Tuesday, April 15, 2008

ಯುಗಾದಿಯ ಬೆಳಗು

ಚೈತ್ರದ ಸೊಬಗನು ನೋಡುವ ತೆವಲಿಗೆ
ರವಿ ಬಲಿಯಾಗಿಹ ಮೂಡಣದಿ
ರಸಮಯ ಹೂವಿನ ಕರೆ ನೆನಪಾಗಿ
ಭ್ರಮರಕೆ ಎಚ್ಚರ ಗೂಡಿನಲಿ.

ಬಾನಾಡಿಗೆ ಮಧುಮಾಸದ ಸಂಭ್ರಮ;
ರೆಕ್ಕೆಯ ಬಡಿದವು ತಾಡಣದಿ
ವಲ್ಲರಿ ವಲ್ಲಿಯ ಸುತ್ತಿಹ ವಲ್ಲಭ-
ರೂಪಕವಾಗಿಹ ಮರಗಳಲಿ.

ಕೋಗಿಲೆ ಕೊರಳಿಗೂ ವಸಂತ ಲಗ್ಗೆ;
'ಕಿವಿ ಮೈಮರೆತಿದೆ' ಕೂಜನದಿ!
"ಎನ್ನಯ ಕೊಳಲಿಗೂ ಬೇಡಿಕೆಯಿಲ್ಲ"-
ಹರಿ ನಿಡುಸುಯ್ದನು ರಾಧೆಯಲಿ!

ಮಾವಿನ ಚಿಗುರೂ ಬೀರುತಲಿಹುದು
ಯುಗಾದಿ ಪರಿಮಳ ತೋರಣದಿ
ಇಬ್ಬನಿ ಹನಿಯು ಮೊಡವೆಯಾಗಿದೆ
ಗುಲಾಬಿ ಹೂವಿನ ಕೆನ್ನೆಯಲಿ.

ನಮ್ಮನೆ ಒಳಗೂ ಬಂದಿದೆ ಹಬ್ಬ
ಅಮ್ಮನ ಹೋಳಿಗೆ ಹೂರಣದಿ
ಬೇವಿನ ಜತೆಗೆ ಬೆಲ್ಲವ ಮೆಲ್ಲುತ
ಮೆಲ್ಲಡಿಯಿಡುವೆ ಸರ್ವಧಾರಿಯಲಿ.

[ಯುಗಾದಿ ಹಬ್ಬದ ದಿನ ಊರಲ್ಲಿ ಬರೆದದ್ದು.]

16 comments:

ಅಹರ್ನಿಶಿ said...

ಹಾಯ್,
ಬಹಳ ಚೆನ್ನಾಗಿದೆ.ಆಹಾ ಎ೦ತಹ ಕಲ್ಪನೆ,ಇ೦ತಹ ವಾತಾವರಣವನ್ನ ಆಸ್ವಾದಿಸುವ,ಕಲ್ಪಿಸುವ,ಬರೆಯುವ,ಚಿತ್ರಿಸುವ ಅವಕಾಶ ನಿಮಗೆ ಸಿಕ್ಕಿದೆ,ನಿಮ್ಮ ಮನೆಯಲ್ಲಿ,ಯುಗಾದಿ ಹಬ್ಬದಲ್ಲಿ,ಅಮ್ಮನ ಹೂರಣದಲ್ಲಿ,ಕೋಗಿಲೆಯ ಕೊರಳಲ್ಲಿ.

ಇಬ್ಬನಿ ಹನಿಯು ಮೊಡವೆಯಾಗಿದೆ
ಗುಲಾಬಿ ಹೂವಿನ ಕೆನ್ನೆಯಲಿ.

ಹೌದು ಬೇವು ಬೆಲ್ಲ ಯುಗಾದಿ ಸ೦ಭ್ರಮ ನೋವು ನಲಿವು ಬಾಳಿನಲಿ ಸಮ ಸಮ.

