Tuesday, May 22, 2007

ಒಂದು ಕೊಲೆ

Well, what to say about this sportive guy... He is really caring and loving guy... He is amazing, awesome and friendly. I neednot describe him as anyone close to him must surely be aware of his abilities. He is an all rounder.. Be it in the field of studies, sports or music. He is a champo...

ಕೌಶಂಭಿ ಎಂಬ ಹೆಸರಿನ ಇಪ್ಪತ್ನಾಲ್ಕು ವರ್ಷದ ಹುಡುಗಿ ತನ್ನ ಪ್ರಿಯಕರನನ್ನು describe ಮಾಡುವುದು ಹೀಗೆ. ಅವನ ಹೆಸರು ಮನೀಷ್. ಮನೀಷ್ ಠಾಕೂರ್. ಮೂಲತಃ ಕೋಲ್ಕತದವನು. ಗೋವಾದಲ್ಲಿ ಒಂದು ವೈಮಾನಿಕ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿರುವಾತ. ಶಾಲಾ ದಿನಗಳಿಂದಲೂ ಕೌಶಂಭಿ ಮತ್ತು ಮನೀಷ್ ಪರಿಚಿತರು. ಅವರು ಆರ್ಕುಟ್ ಕಮ್ಯುನಿಟಿಯಿಂದ ಮತ್ತೂ ಹತ್ತಿರಾಗಿದ್ದರು. ಪ್ರೀತಿಯಲ್ಲಿ ಬಿದ್ದಿದ್ದರು. ಜಾರ್ಖಂಡಿನವಳಾದ ಕೌಶಂಭಿಗೆ ಮುಂಬಯಿಯಲ್ಲಿ ಕೆಲಸ ಸಿಕ್ಕಿದ ನಂತರ ಮನೀಷ್ ಗೋವಾದಿಂದ ಪದೇಪದೇ ಇವಳನ್ನು ಕಾಣಲು ಬಂದುಹೋಗುತ್ತಿದ್ದನಂತೆ. ಏನಾಯಿತೋ ಏನೋ? ಮೊನ್ನೆ ಮೇ ಹದಿನಾಲ್ಕರಂದು ಅಂಧೇರಿಯ ಹೋಟೆಲ್ಲೊಂದರಲ್ಲಿ ಕೌಶಂಭಿ ಹೆಣವಾಗಿ ಬಿದ್ದಿದ್ದಾಳೆ. ಮನೀಷ್ ಅವಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಜತೆಯಲ್ಲೇ, ಅದು ಕೊಲೆಯಲ್ಲ; ಆತ್ಮಹತ್ಯೆ ಎಂಬ ಮಾತೂ ಕೇಳಿಬರುತ್ತಿದೆ.

ಇಂತಹ ಕೊಲೆಗಳು ದಿನವೂ ಆಗುತ್ತಿರುತ್ತವೆ. ಪ್ರೀತಿ ಮಾಡುವ ಜೀವಗಳು ಸ್ವಲ್ಪವೂ ಎಚ್ಚರದಿಂದಿರುವುದಿಲ್ಲ. ಆದರೆ ನನ್ನ ಗಮನ ಸೆಳೆದದ್ದು ಅವರ ಪ್ರೊಫೈಲುಗಳ ಲಿಂಕುಗಳು! ಇಲ್ಲಿ ನೋಡಿ, ಇದು ಕೌಶಂಭಿಯ ಆರ್ಕುಟ್ ಪ್ರೊಫೈಲಿನ ಲಿಂಕ್. ಅವಳ ಸ್ಕ್ರಾಪ್‍ಬುಕ್ಕಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಅವಳ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. 'ಸ್ವರ್ಗದ ಬಾಗಿಲು ನಿನಗಾಗಿ ತೆರೆದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಬರೆದಿದ್ದಾರೆ. ಕೆಲವರು 'How did he kill u?' ಅಂತ ಕೇಳಿದ್ದಾರೆ. 'Is this true?' ಅಂತ ಕೇಳಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ ಅವಳೇ ಇಲ್ಲ. ಅವಳ ಪಾಸ್‍ವರ್ಡ್ ಬೇರೆ ಯಾರಿಗೂ ಗೊತ್ತಿಲ್ಲ. ಇನ್ನು ಅವಳ ಪ್ರೊಫೈಲಿಗೆ ಯಾರೂ log in ಆಗುವುದೇ ಇಲ್ಲ.

