Tuesday, December 16, 2008

ಸುಗ್ಗಿಗಾಗಿ ಹಾಕಿದ ಚಪ್ಪರ

ಈ ಭಯೋತ್ಪಾದನೆ ಕೃತ್ಯ ನಡೆದ ಮೇಲೆ, ನಾವೆಲ್ಲಾ ಬ್ಲಾಗಿಗೆ ಕಪ್ಪು ಪಟ್ಟಿ ಬಳಿದುಕೊಂಡಮೇಲೆ ಒಂಥರಾ ಫುಲ್ ಸೀರಿಯಸ್‍ನೆಸ್ ಆವರಿಸಿಕೊಂಡುಬಿಟ್ಟಿದೆ! ಬಾಂಬು-ಟೆರರಿಸಂನಂತಹ ’ಸ್ಪೋಟಕ’ ವಿಷಯವನ್ನು ಬಿಟ್ಟು ಬೇರೆ ಏನೂ ಸಾಧಾರಣ ವಿಷಯ ಬರೀಲಿಕ್ಕೆ ಮನಸಾಗುತ್ತಲೇ ಇಲ್ಲ! ಹೀಗಾಗಿ, ನಾನು ಈ ’ಬರೆಯುವ’ ಗೋಜಿಗೇ ಹೋಗದೇ, ಒಂದಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಆಲೋಚನೆ ಮಾಡುತ್ತಿದ್ದೇನೆ.

ಕಳೆದ ವಾರ ಊರಿಗೆ ಹೋಗಿದ್ದೆ. ಊರಲ್ಲಿ ಸುಗ್ಗಿಯ ಸಿದ್ಧತೆ ನಡೆದಿತ್ತು. ನಮ್ಮನೆ ಪಕ್ಕದಲ್ಲಿ, ಅಡಿಕೆ ಸುಲಿಯಲು ಕೂರುವವರಿಗಾಗಿ ಆಳುಗಳು ಚಪ್ಪರ ಹಾಕುತ್ತಿದ್ದರು. ’ಸುಮ್ಮನೇ ಇರಲಿ’ ಎಂದು ಕ್ಲಿಕ್ಕಿಸಿದ ಅದರ ಒಂದಷ್ಟು ಫೋಟೋಗಳನ್ನು ಇಲ್ಲಿ ಹಾಕುತ್ತಿದ್ದೇನೆ.

ಒಂದು ಕಡೆಯಿಂದ ನಾವು ಯುವಕರೆಲ್ಲಾ ಹಳ್ಳಿ ಬಿಟ್ಟು ಪಟ್ಟಣಗಳಿಗೆ ಬರುತ್ತಿದ್ದೇವೆ. ನನ್ನ ಅಥವಾ ನನ್ನ ಆಸುಪಾಸಿನ ವಯಸ್ಸಿನ ಯುವಕರು ಯಾರೂ ಉಳಿದಿಲ್ಲ ನಮ್ಮೂರಲ್ಲಿ ಸಧ್ಯ. ಬರೀ ಹಿರಿತಲೆಗಳೇ ತುಂಬಿಕೊಂಡಿವೆ. ಮತ್ತೊಂದು ಕಡೆ, ಈ ಹಿರಿಯರಿಗೆ ಕೆಲಸ ಮಾಡಿಸಿಕೊಳ್ಳಲು ಆಳುಗಳೂ ಸಿಗುತ್ತಿಲ್ಲ. ಅಂಗಳ ಮಾಡುವುದಕ್ಕೆ, ಅಟ್ಟ-ಚಪ್ಪರ ಹಾಕುವುದಕ್ಕೆ, ಕೊನೆ ಕೊಯ್ಲಿಗೆ, ನೇಣು ಹಿಡಿಯಲಿಕ್ಕೆ, ಅಡಿಕೆ ಹೆಕ್ಕಲಿಕ್ಕೆ, ಆಮೇಲೆ ಹೊರಲಿಕ್ಕೆ -ಆಳು ಸಿಗದೇ, ಸುಗ್ಗಿ ಮಾಡುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ನಮ್ಮೂರಲ್ಲಿ ಸುಮಾರು ಮನೆಗಳಲ್ಲಿ ಈ ವರ್ಷ ಫಸಲುಗುತ್ತಿಗೆ ಕೊಡುವುದೇ ಸೈ ಎಂದು ಯೋಚಿಸುತ್ತಿದ್ದಾರೆ. ಹಾಗಾಗಿ, ಈಗ ನಾನು ತೆಗೆದಿರುವ ಈ ಫೋಟೋಗಳು ಮುಂದೊಂದು ದಿನ ’ಡಾಕ್ಯುಮೆಂಟರಿ’ಗಳಾದರೂ ಅಚ್ಚರಿಯಲ್ಲ!






















