ಲಾ ಕಷ್ಟಕ್ಕಿಂತ ಯಾವುದಾದರೂ ಒಂದು ಪುಟ್ಟ ಒಲವಿನ ಚಿಲುಮೆಯಲ್ಲಿ ಮಿಂದು ಪಾವನಳಾಗಿಬಿಡು..! That is better, always..! Good Night."


"ಹ್ಮ್.. ಆ ಒಲವ ಚಿಲುಮೆ ಹುಡುಕಿ ಸಿಗುವವರೆಗೆ ಸಧ್ಯಕ್ಕೆ ಇರೋ ನಲ್ಲಿ ನೀರಲ್ಲೇ ಸ್ನಾನ ಮಾಡೋದು.. ಹಹ್ಹ..! ಶುಭರಾತ್ರಿ.."


* *

ಪ್ರಶ್ನೆಗಳು:

೧) ಹುಡುಗಿಯರು ಚಂಚಲಚಿತ್ತೆಯರು, ಹುಡುಗರು ದೃಢಚಿತ್ತರಂತೆ ಹೌದಾ?
೨) ನಾವೇಕೆ ನಾವು ಪ್ರೀತಿಸುವ ಜೀವದ ಬಗ್ಗೆ ಅಷ್ಟೊಂದು possessive ಆಗ್ತೀವಿ?
೩) ದೇವದಾಸ್ ತರಹ ಪ್ರೀತಿ ಮಾಡೋದು ತಪ್ಪಾ?
೪) ಒಂದು ಪ್ರೀತಿಕೊಳ ಬತ್ತಿ ಹೋದಕೂಡಲೇ ಮತ್ತೊಂದು ಕೊಳಕ್ಕೆ ಈಜಿ ಹೋಗಿಬಿಡುವುದು ಸರಿಯಾ?

[ಇನ್ನೂ ಬಹಳಷ್ಟು ಪ್ರಶ್ನೆಗಳಿವೆ, ಸಧ್ಯಕ್ಕೆ ಇಷ್ಟು ಸಾಕು. :-)]

ಇನ್ನು ನೀವ್ನೀವು ಹೊಡೆದಾಡಿಕೊಳ್ಳಿ. ನನಗಂತೂ ಉತ್ತರಗಳು ಗೊತ್ತಿಲ್ಲ. ಏನೇ ಹೊಡೆದಾಡಿಕೊಂಡರೂ ಕೊನೆಯಲ್ಲಿ ಒಂದು conclusionಗೆ ಬರಲಿಕ್ಕೆ try ಮಾಡಿ. All the best!!!

10 comments:

ಶ್ಯಾಮಾ said...

"ದಡಾನೆ ಎದ್ದು ಕಡಲಿಗೆ ಮುತ್ತು ಕೊಡ್ಲಿಕ್ಕೆ ಹೋದ್ರೆ ಕಡಲು ಉಳಿಯೋಲ್ಲ"
ಹೀಗಾದ್ರೆ " ತನ್ನ ಪಾಡಿಗೆ ತಾನು ಮುತ್ತು ಕೊಡಿಸ್ಕೊಂಡು" ಇದ್ಬಿಟ್ರೆ
"ದಡ ಕಡಲನ್ನ ತುಂಬಾ ತುಂಬಾ ಪ್ರೀತ್ಸೊತ್ತೆ" ಅಂತ ಕಡಲಿಗೆ ಗೊತ್ತಾಗೋದಾದ್ರು ಹೇಗೆ??

" ಯಾವತ್ತೂ ಕಡಲು ತನ್ನವಳೂಂತ ಅಂದ್ಕೊಂಡು ಅವಳ ಸಿಹಿ (sorry, ಉಪ್ಪು!) ಮುತ್ತಿಗಾಗಿ ಕಾಯ್ತಾ ಬಿದ್ದುಕೊಂಡಿರೊತ್ತೆ.."
ಇದು ಕಡಲಿಗೆ ದಡದ ಮೋಸ ಅಲ್ವಾ?
ಪ್ರೀತಿ ಇರೋದೆ ಹೌದಾದ್ರೆ ಹೇಳೋಕೆ ಏನು ಕಷ್ಟ? :-)

ಇರೋ ಪ್ರೀತಿನಾ ಹೇಳಲಾರೆನೆಂಬ ದಡದ ದೃಢಚಿತ್ತಕ್ಕಿಂತ ಕಡಲಿನ ಚಂಚಲತೆಯೇ ಎಷ್ಟೋ ವಾಸಿ.