ಇತ್ತ ಮನೀಷ್‍ನ ಸ್ಕ್ರಾಪ್‍ಬುಕ್ಕಿನಲ್ಲಿ ಎಲ್ಲರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದಾರೆ. 'ಸಾಯಿ ಮಗ್ನೇ' ಎಂದು ಶಪಿಸಿದ್ದಾರೆ. 'ನಿನಗೆ ಮರಣದಂಡನೆ ಆಗಲಿ' ಎಂದು ಚೀರಾಡಿದ್ದಾರೆ. 'ನೀನು ನಾಶವಾಗಿ ಹೋಗ್ತೀಯ ನೋಡ್ತಿರು' ಎಂದು ಎಗರಾಡಿದ್ದಾರೆ.

ನಮ್ಮ ನಡುವೆ ನಡೆದ ಒಂದು ಅಪರಾಧೀ ಕೃತ್ಯ, ಒಂದು ದುರ್ಘಟನೆ ಜನರನ್ನು ಹೇಗೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಕೌಶಂಭಿಯ ಸ್ಕ್ರಾಪ್‍ಬುಕ್ಕಿನಲ್ಲಿ ಕಾಣುವ ವಿಷಾಧ ಮತ್ತು ಮನೀಷನ ಸ್ಕ್ರಾಪ್‍ಬುಕ್ಕಿನಲ್ಲಿ ಕಾಣುವ ಆಕ್ರೋಶ... ಹಹ್! ನಾನೇನೂ ಹೇಳಬಯಸುವುದಿಲ್ಲ. ಬರೆಯಲಿಕ್ಕೆ ಮೂಡೂ ಇಲ್ಲ. ನೀವೇ ಒಮ್ಮೆ ಕಣ್ಣು ಹಾಯಿಸಿ.

[ಸುದ್ಧಿಯನ್ನು ತಲುಪಿಸಿದ ಸೋಮುಗೆ ಥ್ಯಾಂಕ್ಸ್.]

9 comments:

Pramod P T said...

ನಂಬೋಕೆ ಆಗ್ತಿಲ್ಲಾ...!! ಸುದ್ದಿ ತಲುಪಿಸಿದ್ದಕ್ಕೆ ಧನ್ಯವಾದಗಳು ಸುಶ್ರುತರೇ...

ಯಜ್ಞೇಶ್ (yajnesh) said...

ಪರಿಚಯ ಇಲ್ಲದೇ ಇರುವವರ ಹತ್ತಿರ ಸ್ವಲ್ಪ ಹುಷಾರಿಗೋದು ಉತ್ತಮ ಅಲ್ವಾ???

ಅದರಲ್ಲೂ ಹುಡಿಗಿಯರು ಬಹಳ ಹುಷಾರಾಗಿರಬೇಕು. ಫೋನ್ ನಂಬರ್ , ಕಂಪನಿ ಹೆಸರು, ಅಡ್ರೆಸ್, ಫೋಟೊ (ಆರ್ಕುಟ್ ನಲ್ಲಿ ಅರ್ದ ಜನ ಫೋಟೋ ನೋಡಿ ಪ್ರೊಫೈಲ್ ಚೆಕ್ ಮಾಡ್ತಾರೆ) ಇದನ್ನೆಲ್ಲಾ ಹಾಕೋದು ಅಷ್ಟು ಉತ್ತಮ ಅಲ್ಲ ಅನ್ಸತ್ತೆ. ನಾವೇ ಅಪಾಯವನ್ನು ಮೈಮೇಲೆ ಹಾಕಿಕೊಳ್ಳೋದು ಬೇಡ. ಏಷ್ಟೋ ಜನ ತಮ್ಮ ಫ್ರೆಂಡ್ಸ್ ಲೀಸ್ಟ್ ಜಾಸ್ತಿ ಇರಬೇಕು, ಅದು ಪ್ರೆಸ್ಟೀಜ್ ವಿಷ್ಯ ಅಂತ ತಿಳ್ಕೊಂಡು ಇರೋರೆಲ್ಲರನ್ನು add ಮಾಡ್ಕೋತಾರೆ.

Anonymous said...

ಈ ಲೇಖನ ತಮ್ಮ ಪರ್ಸನಲ್ ವಿಷಯಗಳನ್ನು ಅನಾಮಿಕರೊಂದಿಗೆ ಹಂಚಿಕೊಳ್ಳೋರಿಗೆ ಎಚ್ಚರಿಕೆಯ ಘಂಟೆಯಾಗಲಿ.

