ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತೇನೆ: ನನ್ನ ಸ್ನೇಹಿತರ ಸಂಖ್ಯೆ ಹೆಚ್ಚಾಗಿದ್ದು ಇಂಟರ್ನೆಟ್ಟಿನ ಕೃಪೆಯಿಂದ! ನಾನೇನಾದರೂ 'ನೆಟ್ಟಿಗ'ನಾಗದೇ ಉಳಿದಿದ್ದರೆ ಅದೆಷ್ಟು ಚಿಕ್ಕ ಲೋಕದಲ್ಲಿರುತ್ತಿದ್ದೆನೋ ಎಂದು ಯೋಚಿಸಿದಾಗ ದಿಗ್ಭ್ರಾಂತಿಯೂ ಜತೆಗೇ ಹಿತಾನುಭವವೂ ಆಗುತ್ತದೆ. ಎಲ್ಲೋ ಯಾರೋ ತೋರಿಸಿಕೊಟ್ಟರು: ಜಿ-ಮೇಲು ಅಂತ ಬಂದಿದೆ ನೋಡು.. ಚನಾಗಿದೆ.. ಒಂದು ಅಕೌಂಟ್ ಕ್ರಿಯೇಟ್ ಮಾಡ್ಕೋ, ನಾನು ಇನ್ವಿಟೇಶನ್ ಕಳುಹಿಸ್ತೀನಿ ಅಂತ.. ಜಿ-ಮೇಲಿನಿಂದ ಆರ್ಕುಟ್ಟು, ಅದಾದಮೇಲೆ ಬ್ಲಾಗು ಎಲ್ಲಾ ಗೊತ್ತಾಯ್ತು.. ತೆರೆದದ್ದಾಯ್ತು, ಬರೆದದ್ದಾಯ್ತು.. ಯಾರ್ಯಾರೋ ನಾನು ಬರೆದದ್ದನ್ನೆಲ್ಲ ಓದಿ, ಕಂಡು ಕೇಳರಿಯದ ಲೋಕಗಳಿಂದೆಲ್ಲ ಫ್ರೆಂಡ್ ರಿಕ್ವೆಸ್ಟುಗಳು ಬರತೊಡಗಿದವಲ್ಲ..? ಯಾರ್ಯಾರೋ ನನಗೆ ಫ್ಯಾನಂತೆ, ಯಾರಿಗೋ ನನ್ನ ಮೇಲೆ ಕ್ರಶ್ಶಂತೆ... ಆಹ್! ಇದೇನಾಗಿ ಹೋದೆ ನಾನು ಅಂತ ನನಗೇ ಒಮ್ಮೊಮ್ಮೆ ಯೋಚನೆಯಾಗುತ್ತದೆ!
ಇಂಟರ್ನೆಟ್ಟಿನಲ್ಲೇ ಎಷ್ಟೊಂದು ಮಂದಿ ಪರಿಚಯವಾಯ್ತು.. ಸಿಕ್ಕ ಅಕ್ಕಂದಿರು, ಪ್ರೀತಿ ತಂಗಿಯರು, 'ಏಕವಚನದಲ್ಲಿ ಕರೆಯೋ' ಎಂದವರು, ಹೆಸರೇ ಹೇಳದೇ ಕಾಡಿದವರು, ಸುಳ್ಳೇ 'ನೀನಿಷ್ಟ' ಎಂದವರು... ಓಹ್! ಇಂಟರ್ನೆಟ್ಟಿನಲ್ಲೇ ಪ್ರೀತಿ, ಪ್ರಪೋಸಲ್ಲು, ಮೋಸ, ವಿರಹ, ಜಗಳ, ಶಾಪ, ದ್ವೇಷ, ಹಪಹಪಿ... ಎಲ್ಲವನ್ನೂ ನೋಡಿದ್ದಾಯ್ತು. ಏನೆಲ್ಲ ಮಾಡಿದ್ದಾಯ್ತು.
ಬರೆದದ್ದನ್ನೆಲ್ಲ ಸುಮ್ಮನೆ ಮುಚ್ಚಿ ಬಚ್ಚಿಡುತ್ತಿದ್ದ ನನ್ನಂಥವರಿಗೆ ಬ್ಲಾಗುಗಳು ತೆರೆದಿಟ್ಟ ಲೋಕ ನಿಜಕ್ಕೂ 'ಕೃತಜ್ಞತಾವರ್ತ್'. ಆದರೆ ಹೀಗೆ ಬರೆದುಕೊಳ್ಳುತ್ತಿರುವ ನಾವು, ನಮ್ಮಲ್ಲೆಷ್ಟೋ ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನಮ್ಮ ಪುಸ್ತಕ 'ಚಿತ್ರಚಾಪ'ವನ್ನ ಪ್ರಕಟಿಸಿತ್ತಲ್ಲ, 'ಪ್ರಣತಿ ಪ್ರಕಾಶನ', ಹಾಂ ಅದು, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, 'ವಿಶ್ವಕನ್ನಡ'ದ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಪ್ರೀತಿಯಿಂದ,
-ಸು
9 comments:
ನನಗೂ ಈ 'ಜಾಲ'ದೊಳಗೆ ಕಾಲಿಡುವ ಮೊದಲು ಇದರ ಹರವು ಇಷ್ಟಿದೆ ಎಂಬ ಕಲ್ಪನೆಯೂ ಇರಲಿಲ್ಲ. ನಮ್ಮನ್ನು ನಾವು ತೆರೆದಿಡಲು ರೂಪುಗೊಂಡ ಹೊಸ ಲೋಕ ಇದು. ನಮ್ಮ ಹೆಸರಿಗಿಂತ ಬ್ಲಾಗ್ ಹೆಸರಲ್ಲಿ ಪರಿಚಿತರಾಗುದರಲ್ಲೇ ಒಂದು ಹಿತವಿದೆ.