"ಭಾವುಕ ಮೀನುಗಳು ಈಗ್ಲೂ ಸಿಗ್ತಾವಾ?" :(
"ಅಯ್ಯೋ! ಸಿಗ್ತಾವಾ ಏನು, ಅಸಂಖ್ಯ ಇದಾವೆ." :-)

ಪ್ರಶ್ನೋತ್ತರ ಸಮಯ :-)

೧) ಹುಡುಗಿಯರು ಚಂಚಲಚಿತ್ತೆಯರು, ಹುಡುಗರು ದೃಢಚಿತ್ತರಂತೆ ಹೌದಾ?
ಉ: ಹುಡುಗಿಯರು ಚಂಚಲಚಿತ್ತೆಯರು-> ಹೌದು
ಹುಡುಗರು ದೃಢಚಿತ್ತರಂತೆ ಹೌದಾ? --> ಗೊತ್ತಿಲ್ಲಪ್ಪಾ
೨) ನಾವೇಕೆ ನಾವು ಪ್ರೀತಿಸುವ ಜೀವದ ಬಗ್ಗೆ ಅಷ್ಟೊಂದು possessive ಆಗ್ತೀವಿ?
ಉ:ಈ ಪ್ರಶ್ನೆಗೆ ಬಹಳ ದಿನಗಳಿಂದ ಉತ್ತರ ಹುದುಕಿ ಹುಡುಕಿ,ಸಾಕಷ್ಟು R&D ಮಾಡಿ , ಗೊತ್ತಿದ್ದವರನ್ನೆಲ್ಲಾ ಕೇಳಿ ಉತ್ತರ ಕೊನೆಗೂ ಸಿಗದೆ ಸೋತಿದ್ದೇನೆ. ಇಲ್ಲಾದರೂ ಉತ್ತರ ಸಿಗಬಹುದೇನೋ

೩) ದೇವದಾಸ್ ತರಹ ಪ್ರೀತಿ ಮಾಡೋದು ತಪ್ಪಾ?
ಉ:ತಪ್ಪೆನಿಸಿದರೆ ತಪ್ಪು ಇಲ್ಲಾಂದ್ರೆ ಇಲ್ಲ.. ಇದು ಅವರವರ ಪ್ರೀತಿಯ definition ಮೇಲೆ ಅವಲಂಭಿಸಿದ್ದು :-)

೪) ಒಂದು ಪ್ರೀತಿಕೊಳ ಬತ್ತಿ ಹೋದಕೂಡಲೇ ಮತ್ತೊಂದು ಕೊಳಕ್ಕೆ ಈಜಿ ಹೋಗಿಬಿಡುವುದು ಸರಿಯಾ?
ಉ:ಗೊತ್ತಿಲ್ಲ ಅಥವ ಯೋಚಿಸಿಲ್ಲ ಅಥವ ಸಲ್ಪ confusion

ಮನಸ್ವಿನಿ said...


"ಇನ್ನು ನೀವ್ನೀವು ಹೊಡೆದಾಡಿಕೊಳ್ಳಿ. ನನಗಂತೂ ಉತ್ತರಗಳು ಗೊತ್ತಿಲ್ಲ. ಏನೇ ಹೊಡೆದಾಡಿಕೊಂಡರೂ ಕೊನೆಯಲ್ಲಿ ಒಂದು conclusionಗೆ ಬರಲಿಕ್ಕೆ try ಮಾಡಿ. All the best!!! "


ಆಹಾಹ...ಓದಿ , ಸ್ಪಂದಿಸುವವ್ರಿಗೆ ಈ ತರ ಹೇಳೋ ಜಾಣ ಸುಶ್ರುತ... ಬರಹ ಚೆನ್ನಾಗಿದೆ.

