Friday, May 07, 2010

ಪ್ರಶ್ನೆ -೧

ಕೇಳಬೇಕಾದ ಪ್ರಶ್ನೆಗಳನ್ನು
ಕೇಳಬೇಕಾದಾಗಲೇ ಕೇಳಬೇಕು
ಕಳುಹಿಸಬೇಕಾದ ಪತ್ರಗಳನ್ನು
ಕಳುಹಿಸಬೇಕಾದಾಗಲೇ ಕ....

ಶುಭ್ರ ಬಿಳಿ ಹಾಳೆಯಲ್ಲಿ
ಕಡುಗಪ್ಪು ಅಕ್ಷರಗಳಲ್ಲಿ ಬರೆದ ಪ್ರಶ್ನೆಗಳನ್ನು
ತುಸುಹಳದಿ ಬಣ್ಣದ ಕವರಿನೊಳಗೆ
ಮಡಿಚಿ ಮಡಿಚಿ ಹಾಕಿ
ಕೆಂಪು ಬಣ್ಣದ ಅಂಚೆಪೆಟ್ಟಿಗೆಯೊಳಗೆ
ಬೀಳಿಸಿದರೆ ಟಣ್ ಎಂಬ ಶಬ್ದ.
ಏಕೆ ಕೈ ತಡೆಯಬೇಕು?

ನೋಡಲ್ಲಿ, ನೀನು ನಂಬಬೇಕೆಂದಿಲ್ಲ-
ಕುರೂಪಿ ಕಾಗೆ ಹೇಗೆ ಕ್ರಾಗುಟ್ಟುತ್ತಿದೆ
ಅಪಶಕುನ! ಅಪಶಕುನ!!

ನಿಜಕ್ಕೂ ಬರೆದೆನಾ ಪತ್ರ?
ಇಲ್ಲ, ಕೈ ತಡೆದುದು ಪತ್ರ ಹಾಕುವಾಗಲ್ಲ;
ಬರೆಯುವಾಗಲೇ!
ಮತಿ ಹೇಳುತ್ತದೆ:
ಪ್ರತಿ ಮಾತನ್ನೂ ಯೋಚಿಸಿ ಆಡುವುದನ್ನು
ರೂಢಿಸಿಕೊಂಡ ದಿನದಿಂದಲೇ ಆದದ್ದು
ಈ ಹಿನ್ನಡೆ.
ನುಗ್ಗಿಬಿಟ್ಟಿದ್ದರೆ ಅಂದೇ,
ಇನ್ನೆಲ್ಲೋ ಇರುತ್ತಿದ್ದೆ.
ಇದೇ ನಿನ್ನ ಮಿತಿ.

ಇದ್ದೀತೇನೋ, ಸ್ಮೃತಿಯ ಕಡಲಲಿ
ಮುಳುಗಿದವ ಕ್ಷಮಾದಾಯಿಯ ಮುಂದೆ
ಸದಾ ಸ್ವಯಂ ಅಭ್ಯರ್ಥಿ;
ಪ್ರಶ್ನೆ ಪ್ರಚ್ಛನ್ನ.

12 comments:

ತೇಜಸ್ವಿನಿ ಹೆಗಡೆ said...

Good one....:)

Lakshmi Shashidhar Chaitanya said...

tadviddhi pariprashnena anta upanishat nalli ide. prashnisade oppabEDi anta Dr. H. narasimhaiah avru appaNe koDisiddaare. Neevu prashne keLakke shuru maaDiddiri. good.

Bhargavi Bhat said...

liked it a lot......

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸುಂದರ...

sunaath said...

ಸುಶ್ರುತ,
ಬಂದದ್ದು ಮತಿಯಲ್ಲಿ
ಇಳಿದೇ ಬಿಡಲಿ ಹಾಳೆಯಲಿ;
ಯಾಕೆಂದರೆ ಇಷ್ಟು ಚೆಲುವಾದ ಕವನ
ಓದಲೆಮಗೂ ಸಿಗಲಿ!

Raghu said...

ಕೇಳಬೇಕಾದ ಪ್ರಶ್ನೆಗಳನ್ನು ಕೇಳಬೇಕಾದಾಗಲೇ ಕೇಳಬೇಕು..ನೀಡಬೇಕಾದ ಉತ್ತರ...?
ಚೆನ್ನಾಗಿದೆ ಕವಿತೆ..
ನಿಮ್ಮವ,
ರಾಘು.

Subrahmanya said...

ತುಂಬ ಚೆನ್ನಾಗಿದೆ ಕವನ.

Anonymous said...

ಕೊನೆಯ ಪ್ಯಾರ ಅರ್ಥವಾಗಿಲ್ಲ. ಅದೇನೋ ನಿಗೂಢವಾದದ್ದನ್ನು ಮುಚ್ಚಿಕೊಂಡಂತೆ ಕಾಣ್ತಿದೆ. ಅರ್ಥವಾಗದಿದ್ದರೇನೇ ಒಳಿತೇನೋ, ಅರ್ಥವಾಗಿಬಿಟ್ಟರೆ ಇಷ್ಟೇನೇ ಅನ್ನಿಸಿಬಿಡುವ ಸಾಧ್ಯತೆ ಇದೆಯಾದ್ದರಿಂದ ಹೀಗೇ ಇರಲಿ, ಒಂದು ಪ್ರಶ್ನೆ ಪ್ರಚ್ಚನ್ನವಾಗಿ ಎದೆಯಲಿ.

umesh desai said...

ಸುಶ್ರುತ ಕವಿತೆ ಚೆನ್ನಾಗಿದೆ...ಅಭಿನಂದನೆಗಳು..

Parisarapremi said...

@Lakumi: poojya gurugaLaada Dr.HN avaru yaavaaglu heLOru, haNe mele ondu question mark haakkond iri antha. alla, sumne ondu trivia na share maaDkonDe ashte.

@sushrutha: neenoo idanna share maadkobOdu.. share with note antha.

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ..

@ neelihoovu,
>>ಹೀಗೇ ಇರಲಿ, ಒಂದು ಪ್ರಶ್ನೆ ಪ್ರಚ್ಚನ್ನವಾಗಿ ಎದೆಯಲಿ
-ಅಲ್ವಾ?

@ Parisarapremi,
ಓಕೆ. :-)

ಸೀತಾರಾಮ. ಕೆ. / SITARAM.K said...

ಮನದ ಪ್ರಶ್ನೆಗಳು ಮನದಲ್ಲಿ ಮೂಡುವ- ಅನುಮಾನ, ದುಗುಡಗ, ಗೊ೦ದಲ ಮತ್ತು, ಗೋಜಲು -ಗಳಲ್ಲಿ ಮೈದಳೆದು ದುತ್ತೆ೦ದು ನಿಲುವಾಗ ಕಾಡುವ ಪರಿ ಚೆನ್ನಾಗಿ ಚಿತ್ರಿಸಿದ್ದಿರಾ ತಮ್ಮ ಕವನದಲ್ಲಿ ...