ಆಫ್ರಿಕಾದ ನನ್ ಕಥೆ ಕೇಳಿ ಯುಗಾದಿಗೆ ಬೇವು ಬೆಲ್ಲ ತಿನ್ನಲೇಬೇಕು ಅನಿಸ್ತು.ಬೆಲ್ಲ ಏನೋ ಸುಲಭವಾಗಿ ಸಿಕ್ತು,ಆದ್ರೆ...ಬೇವು ಹುಡುಕಿದೆ,ಹಲವು ಮಿತ್ರರಿಗೆ ಫೋನಾಯಿಸಿದೆ ಸಿಗಲಿಲ್ಲ.ಬೇವಿನ ಗಿಡ ಎಲ್ಲಿದೆ ಅ೦ತ ಯಾರಿಗೂ ತಿಳಿಯದು.ಆದ್ರು ಮನಸ್ಸು ಕೇಳಲಿಲ್ಲ.ಸ್ನೇಹಿತರೊಬ್ಬರು ಹೇಳಿದ ಜಾಗಕ್ಕೆ ಇಪ್ಪತ್ತು ಕಿ.ಮೀ ಡ್ರೈವ್ ಮಾಡಿಕೊ೦ಡು ಹೋಗಿ ಕೊನೆಗೂ ಬೇವನ್ನ ತ೦ದೆ.ಬೇವು ಸಿಕ್ಕ ಖುಶಿಗೆ ನನ್ನಾಕೆಯ ಅಳಿದುಳಿದ ಜೀವನದ ಕಹಿಯೆಲ್ಲ ಮಾಯ.ಮೂರ್ನಾಲ್ಕು ಮಿತ್ರರನ್ನು ಆಹ್ವಾನಿಸಿ ಬೇವು ಬೆಲ್ಲ ಹ೦ಚಿ, ಒಬ್ಬಟ್ಟು ಮಾಡಲಾಗದಿದ್ದರೂ ಪಾಯಸದಲ್ಲೇ ಖುಶಿಪಟ್ಟೆವು ಸರ್ವಧಾರಿ ಸ೦ವತ್ಸರವನ್ನ.

ಶ್ರೀನಿಧಿ.ಡಿ.ಎಸ್ said...

aahaa!:) ksn in making:D

ರಂಜನಾ ಹೆಗ್ಡೆ said...

ಆಹಾ ಸಕತ್ ಆಗಿ ಬರೆದ್ದಿದ್ದಿರಾ ಸುಶ್ರುತ ರವರೆ.
ಇಬ್ಬನಿ ಹನಿಯು ಮೊಡವೆಯಾಗಿದೆ
ಗುಲಾಬಿ ಹೂವಿನ ಕೆನ್ನೆಯಲಿ.
ಎಂತಾ ಹೋಲಿಕೆ ಸುಪರ್. ತುಂಬಾ ದಿನಾ ಆಗಿತ್ತು ಇಂತಾ ಕವನ ಓದಿ.

Sushrutha Dodderi said...

ಅಹರ್ನಿಶಿ,

ಆಫ್ರಿಕಾದ ಕಾಡಿನಲ್ಲಿ ಬೇವಿಗಾಗಿ ಪರದಾಡಬೇಕಾಯ್ತು ಎಂದರೆ ಆಶ್ಚರ್ಯ!
ಆಹಾ, ಎಷ್ಟ್ ಚನಾಗ್ ಹೇಳಿದ್ರಿ: "ಬೇವು ಸಿಕ್ಕ ಖುಶಿಗೆ ನನ್ನಾಕೆಯ ಅಳಿದುಳಿದ ಜೀವನದ ಕಹಿಯೆಲ್ಲ ಮಾಯ"
ಸೋ ನೈಸ್... ಥ್ಯಾಂಕ್ಸ್..

ಶ್ರೀನಿಧಿ,
ಥೋ ಸುಮ್ನಿರು ಮಾರಾಯಾ.. :D

ರಂಜನಾ,
ಧನ್ಯವಾದ ರಂಜನಾ ಅವರೇ!

ಸುಪ್ತದೀಪ್ತಿ suptadeepti said...

ವಾವ್, ವಾವ್... ಸುಶ್ ಸೊಗಸಾಗಿದೆ.

"ವಲ್ಲರಿ ವಲ್ಲಿಯ ಸುತ್ತಿಹ ವಲ್ಲಭ-
ರೂಪಕವಾಗಿಹ ಮರಗಳಲಿ."

""ಎನ್ನಯ ಕೊಳಲಿಗೂ ಬೇಡಿಕೆಯಿಲ್ಲ"-
ಹರಿ ನಿಡುಸುಯ್ದನು ರಾಧೆಯಲಿ!"