ನಾನು invigilator ಮತ್ತೆ ನಿಮ್ಮ ಪೇಪರ್ಸ correct ಮಾಡುವವಳು. ಎಲ್ಲರು ಚೆನ್ನಾಗಿ ಉತ್ತರ ಬರೆಯಿರಪ್ಪ :)

ರಂಜನಾ ಹೆಗ್ಡೆ said...

ಸುಶ್,
ಎರೆಡು ಚಾಟ್ ಗಳು ತುಂಬಾ ಚನಾಗಿದೆ.
ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಅವರವರ ಭಾವಕ್ಕೆ ಅವರವರ ಭಕ್ತಿಗೆ ಅಂತ ಬಿಟ್ಟು ಬಿಡುವುದು ಒಳ್ಳೆದು.
ಎಲ್ಲಾ ಕಡೆ ಈ ಪ್ರೀತಿ ಪ್ರೇಮ ಅದರ ನೋವು ನಿರಾಶೆ ಇವುಗಳ ಬಗ್ಗೆ ಚರ್ಚೆ ಮಾಡಿ, ವಾದ ಮಾಡಿ, ಜಗಳ ಮಾಡಿ,life ಲ್ಲಿ ಸುಸ್ತಾಗಿ ಹೋಗಿದ್ದಿನಿ.
ಇರಲಿ ಆದರೂ ನಿನ್ನ ಪ್ರೆಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ...
೧.ಹುಡುಗೀಯರು ಚಂಚಲ ಚಿತ್ತೆಯರು 100% ನಿಜ. ಆದರೆ ಪ್ರೀತಿ ಪ್ರೇಮದ ವಿಷಯದಲ್ಲಿ ಯಾರು ತಮ್ಮ ಪ್ರೇಮಿಯ ಬಗ್ಗೆ ತುಂಬಾ ಪ್ರೀತಿ ಇಟ್ಕೊಂಡು ಇರ್ತಾರೋ ಅವರಿಗೆ ಈ ಚಂಚಲತೆ ಹೆಚ್ಚು ಇರುತ್ತೆ it may be ಹುಡುಗಾ or ಹುಡುಗಿ.

೨. ಈ possessiveness ಯಾವಾಗ ತುಂಬಾ ಬರುತ್ತೆ ಅಂದ್ರೆ insecurity ಇದ್ದಾಗ, ತಮ್ಮ ಪ್ರೇಮಿಯ ಬಗ್ಗೆ ನಂಬಿಕೆ ಕಮ್ಮಿ ಇದಾಗ, ತಮ್ಮ ಪ್ರೇಮಿ ಅತಿಯಾದ ಮುಗ್ದೆ/ಮುಗ್ದ ತುಂಬಾ ಒಳ್ಳೆಯವಳು/ನು ಅವಳ/ಅವನ ನ್ನು ಬೇರೆಯವರು misuse ಮಾಡಿಕೊಂಡಾರು ಎಂಬ ಹೆದರಿಕೆ ಇದ್ದಾಗ ಬರುತ್ತೆ.

೩. ಹೌದು ದೇವದಾಸ ತರ ಪ್ರೀತಿ ಮಾಡೋದು ತಪ್ಪು ತಪ್ಪು ತಪ್ಪು.

೪. ಇಲಾ ಒಂದು ಪ್ರೀತಿ ಕೊಳ ಬತ್ತಿ ಹೋದ ಕೂಡಲೇ ಮತ್ತೊಂದುಕೊಳಕ್ಕೆ ಈಜಿ ಹೋಗದು ತಪ್ಪು. ಈ ಕೊಳ ಬತ್ತಿ ಹೋದ ಹಾಗೆ ಆ ಕೊಳಾನು ಬತ್ತಿ ಹೋದರೆ ಸುಮ್ನೆ ಜೀವನದ ಬಗ್ಗೆ ನಂಬಿಕೆನೇ ಹೋಗಿ ಬಿಡುತ್ತೆ. ಜೀವನ ಮತ್ತೆ ನರಕ ಆಗುತ್ತೆ. ಅದಕ್ಕೆ ಜೀವನದಲ್ಲಿ risk ತೆಗೆದು ಕೊಳ್ಳದೇ safere side ನಲ್ಲಿ ಇರದು ಒಳ್ಳೆದು.

