ಬೆಳ್ಬೆಳ್ಗೆ ಎರಡು ಒಳ್ಳೇ ಬ್ಲಾಗುಗಳನ್ನು ನೋಡಿ, ಮುದುರಿಕೊಂಡಿದ್ದ ಮನಸ ಹೂ ಮತ್ತೆ ಅರಳಿದಂತಾಯಿತು. ಒಂದು, December Stud ಎಂಬ, ಇನ್ನೂ ಯಾರೆಂದು ಕಂಡುಹಿಡಿಯಲಾಗದವರ 'A Paradise for Dreamers' ಬ್ಲಾಗಿನಲ್ಲಿ ಓದಿದ ಹಾಡು. ಇನ್ನೊಂದು, 'ಮೀರಾ ಎಂಬ ನಿಶುವಿನ ಅಮ್ಮ' ಪೋಸ್ಟ್ ಮಾಡಿರುವ ತಮ್ಮ ಮಗನ ಕನ್ನಡ ಅಕ್ಷರಮಾಲೆ ಕಲಿಕೆಯ ಹಾಡು. "
ಈಗಲೂ 'ರ' ಹೊರಳದ ಅವನ ನಾಲಿಗೆಯಲ್ಲಿ ಯರಲವ, ಯಲಲವ ಆಗೇ ನಲಿಯೋದು. ಕೆಲವೊಮ್ಮೆ ಅದು ಯಲವಲ-ವೂ ಆಗಿ, ಹಾಗೆ ಆದಾಗಲೆಲ್ಲ 'ಅಯ್ಯೊ ಈ ಕನ್ನಡ ಅಕ್ಷರ ಮಾಲೆ ಎಷ್ಟು ಮುದ್ದಾಗಿದೆಯಲ್ಲ' ಅನ್ನಿಸಿ, ನಿಶುವಿನ ಮೇಲೂ, ಕನ್ನಡದ ಮೇಲೂ ಒಟ್ಟೊಟ್ಟಿಗೇ ಮುದ್ದು ಉಕ್ಕಿ ಬರುವುದೂ ಉಂಟು" ಎಂದು ಅವರು ಬರೆದ ಸಾಲುಗಲೇ ನಿಶುವಿನ ಮೇಲೆ ಮುದ್ದು ತರುವಂತಿವೆ.
ಇವನ್ನು ಓದಿ, ಕೇಳಿ ಖುಷಿ ಪಡುವ ಭಾಗ್ಯ ನಿಮ್ಮದೂ ಆಗಲೀಂತ ಇಲ್ಲಿ ಅವುಗಳ ಲಿಂಕು ಕೊಡುತ್ತಿದ್ದೇನೆ:
No comments:
Post a Comment