Thursday, May 13, 2010

ಪ್ರಶ್ನೆ -೨

ಮ್ಯಾಂಗೋ ಫ್ಲೇವರಿನ ಐಸ್‌ಕ್ರೀಂ
ತಿಂದು ಮಲಗಿದ ರಾತ್ರಿ
ಕನಸಲ್ಲಿ ರಸಪುರಿ ಹಣ್ಣು
ತೂಗುತ್ತಿರುವ ಮಾವಿನ ಮರ ಕಂಡಿತ್ತು,
ಹಸುರೆಲೆಗಳ ನಡುವೆ ಕೂತಿದ್ದ ಕಪ್ಪು
ಕೋಗಿಲೆ ಕೂಗಿದ್ದಕ್ಕೆ ಎಚ್ಚರಾಯ್ತು
ಎಂದು ನಾ ಹೇಳಿದರೆ ನೀನು ಕ್ಲೀಷೆಯೆಂದು
ಬದಿಗೆ ಸರಿಸಿಬಿಡಬೇಡ-
ನನ್ನ ಸತ್ಯ ನನಗೆ
ಯಾವ ಕನಸೂ ಸುಳ್ಳಲ್ಲ
ಎಲ್ಲ ವಿಸ್ಮಯಗಳಿಗೂ ಅರ್ಥ ಬೇಕೆಂದು
ಹಾತೊರೆಯುವುದಾದರೂ ಏಕೆ?
ಉತ್ತರ ಸಿಕ್ಕಮೇಲೆ ಪ್ರಶ್ನೆಗೆ ಬೆಲೆಯೆಲ್ಲಿ?

ಕೇಳದೇ ಉಳಿದ ಪ್ರಶ್ನೆಗಳನ್ನು
ಕೆಡದಂತೆ ಇಡಲು ಹಾಟ್‌ಬಾಕ್ಸು,
ಫ್ಲಾಸ್ಕು, ಫ್ರಿಜ್ಜು -ಏನೂ ಬೇಕಿಲ್ಲ;
ಮನದ ಮೂಲೆಗೆ ಬೀಸಾಡಿದರೂ ಸಾಕು
ಹಾಗೇ ಇರುತ್ತವೆ, ಪಾಪ.

ರಾತ್ರಿಯೆಲ್ಲ ಕೂತು ಉರು
ಹೊಡೆದುಕೊಂಡು ಬಂದ ಭಾಷಣ
ವೇದಿಕೆ ಹತ್ತುವವರೆಗೂ ಸರಿಯಾಗಿಯೇ ನೆನಪಿತ್ತು
ಗಂಟಲೊಣಗಿದ್ದು, ತಡವರಿಸಿದ್ದು
ಆಮೇಲೇ.
ಅತಿಥಿಗಳ ಬಗ್ಗೆ ಸಭಾಸದರಿಗೂ ಅನುಕಂಪ
ಇದೂ ಕನಸಾಗಿದ್ದರೆ ಅಂತ ಎಷ್ಟೇ ಬಯಸಿದರೂ

ಕೋಗಿಲೆ ಕೂಗುವುದೇ ಇಲ್ಲ.

16 comments:

Sree said...

super!! sikkapatte likings:)

ಮನದಾಳದಿಂದ............ said...

supper!!!
ತುಂಬಾ ಚನ್ನಾಗಿದೆ ಕಣ್ರೀ ನಿಮ್ಮ ಪ್ರಶ್ನೆಯ ಕವನ!

PARAANJAPE K.N. said...

ಚೆನ್ನಾಗಿದೆ

sunaath said...

ಸುಶ್ರುತ,
ಉತ್ತಮೋತ್ತಮ ಕವನಗಳನ್ನು ಬರೆಯುತ್ತಿದ್ದೀರಿ!

ತೇಜಸ್ವಿನಿ ಹೆಗಡೆ said...

ಬಹು ದಿನಗಳಿಂದ ಒಂದು ಪ್ರಶ್ನೆ ಬಿಡದೇ ನನ್ನ ಕಾಡುತಿತ್ತು.. ಅದಕ್ಕೀಗ ಒಂದು ಅಂತ್ಯ ಈ ಕವನವನ್ನೋದಿ ಸಿಕ್ಕಿದೆ.... ಕೆಲವೊಂದು ಪ್ರಶ್ನೆಗಳನ್ನು ಹಾಗೆಯೇ ಮನದ ಮೂಲೆಯಲ್ಲಿ ಬಿಸಾಡಬೇಕು.. ವ್ಹಾ...! v.Nice..

Subrahmanya said...

ಪ್ರಶ್ನೆ ಕೇಳುತ್ತಲೇ ಉತ್ತರ ದೊರಕಿಸಿಕೊಡುವ ನಿಮ್ಮ ಕವನ ಅತ್ಯುತ್ತಮವಾಗಿದೆ.