ಓದಿಲ್ಲದಿದ್ದಲ್ಲಿ: ಸುಗ್ಗಿ ವ್ಯಾಳ್ಯಾಗ..

23 comments:

Pramod P T said...

ಮುಂದಿನ ಬಾರಿ ಅಡಿಕೆ ಸುಲಿಯುವವರ ಫೋಟೊಗಳು ಬರಲಿ..

ತೇಜಸ್ವಿನಿ ಹೆಗಡೆ said...

hmmm...

ಸಂದೀಪ್ ಕಾಮತ್ said...

ಇದೆ ಥರ ಚಪ್ಪರ ಮೊನ್ನೆ ಯಾವುದೋ ಸೀರಿಯಲ್ ನಲ್ಲಿ ಬಂದಿತ್ತು ಎಂ ಡಿ ಪಲ್ಲವಿ ಚಪ್ಪರದ ಮೇಲಿದ್ರು!

Parisarapremi said...

ಯಾಕೋ ಇದು ಕೂಡ ಸಂತಸದ ಸುದ್ದಿಯೆನುಸುತ್ತಿಲ್ಲ ಕಣಯ್ಯಾ...

Unknown said...

ಸು
ಈಗ ನಾನು ತೆಗೆದಿರುವ ಈ ಫೋಟೋಗಳು ಮುಂದೊಂದು ದಿನ ’ಡಾಕ್ಯುಮೆಂಟರಿ’ಗಳಾದರೂ ಅಚ್ಚರಿಯಲ್ಲ! ಎಂಬ ಸಾಲುಗಳು ಅವ್ಯಕ್ತ ಭಯೋತ್ಪಾದನೆಯೇ ನಮ್ಮ ಪಾಲಿಗೆ. ಒಂಥರಾ ಬೇಸರದ ಬರಹ ಉತ್ತಮ ಫೋಟೋ .

Harisha - ಹರೀಶ said...

ನೀ ನೋಡಿದ್ರೆ ಅಡಿಕೆ ಅಟ್ಟ ಅಂಬೆ... ಫೋಟೋ ನೋಡಿರೆ ಮದುವೆ ಚಪ್ರ ಇದ್ದ್ಹಂಗೆ ಇದ್ದು... ಏನ್ ಸಮಾಚಾರ?

Jagali bhaagavata said...

ನೇಣು ಹಿಡಿಯಲಿಕ್ಕೆ....ಹೀಗಂದ್ರೆ ಎಂತದು ಮಾರಾಯ? ನೇಣು ಹಾಕ್ಕಳೋದಲ್ವಾ? ಹಿಡ್ಕೊಳೋದಾ? :-)

Govinda Nelyaru said...

ನಮ್ಮ ಕಡೆಯಲ್ಲಿ ಮೊದಲು ಮನೆಯಲ್ಲಿ ಕಾರ್ಯಕ್ರಮ ಇದ್ದರೆ ಈ ರೀತಿ ಚಪ್ಪರ ಹಾಕುತ್ತಿದ್ದರು. ಈಗ ಕಾರ್ಯಕ್ರಮಗಳು ಪಟ್ಟಣದ ಹಾಲಿನಲ್ಲಿ. ಹಳ್ಳೀಯಲ್ಲಿ ನಡೆದರೂ ಶಾಮಿಯಾನದಡಿಯಲ್ಲಿ. ಚಪ್ಪರಗಳೆಲ್ಲ ಈಗ ಇತಿಹಾಸ. ಈ ಪೋಟೊಗಳು ’ಡಾಕ್ಯುಮೆಂಟರಿ’

ಗೋವಿಂದ

Anonymous said...

``ಈ ಫೋಟೋಗಳು ಮುಂದೊಂದು ದಿನ ’ಡಾಕ್ಯುಮೆಂಟರಿ’ಗಳಾದರೂ ಅಚ್ಚರಿಯಲ್ಲ!''

ಹೌದೆನ್ನಿಸುತ್ತದೆ ಸುಶ್ರುತ. ಚಿತ್ರಗಳು ಚೆನ್ನಾಗಿವೆ..

ಚಿತ್ರಾ said...

ಸುಶ್ರುತ,
ಬೇಜಾರಾಗ್ತಿದ್ದು.ಊರಕಡೆ ಎಲ್ಲ ಬದಿಗೂ ಇದೇ ಹಾಡು ! :((

Shashi Dodderi said...

I wonder who is responsible for this economy, globalization or you and ME!!!! we all want to earn money enjoy city life, but always feel bad about our disappearing villages......

Ittigecement said...

ಸುಶ್ರುತರವರೆ....


ಅಡಿಕೆ ಸುಲಿಯುವವರಿಗೆ ನೆರಳಿನ ಚಪ್ಪರ ಅನಿಸುತ್ತದೆ...
ಆದರೆ ಒಂದುಸಾರಿ ಊರಿಗೆ ಹೋಗಿ ಬಂದ ಹಾಗಿತ್ತು...
ಫೋಟೊಗಳು ಚೆನ್ನಾಗಿವೆ...