ಆದರೂ ಒಮ್ಮೆ ಭೇಟಿಯಾದರೆ ಒಳ್ಳೆಯದು ತಾನೇ?
ಮುಂದಿನ ಭಾನುವಾರ ಎಲ್ಲರೂ ಒಟ್ಟಾಗೋಣ..
ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು, ಕಾರ್ಯಕ್ರಮಕ್ಕೆ ಶುಭಾಶಯಗಳು.
ಈಗ ನೀವೆಲ್ಲ ಒಟ್ಟಾಗಿ, ಹರಟೆ ಹೊಡೆದು, ಕಾಪಿ ಕುಡಿದು, ಸ್ನೇಹದ ಚಾದರ ಹರಡಿ. ನಮ್ಮನ್ನು ನಿಮ್ಮ ನೆನಪುಗಳಲ್ಲಿ ಅಲ್ಲಿರಿಸಿಕೊಳ್ಳಿ.
ಮತ್ತೊಮ್ಮೆ ಜುಲಾಯಿ ಕೊನೆ ವಾರದಲ್ಲಿ ಪುನಃ ಒಟ್ಟಾಗುವ ಹಾಗಿದ್ದರೆ, ನಾವು ಕೆಲವು "ಪರದೇಶಿ"ಗರೂ ಸೇರಬಹುದೇನೋ. ನಮಗಂತೂ ಆಸೆಯಿದೆ. ನೆರವೇರಿಸುತ್ತೀರೋ, ನೋಡಿ.
ನಿಮ್ಮ ಪರಸ್ಪರ ಭೇಟಿ ಕಾರ್ಯಕ್ರಮಕ್ಕೆ ಪೂರಕವಾಗಿ ನಾನು ನನ್ನ ಬ್ಲಾಗಿನಲ್ಲಿ ಸುಮಾರು ಇನ್ನೂರರಷ್ಟು ಕನ್ನಡ ಬ್ಲಾಗ್‍ಗಳನ್ನು ಲಿಂಕಿಸಿದ್ದೇನೆ. ನಿಮಗೆ ಉಪಯೋಗಬಹುದು. ಧನ್ಯವಾದಗಳು.http://banadi.blogspot.com/
ಬಾನಾಡಿ
ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟು ಒಂದು ವಾರವಾಯಿತು ಅಷ್ಟೆ. ಇನ್ನು ಅಂಬೆಗಾಲಿಡುತ್ತಿದ್ದೇನೆ. ಇದರ ಅಗಾಧತೆ ಕಂಡು ಆಶ್ಚರ್ಯವಾಗುತ್ತಿದೆ.
ನಾನು ಆದಿತ್ಯವಾರಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ.
hi sushrutha,namaskaara. nimma blog channageede. good work.. keep it up.i will also try to attend the meet on on sunday.
Namasthe,
Thanks for inviting me for the meet.
ನಮಸ್ಕಾರ
ನಮ್ಮ ಬಳಗದವರನ್ನು ಆಹ್ವಾನಿಸಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು
ಎಲ್ಲರಿಗು ಖುದ್ದಾಗಿ ತಿಳಿಸಿದ್ದೇನೆ.. ಕೆಲವರಿಗೆ ಕೆಲಸದ ಒತ್ತಡದ ಕಾರಣಕ್ಕೆ ಹಾಜರ್ ಆಗಲು ಸಾಧ್ಯವಾಗದಿರಬಹುದು.. ನಮ್ಮ ಬಳಗದ ವತಿಯಿಂದ ನಾನು ಬರಲು ಪ್ರಯತ್ನಿಸುತ್ತೇನೆ.
ನಮ್ಮ ಬಳಗದಲ್ಲಿ ತಾವು ಬರಿಯ ಬಹುದು.
ಅಂತರ್ಜಾಲದಲ್ಲಿ ಮತ್ತೋರ್ವ ಕನ್ನಡಿಗ ...
ಆದಿತ್ಯ
ಅಣ್ಣ ನಾನು ಬರ್ತೀನಿ...
Namste susrutha ravare........tamma ahvanakke tamage krutajnathegalu...badukina janjatagalinda kaleda kelavu dinagalinda antarjala lokakke badiralilla......nimma ahvana nodida mele baleyolage sikka meeninante oddadiddu sullalla......prapancha chikkadide,yavagaladaromme kanditha bettiyagona....nimma ahvanakke nanna abinandanegalu..........
Post a Comment