ಥ್ಯಾಂಕ್ಸ್ ಸುಶ್ರುತ.

ವಿ.ರಾ.ಹೆ. said...

ಹ್ಮ್ .. ಕರ್ಮಕಾಂಡ.. :(

Archu said...

abba!!

Supreeth.K.S said...

ನಿಮ್ಮ ಅಂಕಣ ಓದಿದ ಮೇಲೆ ನನ್ನ ಮನಸ್ಸಿನಲ್ಲಿ ಬಂದ ಆಲೋಚನೆಗಳಿವು.
ಮನೀಷ್ ಆರೋಪಿ ಮಾತ್ರ ಆತ ಆಪಾದಿತ ಅಂತ ಸಾಬೀತಾಗಿಲ್ಲ.ಸತ್ಯಾಂಶವೇನೆಂದು ತಿಳಿಯದ ಜನರಿಗೆ ಅವನ ಮೇಲೆ ಏಕೆ ಆಕ್ರೋಶ? ತಮಗೆ ಸಿಟ್ಟು ಬಂದಿದೆ ಎಂಬುದನ್ನು ತೋರಿಸಿಕೊಳ್ಳುವುದು ಮಾತ್ರ ಮುಖ್ಯವೋ ಅಥವಾ ಅದು ಸರಿಯಾದ ವ್ಯಕ್ತಿಯೆಡೆಗೆ ಗುರಿಯಾಗಿದೆ ಎನ್ನುವುದು ಮುಖ್ಯವೋ? ಇದೇ ಕಾರಣಕ್ಕಾಗಿ ನಮ್ಮಲ್ಲಿ ಯಾರೋ ಮಹಾನುಭಾವ ಸತ್ತರೂ ಬಸ್ಸುಗಳಿಗೆ, ಅಂಗಡಿಗಳಿಗೆ ಬೆಂಕಿ ಬೀಳುತ್ತವೆ!

ಆ ಹುಡುಗಿಗೆ ನ್ಯಾಯ ಕೊಡಿಸ ಬೇಕು ಅಂತ ಪ್ರಾರಂಭವಾಗಿರುವ ಕಮ್ಯುನಿಟಿಯಲ್ಲಿನ ರಿಲೇಟೆಡ್ ಕಮ್ಯುನಿಟಿಗಳನ್ನು ಗಮನಿಸಿ, ಜೆಸ್ಸಿಕಾ ಲಾಲ್, ಪ್ರಿಯದರ್ಶಿನಿ ಮಟ್ಟು - ಎಲ್ಲಾ ಹೈ ಪ್ರೊಫೈಲ್ ಸೊಸೈಟಿಯ ಮಹಿಳೆಯರ ಸಾವು ಮಾತ್ರ ಅನ್ಯಾಯವಾಗಿ ಕಾಣಿಸುತ್ತದೆ. ಹಳ್ಳಿಗಳಲ್ಲಿ ದಿನವೂ ರೈತರು ನೇಣಿಗೆ ಶರಣಾಗುವುದು, ಅನಕ್ಷರಸ್ತ ಮಹಿಳೆಯರು ದಬ್ಬಾಳಿಕೆಗೆ ಆಹುತಿಯಾಗುವುದರ ವಿರುದ್ಧ ಒಂದೇ ಒಂದು ಕ್ಷೀಣ ಧ್ವನಿಯೂ ಏಳುವುದಿಲ್ಲ. ಹೀಗೇಕೆ? ನಮ್ಮಲ್ಲಿ ಹೊಸದೊಂದು ಬಗೆಯ ಅಸ್ಪೃಶ್ಯತೆ ಮನೆ ಮಾಡಿದೆಯೇ?

ಶ್ರೀನಿಧಿ.ಡಿ.ಎಸ್ said...

ಸುಶ್,
track ಬಿಟ್ಟು ಬರದ್ದೆ.. ಹಮ್, ಗುಡ್!

ಸುಪ್ರೀತ್ ಹೇಳೋದು ಸರಿಯಾಗಿದೆ .ಆದರೆ ಜನರ ಆಕ್ರೋಶ ಯಾಕೆ ಈ ಕೇಸ್ ನಲ್ಲಿ ಜಾಸ್ತಿಯಿದೆ ಅಂದರೆ, ಒಂದು ಸ್ಕ್ರಾಪ್ ಬರೆದು ಅವನಿಗೆ ಉಗಿಯೋದು ಬಹಳ ಸುಲಭ ಅದಕ್ಕೆ! ಅವಳಿಗೆ ಸಿಂಪತಿ ಸಿಗುವುದೂ ಇದೇ ಕಾರಣಕ್ಕೆ!ಒಂದು letter ಪೋಸ್ಟ್ ಮಾಡಿ ಸಂತಾಪ ಸೂಚಿಸಿ ಅಂದಿದ್ದರೆ ಎಷ್ಟೂ ಜನ ಈ ಕೆಲ್ಸ ಮಾಡುತ್ತಿದ್ದರು?