ಅಭಿಅನಂದನೆಗಳು...

ವಿ.ರಾ.ಹೆ. said...

ಯಾವ್ದುಕ್ಕೂ ಇರ್ಲಿ ಅಂತ ನಾನೂ ಸೇವ್ ಮಾಡಿಟ್ಕಂಡಿದಿನಿ.

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
ಒಂದು ಮನೆಲ್ಲಿ ಒಬ್ಬರು ಅಥವಾ ಇಬ್ಬರು. ಆ ನಂತರ?
ಈಗ ಸಧ್ಯಕ್ಕೆ ಊರಿಗೆ ಹೋದ್ರೆ ಹೋಪ್ಲೆ ನಮ್ಮನೆ ಅಂತ ಒಂದು ಮನೆ ಎಲ್ಲರಿಗೂ ಇದ್ದು. ಇನ್ನು ಇಪ್ಪತ್ತು ಮೂವತ್ತು ವರ್ಷಾದ್ಮೇಲೆ ಹೋದ್ರೆ ನಮ್ಮನ್ನ ಗುರುತು ಹಿಡಿಯವ್ವೂ ಇಡೀ ಊರಲ್ಲಿ ಯಾರೂ ಇರದ್ ಸುಳ್ಳು :-(
ಹೋದ್ರೂ ನಮ್ಮವ್ವು ಅಂತ ಅಲ್ಲಿ ಯಾರಿದ್ದ ಅಂದ್ಕಂಡು ನಾವೂ ಹೋಗಾಗ್ತ ಇಲ್ಯ. ಅಲ್ದಾ?
ಕಡೇಪಕ್ಷ ನಾವು ಈಗ ಎಲ್ಲಿದ್ದಾಜು ಅನ್ನುವುದನ್ನ ನೆನಪಿಸಲ್ಲಾದ್ರೂ ಇಂಥಹ ಬರಹ ಬೇಕು. ನಮ್ಮೂರು, ನಮ್ಮನೆ ಅನ್ನುವ ಭಾವನೆಗಳನ್ನ ಎಚ್ಚರಿಸುವುದಕ್ಕಾದರೂ ಇಂಥಹ ಬರಹ ಬೇಕು. ಅಥವಾ ಬದುಕಿನುದ್ದಕ್ಕೂ ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಳ್ಳುವುದಕ್ಕಾದರೂ ಇಂಥಹ ಬರಹಗಳು ಬೇಕು.
ಒಂದು ಸುಂದರ ಮುಂಜಾವಿನಲ್ಲಿ ಮಕ್ಕಳು ಬರುತ್ತಿದ್ದಾರೆ ಎನ್ನುವ ಖುಷಿಯಲ್ಲಿ ಇಡೀವರ್ಷ ಕಾಯುತ್ತ ನೂಕುವ ನಮ್ಮ ಅತ್ತೆ ಮಾವರ/ಅಪ್ಪ ಅಮ್ಮರ ಬಗ್ಗೆ ಯೋಚಿಸುವುದಕ್ಕಾದರೂ ಇಂಥಹ ಬರಹ ಬೇಕು. ಬರೆಯುತ್ತಿರು.
ಚಂದದ ಮತ್ತು ಅಪರೂಪದ ಆಪ್ತ ಚಿತ್ರಗಳಿಗೆ ಥ್ಯಾಂಕ್ಸ್ :-)

mruganayanee said...

ನಾನು ರಜಾದಲ್ಲಿ ಹಳ್ಳಿಗೆ ಹೋಗ್ತಿದ್ದಿದ್ದು. ಇವನ್ನೆಲ್ಲ ನಾನು ನೋಡಿಲ್ಲಾ ನಮ್ಮದು ಅಡಿಕೆ ತೋಟಾನೆ ಆದ್ರೂ ಇದೆಲ್ಲಾ ನಂಗೆ ಗೊತ್ತೇ ಇಲ್ಲ. ಅಪ್ಪಂಗೆ ಗೊತ್ತಿರುತ್ತೋ ಏನೋ. To be frank Shusruta I as I havent seen it I dont miss it as u all do. But dont know y I am feeling guilty? and I am feeling it.

ಸುಧನ್ವಾ ದೇರಾಜೆ. said...

ಹಲೊ ಸುಶ್ರುತ, ಕೊನೆಯ ಫೋಟೊ ಚೆನ್ನಾಗಿದೆ.

Anonymous said...