ಈ ಸಾಲುಗಳು ತುಂಬಾ ಹಿಡಿಸಿದವು.
"ಸರ್ವಧಾರಿ"ಯೊಂದಿಗೆ ಪುಟ್ಟ ಕವಿಯೊಬ್ಬ ಕಾವ್ಯಸೀಮೆಗೆ ಅಡಿಯಿರಿಸಿದ, ಅನ್ನಲೆ?

Jagali bhaagavata said...

ಅಭಿಮಾನಿಯರು ಓಡೋಗ್ತಾರೆ ಅಂದಿದ್ದೆ, ಅಮ್ಮನ ಹೋಳಿಗೆ ಹೂರಣ ಎಲ್ಲ ಹೊರಗೆ ಬಂತು :-))

Unknown said...

ಓಹೋ!
ಲಯದ ಬಂಧದಲ್ಲಿ ಬರೆದ ಪದ್ಯವನ್ನ ಓದೋದೇ ಒಂದು ಖುಷಿ. ನಮ್ಮೂರಿನವರಿಗೆ ಯಕ್ಷಗಾನದಿಂದ ಆದ ದೊಡ್ಡ ಲಾಭ ಇದೇ ಏನೋ.
ತಿಂಗಳಿಗೊಮ್ಮೆಯಾದ್ರೂ ಊರಿಗೆ ಹೋಗಿ ಬಾ. at least ಮಾಸಕ್ಕೊಂದು ಮಾಸದ ಕವಿತೆ ಓದೋ ಭಾಗ್ಯ ನಮ್ದಾಗ್ಲಿ.

sunaath said...

Beautiful poem. ಇಂತಹ ಸುಂದರ ಗೀತೆಗಳು ಇನ್ನಷ್ಟು ಬರಲಿ.

Shree said...

Yaardo gaaLi beeside ninge, sahavaasa doSha! :)
Anyway.. padya chennaagide :)

Shree said...
This comment has been removed by the author.
Sushrutha Dodderi said...

@ ಸುಪ್ತದೀಪ್ತಿ
ತೀರಾ ದೊಡ್ ಮಾತು ಅನ್ಸಲ್ವೇನ್ರೀ?

ಭಾಗವತ,
ನಾ ಹೇಳಲ್ಯಾ ಮತ್ತೆ?

krutavarma,
ಇದ್ದರೂ ಇರಬಹುದು!
ಧನ್ಯವಾದ.

sunaath,
ಥ್ಯಾಂಕ್ಸ್ ಕಾಕಾ..

ಶ್ರೀ,
ಯಾವ್ ಗಾಳಿ ಆದ್ರೆ ಏನ್ ಮಾರಾಯ್ತಿ.. ಈ ಸೆಖೆಗಾಲದಲ್ಲಿ ಬದುಕುಳಿದ್ರೆ ಸಾಕಾಗಿದೆ.. ;)
ಥ್ಯಾಂಕ್ಯೂ..

PRAVINA KUMAR.S said...

ದೊಡ್ಡೇರಿ ಸೊಬಗನ್ನು ನೋಡಿ ಬರೆದಂತಿದೆ.

Archu said...

k s n style ide anta anisitu...eshtondu naviraada bhaashe!! [smile]

ಸುಪ್ತದೀಪ್ತಿ suptadeepti said...

ಸುಶ್, ದೊಡ್ಡ ಮಾತೇನಿಲ್ಲ ಬಿಡು. "ಪುಟ್ಟ ಕವಿ" ಅಂದ ಮೇಲೆ ಅದು ಪುಟ್ಟ ಮಾತು ತಾನೇ!!

ನಿನ್ನೊಳಗಿನ ಕವಿ ಗದ್ಯದ ಗಾದಿಯೊಳಗಿದ್ದ, ಈಗ ಪದ್ಯದ ಉಯ್ಯಾಲೆಗೆ ಬಂದಿದ್ದಾನೆ, ಅಷ್ಟೇ. ಸ್ವಾಗತ.

chetana said...

Sushruta,
hosa looka ChennAgide. :)
Adre,
nAnu hosa pOsTige kAytidde :(

- Chetana

chetana said...

adu (looka) LOOK ! :)
- Chetana