ಅಷ್ಟಕ್ಕೂ public memory is weak ಅನ್ನೋ ಮಾತಿದೆಯಲ್ಲ!, ಒಂದು ನಾಲ್ಕು ದಿನ, ಎಲ್ಲ ಮರೆಯತ್ತೆ!

Karthik CS said...

ಬಹಳ ದುಃಖದ ಸಂತಗಿ.. ಇದರ ವಿಚಾರದಲ್ಲಿ ನನ್ನ ಒಂದು ಅನಿಸಿಕೆ:

ನನಗೆನನ್ನ ಸ್ನೇಹಿತನ ಈ ಮೈಲ್ ಮೂಲಕ ಈ ವಿಷಯ ತಿಳಿಯಿತು, ಆ ಮೈಲ್ ನ ಮೂಲ ಉದ್ದೇಶ ಆರ್ಕುಟ್ ನ ಮಾನ ನಷ್ಟ. ನನಗೆ ಅರ್ಥವಾಗದ ಸಂಗತಿ ಎಂದರೆ, ಈ ಕೊಲೆಗೂ ಆರ್ಕುಟ್ ಗೂ ಏನ್ ಸಂಬಂಧ. ಇವರಿಬ್ಬರೂ ಆರ್ಕುಟ್ ಮೂಲಕ ಪರಿಚಿತರಾಗಿರಬಹುದು, ಆದರೆ ಪರಿಚಯ ಮಾಡಿಕೊಳ್ಳೋಕೆ ಆರ್ಕುಟ್ಟೇ ಆಗ್ಬೇಕಿಲ್ಲ್ವಲ್ಲ. ಬೇರೆ ಇನ್ನ್ಯಾವು ಮೀಡಿಯಾ ಮೂಲಕವೂ ಪರಿಚಿತರಾಗ ಬಹುದು. ಈ ವಿಚಾರದಲ್ಲಿ ಆರ್ಕುಟ್ ನನ್ನು ನಿಂದಿಸುವುದು ಸರಿಯಿಲ್ಲ ಅಂತ ನನ್ನ ಭಾವನೆ.

ನಿಮ್ಮ ಅಭಿಪ್ರಾಯ ?

Sushrutha Dodderi said...

@ all

ನನಗೂ ಇದು ಮೇಲಿನಲ್ಲಿ ಬಂದಿದ್ದು. ನಾನು usually ಇಂತಹ ವಿಷಯಗಳನ್ನು ನನ್ನ ಬ್ಲಾಗಿನಲ್ಲಿ ಹಾಕುವುದಿಲ್ಲವಾದರೂ ಈ ಸ್ಕ್ರಾಪ್‍ಬುಕ್ಕಿನಲ್ಲಿ ಕಂಡ ಜನರ ಭಾವಭರಿತ, ಆಕ್ರೋಶಭರಿತ ವಾಕ್ಯಗಳನ್ನು ಓದಿಸಬೇಕು ಅನ್ನಿಸಿತು. ಅವರ ಸ್ಕ್ರಾಪ್‍ಬುಕ್ಕಿನಲ್ಲಿ ಹೀಗೆ ಬರೆಯುವುದರಿಂದ ಯಾವ ಪ್ರಯೋಜನವೂ ಇಲ್ಲದಿರಬಹುದು. ಆದರೂ ಜನರ ಭಾವೋದ್ವೇಗ ಹೇಗಿರುತ್ತದೆ ನೋಡಿ...! ಅಲ್ಲದೇ, ಯಜ್ಞೇಶಣ್ಣ ಹೇಳಿದ ಹಾಗೆ, ಇಂತಹ ಘಟನೆಗಳು ಜನಕ್ಕೆ ಪಾಠಗಳಾದರೆ ಒಳ್ಳೆಯದು ಅನ್ನಿಸಿತು; ಹಾಗಾಗಿ ಹಾಕಿದೆ.

