ಮತ್ತೊಂದು ಖುಷಿಯ ದಿನ ನಿನ್ನೆ. ತಿಂಗಳಿಂದ ಪಟ್ಟಿದ್ದ ಶ್ರಮ ಸಾರ್ಥಕವಾಯ್ತು. ವಾರದಿಂದ ಮಾಡಿಕೊಂಡಿದ್ದ ಟೆನ್ಷನ್ನೆಲ್ಲ ಕಳೆದು ಒಂದು ಸುಧೀರ್ಘ ನಿಟ್ಟುಸಿರು ಬಿಡುವಂತಾಯ್ತು.
ನೂರಿಪ್ಪತ್ತಕ್ಕೂ ಹೆಚ್ಚು ಬ್ಲಾಗಿಗರಿಂದ, ಓದುಗರಿಂದ, ಸಾಹಿತ್ಯಪ್ರೇಮಿಗಳಿಂದ, ಕನ್ನಡಿಗರಿಂದ ತುಂಬಿ ತುಳುಕುತ್ತಿತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ಸಭಾಂಗಣ. ನಮ್ಮೆಲ್ಲರ ಪ್ರೀತಿಯ ಪವನಜ, ನಾಡಿಗ್, ರಶೀದ್, ಶ್ಯಾಮ್ ತುಂಬಾ ಚೆನ್ನಾಗಿ ಮಾತಾಡಿದ್ರು. ನಂತರ ನಡೆದ ಚರ್ಚೆ ಸಹ ಫಲಪ್ರದವಾಗಿತ್ತು. ಚಹ, ಹವೆಗೆ ತಕ್ಕಷ್ಟೇ ಬಿಸಿ ಇತ್ತು. ಯಾರ್ಯಾರೆಲ್ಲ ಬಂದಿದ್ರು, ಎಷ್ಟೆಷ್ಟು 'ಹಾಯ್'ಗಳು ವಿನಿಮಯವಾದ್ವು, ಎಷ್ಟು ಜನ ಎಷ್ಟು ಜನರ ಕೈ ಕುಲುಕಿದ್ರು, ಆಹ್! ಒಂದು ಯಶಸ್ವೀ ಕಾರ್ಯಕ್ರಮ ಕೊಟ್ಟ ಸಂಭ್ರಮದಲ್ಲಿ ಪ್ರಣತಿ, ನೋಡಿ, ಹೇಗೆ ನರ್ತಿಸುತ್ತಾ ಬೆಳಗುತ್ತಿದೆ..!
ಬಂದವರಿಗೆ, ಬರಕ್ಕಾಗಲ್ಲ ಅಂತ ಎಲ್ಲೆಲ್ಲಿಂದಲೋ ವಿಶ್ ಮಾಡಿದವರಿಗೆ... ಎಲ್ಲರಿಗೂ ಪ್ರೀತಿಯ ಥ್ಯಾಂಕ್ಸ್.
ದಟ್ಸ್ ಕನ್ನಡದಲ್ಲಿ ವರದಿ
ಕೆಂಡಸಂಪಿಗೆಯಲ್ಲಿ ವರದಿ
8 comments:
ವಿವರಗಳನ್ನು ನೋಡಿ ಖುಷಿಯಾಯಿತು - ಈ ರೀತಿ ಜನರನ್ನು ಒಟ್ಟು ಸೇರಿಸಿ, ಕೂಟ ನಡೆಸುವ ಆನಂದ ಬಲು ಹೆಚ್ಚಿನದು :)
ಒಳ್ಳೆ ಕೆಲಸ ಮಾಡಿದ ’ಪ್ರಣತಿ’ ತಂಡದವರಿಗೆಲ್ಲ ಅಭಿನಂದನೆಗಳು.
-ಹಂಸಾನಂದಿ
Namaste,
gambheera kaaraNadindaagi nAnu baralAgalilla. tumba miss mADikonDe.
nimmannella BheTiyAgi mAtanADuva avakAShakkAgi kAyuttiruttEne.
kAryakramada yaShassige abhunandanegaLu.
- Chetana Teerthahalli
ವೆಬ್ ದುನಿಯಾ ಕನ್ನಡದಲ್ಲೂ ವರದಿ ಪ್ರಕಟವಾಗಿದೆ.
URL:
http://kannada.webdunia.com/miscellaneous/literature/articles/0803/17/1080317040_1.htm
ಧನ್ಯವಾದ
`ಬ್ಲಾಗೀ ಮೀಟ್' ಒಂದು ಸಣ್ಣ update ನೋಡಿ:
http://manasu-hakki.blogspot.com/
ವೈಯಕ್ತಿಕವಾಗಿ ಬರಲಾಗದಿದ್ದರೂ, ವರದಿ ಓದಿ ಖುಶಿಯಾಯ್ತು.
ಸುಶ್ರುತ,
ಒಂದು ಅಪ್ ಡೇಟ್ ನೋಡಿ
ಬ್ಲಾಗೀ ಮಿಲನದ ಫೋಟೋಗಳು…ಜೊತೆಗೆ
Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !
ನೆಕ್ಸ್ಟ್ ಪೋಸ್ಟ್ ಪ್ಲೀಸ್!!
yenro maaraya yeno jooru kaarya krama galu.. olledu... link bidti nin blogige..
Post a Comment