Kiran said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

JOMON said...

ಎಂಥ ಮಾರಾಯರೆ..ಮೊದಲು ಕಡಲು ಮತ್ತು ದಡದ ಮುತ್ತಿನ ಬಗ್ಗೆ ಹೇಳಿದಿರಿ.. ನಂತರ ಪಾನ್ ಬೀಡಾ ಹಾಕಲು ಹೋದ್ರಿ.. ಎಲ್ಲಿಗೆ ಕರ್‌ಕೊಂಡು ಹೋಗ್ತಾ ಇದಾರೆ ಅಂದ್ರೆ ಮತ್ತೆ ದೇವ್‌ದಾಸ್‌ನ ಕಥೆ ಪ್ರಾರಂಭ ಮಾಡಿದಿರಿ..

ಕೊನೆಯಲ್ಲಿ ಓದುಗರಿಗೆ ಪ್ರಶ್ನೆ ಕೇಳೊದಾ? ಪರವಾಗಿಲ್ಲ ಸ್ವಾಮಿ... ಇನ್ನೂ ಬಹಳಷ್ಟು ಪ್ರಶ್ನೆಗಳಿವೆ, ಸಧ್ಯಕ್ಕೆ ಇಷ್ಟು ಸಾಕು ಅಂತ ಹೇಳಿದ್ದರಿಂದ ನಾವು ಸದ್ಯ ಬಚಾವಾಗಿದಿವಿ..

ಉತ್ತರ ಬಹಳ ಇದೆ..ಸಮಯ ಸಿಕ್ಕಿದಾಗ ಬರಿತೀನಿ..

ಇಡಿ ಲೇಖನದಲ್ಲಿ ನನಗಿಷ್ಟವಾದ ವಾಕ್ಯ. "ದಡ gives protection to ಕಡಲು"


ಬರವಣಿಗೆ ಚೆನ್ನಾಗಿದೆ...

ಜೋಮನ್ ವರ್ಗೀಸ್
http://www.jomon-malehani.blogspot.com/

Sree said...

ಚುಟುಕ ಚೆನ್ನಾಗಿದೆ, ಪೋಸ್ಟ್ ಕೂಡ(ಇದರಿಂದ ಹೀಗೇ ಸುಮ್ಮ್ನೆ ನಾನೂ ಗೀಚೋ ಅಷ್ಟು inspiring ಆಗಿದೆ!)
ಪ್ರಶ್ನೆಗಳು...ಮೊದಲ್ನೇದಕ್ಕ್ ಉತ್ತರ ಬರಿಯೋಕೆ ಹೋಗಲ್ಲ, I have nothing fresh to say there...
ಎರಡ್ನೇದು - ಅದು ಪ್ರೀತಿ ಆಗಿನ್ನೂ ಕಣ್ಣ್ಬಿಡ್ತಿರುವಾಗಿನ್ ಪರಿಸ್ಥಿತಿ ಅಲ್ಲ್ವ? ಅದನ್ನ್ ಮೀರಿ ಬೆಳೆಯೋ ಪ್ರೀತಿ ೪ ನೇ ಪ್ರಶ್ನೆಗೆ ಉತ್ತರ! ನನಗನ್ನಿಸೋ ಹಾಗೆ ಸರೀಗೆ ಗಟ್ಟಿಯಾಗಿ ಒಂದ್ಸಲ ಪ್ರೀತಿಸ್ಬಿಟ್ಟ್ರೆ ಅದು ಬತ್ತೋದಿಲ್ಲ, ಭಾವ, ಬಣ್ಣ ಬದಲಾಗಬಹುದಷ್ಟೆ?:)

ಶಾಂತಲಾ ಭಂಡಿ said...