ನಿಜ, ಇನ್ನೂ ಮನೀಷ್ ಅಪರಾಧಿಯೋ ಅಲ್ಲವೋ ಎಂಬುದೇ ಸಾಬೀತಾಗಿಲ್ಲ. ಅಷ್ಟರಲ್ಲೇ ಅವನ ಮೇಲೆ ಜನ ತೋರಿಸುತ್ತಿರುವ ಆಕ್ರೋಶ ನಿಜಕ್ಕೂ ದಂಗು ಬರಿಸುತ್ತದೆ. ಅವನೇನಾದರೂ ಸಿಕ್ಕಿದರೆ ಕೊಂದು ಬಿಡುವಷ್ಟು ಸಿಟ್ಟು ತೋರಿಸಿದ್ದಾರೆ ಕೆಲವರು. ಆದರೆ ಹಾಗೆ ಮಾಡುತ್ತಾರಾ? ಡೌಟು! ಏಕೆಂದರೆ, ಹೀಗೆ ಕಂಪ್ಯೂಟರ್ ಮುಂದೆ ಕೂತು ಇಂಟರ್‍ನೆಟ್ಟಿನಲ್ಲಿ , ಫ್ರೀ ಟೈಮಲ್ಲಿ ಏನು ಬೇಕಾದರೂ ಕುಟ್ಟುತ್ತಾರೆ ಜನ... ಆದರೆ ಅದೇ ರಸ್ತೆಗೆ ಬಂದು ಎದುರು ನಿಂತು ಮಾತಾಡು ಅನ್ನಿ, ಆಡುವುದಿಲ್ಲ. (ನಾನೂ ಇದಕ್ಕೆ ಹೊರತಲ್ಲ).

ಸುಪ್ರೀತ್, ನೀವು ಗಮನಿಸಿದ ಅಂಶ ಚಿಂತನೆಗೆ ಅರ್ಹವಾದದ್ದು. ಆದರೆ again, ಈ ಘಟನೆಗೂ ತೀರಾ ಹೆಚ್ಚಿನ ಪ್ರಾಮುಖ್ಯತೆಯೇನು ಸಿಗುತ್ತಿದೆ ಅಂತ ನಂಗನ್ನುಸ್ತಿಲ್ಲ. ಅದೇ, ಕಂಪ್ಯೂಟರ್ ಮುಂದೆ ಕುಳಿತ ಮಂದಿಯ free time sensation ಅಷ್ಟೇ ಅನ್ಸುತ್ತೆ.

ಕಾರ್ತೀಕ್, ಹೌದು. ಮನೀಷ್ ಮತ್ತು ಕೌಶಂಭಿ ಮೊದಲಿನಿಂದಲೂ ಪರಿಚಿತರು. ಆರ್ಕುಟ್ಟನ ಮೂಲಕ ಹತ್ತಿರಾಗಿದ್ದರು ಅಷ್ಟೇ. ಈ ವಿಷಯದಲ್ಲಿ ಆರ್ಕುಟ್ಟನ್ನು ಬೈಯುವುದರಲ್ಲಿ ಅರ್ಥವಿಲ್ಲ. ಕೆಲವರು ಈ ಕೊಲೆಯನ್ನಿಟ್ಟುಕೊಂಡು ಆರ್ಕುಟ್ಟಿನ ಮಾನನಷ್ಟಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅದು ನಿಜಕ್ಕೂ ಅರ್ಥಹೀನ. ಹಾಗಂತ, ಆರ್ಕುಟ್ಟಿನಿಂದಲೇ ಪರಿಚಿತರಾಗಿ, ಸ್ನೇಹಿತರಾಗಿ, ಪ್ರೇಮಿಗಳಾಗಿ, ಮದುವೆಗಳಾಗಿ.... ಎಲ್ಲಾ ಆದವರೂ ಇದ್ದಾರೆ. ಇಂಟರ್ನೆಟ್ಟಿನಲ್ಲಿ ಆರ್ಕುಟ್ಟಿನಂತಹ friendship building network ಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಸುಳ್ಳಲ್ಲ.

ಹೆಚ್ಚಿನ ಪೂರ್ವಾಪರಗಳಿಲ್ಲದೇ ನಾನು ಪೋಸ್ಟಿಸಿದ ಒಂದು ಬ್ಲಾಗ್ ಬರಹ ಇಂಥದ್ದೊಂದು ಮಿನಿ ಚರ್ಚೆಗೆ ಗ್ರಾಸವಾದದ್ದು ಖುಷಿಯ ವಿಷಯ. ಎಲ್ಲರಿಗೂ ಥ್ಯಾಂಕ್ಸ್.