Friday, May 29, 2009

ದೇವದಾಸ

ನನ್ನ ಕನಸುಗಳ ಲಲಾಟದಲ್ಲಿ
ಹುಟ್ಟುವಾಗಲೇ ಸಾವಿನ ಷರಾ
ಬರೆದಿರುತ್ತದೆ.
ಸತ್ತಾಗ ಆಗುವ ಶೋಕಕ್ಕೆ
ಒಂದು ಸಿಗರೇಟು ಸಾಕು.
ಸುಟ್ಟು ಉಳಿಯುವ ಅದರ
ಚಿತೆಯ ಬೂದಿಗೆ ಕಣ್ಣೀರ ಹನಿಗಳು ಸೇರಿ
ಹೊಸ ಚಿಗುರು ಒಡೆಯುತ್ತದೆ.
ಬೂದಿಯಿಂದ ಅರಳಿದ ಬಳ್ಳಿ
ಬೂದುಗುಂಬಳವಾಗಿ ಬೀದಿಯ ಜನವೆಲ್ಲ
ಬಿದ್ದೂ ಬಿದ್ದು ನಗುತ್ತಿದ್ದರೆ, ಈ
ಕಾಯಿಯನ್ನೇ ನೆಚ್ಚಿ ಇನ್ನೂ ತಬ್ಬಿ ಕುಳಿತಿರುವ ನಾನು
ಮದಿರೆಯ ನಶೆಯ ಜತೆ ನಿಧನಿಧಾನವಾಗಿ ಬಾಡಿ
ಕುಂಬಳದೊಂದಿಗೇ ಕೊಳೆತು
ಇಲ್ಲವಾಗುತ್ತೇನೆ.

ನನ್ನ ಹೃದಯದ ಒಳಗೆ
ಕನ್ನೆಯಾಗಿಯೆ ಇದ್ದ ಇನ್ನೆಷ್ಟೊ ಕನಸುಗಳು
ಕಮ್ಮಗರಳಿರೆ ಮೊಳಕೆ, ಅಣಿ-
ಬ್ರಹ್ಮಲಿಪಿ ಬರೆಯಲು ಅದೆಷ್ಟೊಂದು ಕೈಗಳು!

11 comments:

sunaath said...

ದೇವದಾಸನ ಬಗೆಗೆ ನೀವು ಬರೆದ ಕವನ ಅರ್ಥಪೂರ್ಣವಾಗಿದೆ. ಆದರೆ ಈ ದೇವದಾಸ ಯಾರು?
ನೀವು ಅಲ್ಲ ಎಂದು ಭಾವಿಸುತ್ತೇನೆ.

ಸುಧೇಶ್ ಶೆಟ್ಟಿ said...

hmm....chennaagide....

E kavithe bareyalu spoorthi yenu?

Parisarapremi said...

ಯಾಕೆ ಕವಿಗಳು ಹೇಳುವುದನ್ನು ನೇರವಾಗಿ ಹೇಳುವುದಿಲ್ಲ? ಒಳ್ಳೇ ದೇವದಾಸ. ತಲೆ-ಬುಡ ಅರ್ಥವಾಗಲಿಲ್ಲ.. ಕವನಗಳು ತಲೆಗೆ ಹೋಗೊಲ್ಲ ನೋಡಿಪ್ಪ!

umesh desai said...

"ಬ್ರಹ್ಮಲಿಪಿ ಬರೆಯಲು ಅದೆಷ್ಟೊಂದು ಕೈ ಗಳು" ತೀರ ಆಪ್ತಭಾವ. ಆ ದೇವದಾಸ ಎಲ್ಲರನ್ನೂ ಕಾಡಿದ್ದಾನೆ ಮುಂದೆ ಬರಲಿರುವ
ಪ್ರೇಮಿಗಳೂ ಸಹ ಅವನನ್ನು ನೆನೆಸಿಕೊಳ್ಳದೇ ಇರಲಾರರು.... ನಿಮಗೆ ಬಿಡುವಿದ್ದಾಗ www.usdesai.blogspot.comಗೂ
ಭೇಟಿ ಕೊಡ್ರಿ...

shivu.k said...

ದೇವದಾಸನ ಬಗ್ಗೆ ಕವನ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ. ಅಂತ್ಯ ಇಷ್ಟವಾಯಿತು..

ಸುಧನ್ವಾ ದೇರಾಜೆ. said...

ಅಪರೂಪಕ್ಕೆ ಸಿಗುವ 'ಲಲಾಟ' ಪದ ಓದಿ ಖುಷಿಯಾಯಿತು. ನಮ್ಮಲ್ಲಿ 'ಸೂಟು ಮಣ್ಣು' ಅಂತ ಮಾಡುತ್ತಾರೆ. ಅಂದರೆ ಸುಟ್ಟ ಮಣ್ಣು. ಆ ಮಣ್ಣು ಹಾಕಿದರೆ ತರಕಾರಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ . ಇಲ್ಲಿ 'ಬೂದಿಯಿಂದ ಅರಳಿದ ಬಳ್ಳಿ ಬೂದುಗುಂಬಳವಾಗಿ' ಮಜಾ ಅನಿಸಿತು. ಆದರೆ ಮುಗಿಸಿದ ಕ್ರಮ ಅಷ್ಟೊಂದು ಇಷ್ಟವಾಗಿಲ್ಲ .

ಶ್ರೀನಿಧಿ.ಡಿ.ಎಸ್ said...

ಎಂತಾಯ್ದಲೇ ನಿಂಗೆ?:)

ಸಿಂಧು sindhu said...

ಸು,

ಸ್ವಲ್ಪ ಸ್ಟ್ರಾಂಗಾಗಿದ್ದಲ ಮೂಡು ಏನ್ಸಮಾಚಾರ..!

ಲಿಪಿ ಬರೆಯಲಿಕ್ಕೆ ಅಣಿಯಾಗುವ ಅದೆಷ್ಟೊಂದು ಕೈಗಳು.. very interesting perspective.

ಕವಿತೆ ತುಂಬ ಇಷ್ಟ ಆತು .

ಪ್ರೀತಿಯಿಂದ
ಸಿಂಧು

Vijaya said...

ninne 'No Tobacco day' .... heegella cigarette bagge bareebaardu!!

VENU VINOD said...

simply superb !!!

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.

ದೇವದಾಸ ಯಾರು, ಸ್ಪೂರ್ತಿ ಏನು, ನನಗೆ ಏನಾಗಿದೆ, ಯಾಕೆ ನೇರವಾಗಿ ಹೇಳುವುದಿಲ್ಲ, ಇತ್ಯಾದಿ ಪ್ರಶ್ನೆಗಳೆಲ್ಲಾ ಹಾಗೇ ಇರಲಿ ಅಲ್ವಾ? ;)