ದಿವ್ಯಾ ಮಲ್ಯ ಕಾಮತ್ said...

"ಉತ್ತರ ಸಿಕ್ಕಮೇಲೆ ಪ್ರಶ್ನೆಗೆ ಬೆಲೆಯೆಲ್ಲಿ?" -- really true and fantastic line:)

ಸೀತಾರಾಮ. ಕೆ. / SITARAM.K said...

ಮನದ ಮೂಲೆಯಲ್ಲಿ ಎಲ್ಲೋ ಬಿದ್ದ ಪ್ರಶ್ನೆಗಳ ಉತ್ತರ ಹುಡುಕಿದ೦ತೆ ಮತ್ತೊ೦ದು ಪ್ರಶ್ನೆ ಎದ್ದು ಆ ಜಾಗೆ ಆಕ್ರಮಿಸಿರುತ್ತೆ. ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮೂಲೆಯಲ್ಲಿ ಸದಾ ಶೇಕರಣೆಯಾಗುತ್ತಿರುವ ಪ್ರಶ್ನೆಗಳನ್ನು ಎತ್ತಿ ಹೊರಹಾಕುವದು ಜೀವನದ ಕಾಯಕ.
ಚೆ೦ದದ ಕವನ

Ultrafast laser said...

This poem depicts several interesting and original icons and images. Good one-D.M.Sagar (Original!)

Parisarapremi said...

ನೀನು ಉಪಮಾಲಂಕಾರವನ್ನು ಅಭ್ಯಾಸ ಮಾಡಬೇಕು. ಒಂದೂ ಇಲ್ಲವೇ ಇಲ್ಲ ಈ ಕವನದಲ್ಲಿ?

Bala said...

Liked it.. Touches unanswered, orphaned questions that remain somewhere down under..
Thanks for reminding that not every question needs to be answered, may be it was not meant to be answered after all....

Shivakumara said...

ಚೆನ್ನಾಗಿದೆ,

ಉತ್ತರ ಸಿಕ್ಕಮೇಲೆ ಪ್ರಶ್ನೆಗೆ ಬೆಲೆಯೆಲ್ಲಿ? ಕೆಲವೊಮ್ಮೆ ಉತ್ತರ ನಾವೆಣಿಸಿದಂತಿಲ್ಲದಿದ್ದರೆ, ಉತ್ತರ ತಿಳಿದುಕೊೞದೇ ಪ್ರಶ್ನೆಯಲ್ಲೇ ಜೀವನ ಚೆನ್ನಿತ್ತು ಅನಿಸಬಹುದೇನೋ!

Anonymous said...

Good one. :)

Anonymous said...

nimma kavana nodbittu, nenapagodu enappa andre, exam hallge hogovaregu nenapau irata iddiddu questan paper nodid takshana odiddu ella maretu hogtittu.... annodu.. nanimma hosaa geleya..

ಡಿ.ಎಸ್.ರಾಮಸ್ವಾಮಿ said...

ಏನನ್ನೋ ಹುಡುಕುತ್ತಿದ್ದಾಗ ನಿಮ್ಮ ಬ್ಲಾಗು ಕಂಡು, ಖುಷಿಗೊಂಡೆ. ಪದ್ಯಗಳು ಸಹಜವಾಗಿವೆ, ಈ ಕಾಲದ ಬಹಳ ಬರಹಗಾರರ ಪದ್ಯಗಳಂತೆ ಸಿದ್ಧಾಂತ ಭಾರವಿಲ್ಲದೇ, ಹೃದ್ಯವಾಗಿವೆ. ಎಷ್ಟು ಪದ್ಯಗಳಿವೆ? ಮೂವತ್ತು ಮೀರಿದ್ದರೆ ಈ ಲಿಂಕ್ ನೋಡಿ,http://avadhi.wordpress.com/2010/04/22

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಥ್ಯಾಂಕ್ಸ್ ಕಣ್ರೀ.. ನಿಮ್ಗೆ ಇಷ್ಟ ಆಗಿದ್ದಕ್ಕೆ ನಂಗೆ ಖುಶಿಯಾಯ್ತು. :-)

@ Parisarapremi,
ನಿಮ್ಮುನ್ನ ಬೇರೇದೇ ಸ್ಪಾಟಲ್ಲಿ ವಿಚಾರಿಸ್ಕೋತೀನಿ. :x

@ ಬೆಂಕಿಕಡ್ಡಿ,
ಪ್ರಯತ್ನಿಸ್ತೀನಿ ಸರ್.. ಥ್ಯಾಂಕ್ಸ್ ಅ ಲಾಟ್!