"ಹೂವಿಗಿಂತ ಅರಳು ಮೊಗ್ಗು ಯಾಕೆ ಚಂದ ಹೇಳು? -ಪೂರ್ತಿ ಬಿರಿಯದೆ, ಒಳಗೆ ಸೊಬಗಿದೆ ಅಂತ ಹೇಳುವ ಬಗೆಗೆ.."
-ಸಿಂಧು
* *
ಸುರುಗಿಟ್ಟರೆ ಮಾಲೆಯಲ್ಲೇ ಅರಳಿತು
ಚೂರೂ ತೋರಲಿಲ್ಲ ನಗುವಾಗ ಅಳುಕು.
ಚುಚ್ಚಿದಾಗ ಸೂಜಿ, ಹೊರ-
ಬಂದ ಬಿಳೀರಕ್ತ: ತಡೆಯಲೇ ಇಲ್ಲ
ನಿರ್ದಯಿ ಕೈ.
ಒತ್ತೊತ್ತಿ ತಲೆಯೆತ್ತಿ ಕೇಳಿತು:
ಪ್ರೇಯಸಿಯ ಮುಡಿಗೋ, ದೇವತೆಯ ಅಡಿಗೋ?
ಅವೆರಡಕ್ಕೂ ನಿನ್ನ ಸ್ಪರ್ಶದ ಅರ್ಹತೆಯೇ ಇಲ್ಲ ಅಂತಂದು,
ಮೃದುನೀಳಕಾಯ ನೇವರಿಸಿ
ಬಿಸಿಲ ಬಯಲ ಕಲ್ಲುಬಂಡೆಯ ಮೇಲೆ ಇಟ್ಟು
ಪಕ್ಕದಲ್ಲಿ ತೆಪ್ಪಗೆ ತಲೆತಗ್ಗಿಸಿ ಕೂತುಬಿಟ್ಟೆ.
ಕವಿತೆ ಬರೆದು ಮುಗಿಯುವಷ್ಟರಲ್ಲಿ
ಕಲ್ಲು ಕರಗಿ, ಸಂಜೆ ಮಾಗಿ
ಸೊರಗಿದ ಹೂವುಗಳ ಮೊಗದಲ್ಲಿ
ಹೊಳೆದ ವಿನೀತ ಕಾಂತಿ ಕಂಡು-
ಸೊಬಗ ತೋರದ ಮೊಗ್ಗು,
ಘಮವ ಬೀರಿದ ಹೂವುಗಳಿಗಿಂತ
ನೋವ ಮೀರಿದ ಈ ಬಾಡಿದ ಬೆಕ್ಕೇ ಚಂದ
ಎಂದೆನಿಸಿ ಮುದ್ದು ಉಕ್ಕಿ ಬಂದುಬಿಟ್ಟಿತು.
13 comments:
ತು೦ಬಾ ಚೆನ್ನಾಗಿದೆ.
nice one........
ಗಾಢ ಅರ್ಥ, ಗೂಡಾರ್ಥ ನಿಮ್ಮ ಕವನದಲ್ಲಿ ಮಾತ್ರ ಸಾಧ್ಯ........
ಸುಶ್ರುತ ..
ಕವನ ಇಷ್ಟವಾಯ್ತು .. ಚೆನ್ನಾಗಿದೆ .
ಪ್ರೀತಿಯ ಸು,
ಇಷ್ಟಾ ಆಗೋತು.
ಬಾಡಿದ ಬೆಕ್ಕಲ್ಲೂ ಮುದ್ದು ಸುರಿಯುವುದು ಮಾತ್ರ ನಿಜವೇ ನಿಜ.
ಪ್ರೀತಿಯಿಂದ
ಸಿಂಧು
ಅರ್ಥವ್ಯಾಪ್ತಿ ದೊಡ್ಡದು
ಸುಂದರ ಕವನ
ಸಿಂಧುರವರ ಭಾವಕ್ಕೆ ನೀವು ಸ್ಪಂದಿಸಿ ಬರೆದ ಕವನ ಸೊಗಸಾಗಿದೆ.
ಸುಶ್ರುತ!!
ಎಷ್ಟು ಚೆನ್ನಾಗಿ ಬರೆದಿದ್ದೀರಾ? ತುಂಬ ಇಷ್ಟ ಆಯ್ತು
:-)
malathi ಅಕ್ಕ
sooji chuchchidaaga biLee rakta!! jiraLe enaadru dissect maaDdya? ;-)
ರಕ್ತ ಬಿಳಿಯಾಗುವುದು ...ಸ್ವಾರ್ಥದ ಪರಮಾವಧಿಯ ಸ್ಥಿತಿ ತಲುಪಿದ ಜೀವಿಯಲ್ಲಿ ಎಂದು ಅಂಬೋಣ ನಿಜವೇ....ಹಾಗೆ ನೋಡಿದರೆ ಕೆಂಪು ಮತ್ತು ನೀಲಿ ರಕ್ತ ಮಾತ್ರ ಜೀವಿಗಳಲ್ಲಿ...ಅಲ್ಲವೇ...?
ಚೆಂದದ ಗೂಡಾರ್ಥದ ಕವನ. ಸ್ಥಿತ್ಯಂತರ ಮೂಲದಲ್ಲಿ ವಿಶಾಲ ಅರ್ಥ ಹರವುತ್ತದೆ. ನಮ್ಮ ಬ್ಲಾಗ್-ಗೊಮ್ಮೆ ಭೇಟಿ ನೀಡಿ.
sooper kavana sushruta..
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ. ಕವಿತೆಯ ಓದುವ ನಿಮ್ಮ ಪ್ರೀತಿ ಹೀಗೇ ಇರಲಿ.
ಕುತೂಹಲದಿಂದ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟೆ. ಸುಂದರ ತಾಣ. ಹೊಸ ದೃಷ್ಟಿಕೋನದ ಕವನ ಸುಂದರವಾಗಿದೆ.
Post a Comment