ಸಿಗುವುದಿಲ್ಲ ನೀನೀಗ ಆಗಿನಂತೆ-
ಕಾಲೇಜಿನ ಕಾರಿಡಾರಿನಲ್ಲಿ ಒಂಟಿ
ಸಾಲು ನೀಲಗಿರಿ ಮರಗಳ ನೆರಳಲ್ಲಿ ನನಗಂಟಿ
ಜೋರು ಮಳೆಯ ದಿನ ಸೇರಿಕೊಂಡಂತೆ ಬಂದು ನನ್ನ ಛತ್ರಿಯಲ್ಲಿ
ಸಿಗುತ್ತೀ ನೀನೀಗ-
ನಾಲ್ಕು ರಸ್ತೆ ಸೇರುವ ಗಡಿಯಾರ ಗೋಪುರದ ಬಳಿ
ವಿಧಾನಸೌಧದೆದುರಿನ ಜನ ಜಂಗುಳಿಯಲ್ಲಿ
ಪಿವಿಆರ್ ಥೇಟರಿನ ಟಿಕೇಟ್ ಕ್ಯೂನಲ್ಲಿ
ಒಳ್ಳೆಯದೇ ಆಯಿತು ನನಗೆ-
ನೀನು ಭಯಗ್ರಸ್ಥ ಕಣ್ಣುಗಳಲ್ಲಿ ನನ್ನನ್ನು ನೋಡುತ್ತಿರುವಾಗ
ಜೊತೆಯಲ್ಲಿ ನಿಂತ ನಿನ್ನ ಹೊಸ ಗೆಳೆಯ
ಅನುಮಾನದ ಕಣ್ಣುಗಳಲ್ಲಿ ನಿನ್ನನ್ನೇ ನೋಡುತ್ತಿರುವಾಗ
ತಪ್ಪಿಸಬಹುದು ನಾನು ನನ್ನ ಕಣ್ಣ-
ಗೋಪುರದ ದೊಡ್ಡ ಗಡಿಯಾರದ ಮುಳ್ಳನ್ನು ನೋಡುತ್ತಾ
ವಿಧಾನಸೌಧದ ಮೇಲಿನ ಸಿಂಹ ಪುತ್ಥಳಿಯನ್ನು ನೋಡುತ್ತಾ
ಪಿವಿಆರಿನ ಚಲಿಸುತ್ತಿರುವ ಎಸ್ಕಲೇಟರನ್ನು ನೋಡುತ್ತಾ.
(೨೭.೦೪.೨೦೦೬)
7 comments:
ಚೆನ್ನಾಗಿದೆ ಕಣಯ್ಯ!
ಇದೇಕೋ ನಿಮ್ಮ ಆ 'ಆಟೋಗ್ರಾಪ್' ಹುಡುಗಿಯ ಮುಂದುವರಿದ ಕತೆ ಅನಿಸುತ್ತೆ ಅಲ್ವಾ !
>ಜೊತೆಯಲ್ಲಿ ನಿಂತ ನಿನ್ನ ಹೊಸ ಗೆಳೆಯ
??
@ ಶ್ರೀನಿಧಿ...
ಧನ್ಯವಾದಗಳು.
@ Shiv
ಶಿವು, ಒಟ್ನಲ್ಲಿ ಆಟೋಗ್ರಾಫ್ ಹುಡುಗಿಯನ್ನು ನಂಗೆ ಮರೆಯಲಿಕ್ಕೆ ಬಿಡಲ್ಲ ನೀವು. :) ಇದು ಅವಳಲ್ಲ ಕಣ್ರೀ, ಮತ್ತೊಬ್ಳು ;)
ಸಿಕ್ಕಿದರೂ, ಸಿಗದಿದ್ದರೂ...
ನೆನಪುಗಳಲ್ಲಿ ಬಸಿದು ಬಂದದ್ದು
ಮಧುರವಾದ ಸಿಕ್ಕು...
ಅವಳೇನಾದ್ರೂ ನಿನ್ನೆ ಸಂಜೆ ಸಿಗ್ತೀನಿ ಅಂತ ಹೇಳಿ, ಸಿಗದೆ ಇದ್ದಿದ್ರೆ ಮಾತ್ರ ಸಿಕ್ಕಿಬೀಳುತ್ತಿದ್ದಳು ನಿನ್ನ ಸಿಟ್ಟಿನ ಬಲೆಯಲ್ಲಿ ಅಲ್ವಾ?
ನೆನಪಾಗಿ ಉಳಿದಾಗ ಮಾತ್ರ ನೋವೂ ಮಧುರವಾಗತ್ತೇನೋ ?!
-ಅಕ್ಕ
ಸು, ಕವನ ಚೆನ್ನಾಗಿದೆ. ಇಷ್ಟವಾಯಿತು. Thanks..
@ ಸಿಂಧು
ಸಿಕ್ಕಿದರೂ, ಸಿಗದಿದ್ದರೂ...
ನೆನಪುಗಳಲ್ಲಿ ಬಸಿದು ಬಂದದ್ದು
ಮಧುರವಾದ ಸಿಕ್ಕು...
-ಸಾಲುಗಳಿಗಾಗಿ ಲಾಟ್ಸಾಫ್ ಧನ್ಯವಾದಗಳು. ಪ್ರತಿಕ್ರಿಯೆಗೂ.
Post a Comment