ನಾನು ಪೇಟೆಲಿ ಬೆಳೆದಿದ್ದಕ್ಕೆ, ನಂಗೆ ಈ ಫೋಟೋಗಳು ಡಾಕ್ಯುಮೆನ್ಟರಿ ತರಹನೇ ಕಾಣುತ್ತಿವೆ. :)

ನಿಜ,ನನ್ನ ಬ್ಲಾಗಿಗೂ ಒಂಥರಾ ಫುಲ್ ಸೀರಿಯಸ್‍ನೆಸ್ ಆವರಿಸಿಕೊಂಡುಬಿಟ್ಟಿದೆ. ಬೇರೆ ವಿಷಯ ಬರೀಲಿಕ್ಕೆ ಮನಸ್ಸಾದರೂ, ಬ್ಲಾಗಲ್ಲಿ ಹಾಕೋ ಹಂಗೆ ಇಲ್ಲ. ಟೈಪ್ ಮಾಡಿ ಹಂಗೆ ಇಡ್ತಾ ಇದ್ದೀನಿ. ಪಬ್ಲೀಷ ಮಾಡ್ತಾ ಇಲ್ಲಾ :(

VENU VINOD said...

ಎಲ್ಲ ಸೀರಿಯಸ್ ಆಗಿರುವಾಗ, ವಿಷಾದವೇ ತುಂಬಿರುವಾಗ ಮನಕ್ಕೆ ಲವಲವಿಕೆ ನೀಡುವ ವಸ್ತುವಿಷಯ ಕೊಟ್ಟಿದ್ದೀರಿ :)

ಚಿತ್ರಾ ಸಂತೋಷ್ said...

ಊರಿಗೆ ಹೋಗಿ ಬಂದಂಗಾಯಿತು
-ತುಂಬುಪ್ರೀತಿ
ಚಿತ್ರಾ

Sushma Sindhu said...

ಅಪರೂಪದ ಚಿತ್ರಗಳು. ಎಲ್ಲೂ ನೋಡಿರಲಿಲ್ಲ. ಮೇಲಿನ ಬರಹ ಓದಿ ಸ್ವಲ್ಪ ಬೇಸರವೇ ಎನಿಸಿತು.
ಆದಾಗ ನನ್ನ ಬ್ಲಾಗಿನೆಡೆಗೊಮ್ಮೆ ಬನ್ನಿ,
~ಸುಷ್ಮ

shivu.k said...

ಸುಶ್ರುತ,

ನನ್ನ ಗೆಳೆಯನ ಮನೆಗೆ[ಕಾನುಸೂರಿನ ಬಳಿ ಮತ್ಮರ್ಡು ಊರಿಗೆ ಹೋಗಿದ್ದೆ]ಮತ್ತೆ ಹೋಗಿ ಬಂದಂಗೆ ಆಯ್ತು..

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. :-)

ಸಂದೀಪ್,
ಅದ್ಯಾವ ಕಾರ್ಯಕ್ರಮ ಮಾರಾಯ್ರೇ? ಎಂಡಿ ಪಲ್ಲವೀನ ಚಪ್ಪರದ ಮೇಲೆ ಹತ್ಸಿದ್ದು?!

ಭಾಗವತಣ್ಣ,
ಇಲ್ಲ, ನೇಣು ಹಾಕ್ಕೋಳೋದಲ್ಲ, ನೇಣು ಅಂದ್ರೆ ಹಗ್ಗ ಅಷ್ಟೇ. ಮಿಣಿ ಅಂತಾನೂ ಕರೀತಾರೆ ಕೆಲವು ಕಡೆ. ಕೊನೆಕಾರ ಮರ ಹತ್ತೋವಾಗ ಊದ್ದದೊಂಡು ಹಗ್ಗಾನ ಸೊಂಟಕ್ಕೆ ಕಟ್ಟಿಕೊಂಡು ಹತ್ತುತ್ತಾನೆ. ಮೇಲಿಂದ ಅಡಿಕೆ ಕೊನೆ ಕತ್ತರಿಸಿ ಈ ಹಗ್ಗದ ಮೂಲಕ ಕೆಳಗಡೆ ಬಿಡ್ತಾನೆ. ಕೆಳಗಡೆ ಒಬ್ರು ಹಾಗೆ ಹಗ್ಗದ ಮೂಲಕ ಸುಂಯಂತ ಜಾರಿ ಬರೋ ಕೊನೆಯನ್ನ ಹಿಡಿಯಲಿಕ್ಕೆ ಅಂತ ಇರ್ತಾರೆ. ಅಂಥವರನ್ನ ನೇಣು ಹಿಡಿಯೋರು ಅಂತ ಕರೀತಾರೆ.

ಶಾಂತಲಕ್ಕ,
ನಿಜ ನಿಜ.. :(

ಮೃಗನಯನೀ,
ಇರ್ಲಿ ಬಿಡು.. ಬೇಜಾರ್ ಮಾಡ್ಕೋಬೇಡ..

Ganesh Puranik said...

sullya heltya nimmane mundidde alda aa photo