ಪಾಠ ಚೊಲೋ ಇದ್ದು.
ಪರೀಕ್ಷೆಯಲ್ಲಿ ಬಂದ ಪ್ರಶ್ನೆಗೆ ಉತ್ತರ ಎಲ್ಲ ಪಾಠದಲ್ಲಿ ಇದ್ರೆ ಬರಿತಿದ್ದಿ. ಹಿಂಗೆ ನಾನೇ ಆಲೋಚನೆ ಮಾಡ್ಕ್ಯಂಡು ಉತ್ತರ ಹೇಳಲ್ಲೆ ಇದು ಕಷ್ಟ. ಈ ಪರೀಕ್ಷೆಯಲ್ಲಿ ಫೇಲ್ ಆದ್ರೂ ಉತ್ತರ ಬರೆಯ ಸಹವಾಸ ಬೇಡ ಅನಿಸ್ತಾ ಇದ್ದು ಪುಟ್ಟಣ್ಣ. ಸಿಕ್ಕಾಪಟ್ಟೆ ಟಫ್ ಇದ್ದು ಕೊಷ್ಚನ್ ಪೇಪರ್!!

ಜಗಲಿ ಭಾಗವತ said...

ಪುಟ್ಟಣ್ಣಾ,

"ಇನ್ನು ನೀವ್ನೀವು ಹೊಡೆದಾಡಿಕೊಳ್ಳಿ. ನನಗಂತೂ ಉತ್ತರಗಳು ಗೊತ್ತಿಲ್ಲ."....ನೀನು 'ಕಲಹಪ್ರಿಯ' ನಾರದ ಮುನಿಯಾಗಿದ್ದು ಯಾವಾಗ ?:-)

ಹುಡುಗಿಯರು ಚಂಚಲಚಿತ್ತೆಯರು ಅಂದ್ರೆ ಏನು? ಸಂದರ್ಭ ಸಹಿತ, ಸೋದಾಹರಣವಾಗಿ ವಿವರಿಸಿ..
ಅವ್ರು ಬೆಳಿಗ್ಗೆ ಒಬ್ರನ್ನ, ಮಧ್ಯಾಹ್ನ ಇನ್ನೊಬ್ರನ್ನ, ಸಂಜೆ ಮತ್ತೊಬ್ರನ್ನ ಇಷ್ಟ ಪಡ್ತಾರೆ ಅಂತಾನ? ತುಂಬ complicated-ಆಗಿದೆ ಇದು :-)

La..Na.. said...

ಸೂಪರ್ ಚಾಟ್ಸು...
ಭಲೇ ಭಲೇ.... ಚೆನ್ನಾಗಿ ಬರೆದಿದ್ದೀರಿ

Sridhar said...

Namaskara Sushrutha avre,
kadalu...dada concept sikk sikkapaTTe chennagidhe...oLLe chat -u... :-)

paan beeDa prashnegaLige nanage tochiddanna heLtheeni.
1)ಹುಡುಗಿಯರು ಚಂಚಲಚಿತ್ತೆಯರು, ಹುಡುಗರು ದೃಢಚಿತ್ತರಂತೆ ಹೌದಾ?.
-hangenilla...it depends.

2)ನಾವೇಕೆ ನಾವು ಪ್ರೀತಿಸುವ ಜೀವದ ಬಗ್ಗೆ ಅಷ್ಟೊಂದು possessive ಆಗ್ತೀವಿ?
-preetisuva jeevada bagge possessive aagirodu prakruthi niyama...

3)ದೇವದಾಸ್ ತರಹ ಪ್ರೀತಿ ಮಾಡೋದು ತಪ್ಪಾ?
-khanditha tappalla...when u love someone love deeply and truly ;-)

4)ಒಂದು ಪ್ರೀತಿಕೊಳ ಬತ್ತಿ ಹೋದಕೂಡಲೇ ಮತ್ತೊಂದು ಕೊಳಕ್ಕೆ ಈಜಿ ಹೋಗಿಬಿಡುವುದು ಸರಿಯಾ?
-preethikoLa endigoo battihogalla...