Monday, August 03, 2009
ಖುಶಿಯ ಕರೆಯೋಲೆ
ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು, ನಂಗೆ ಖುಶಿಯಾಗಿದೆ! :-)
ಯಾಕೇಂದ್ರೆ, ನನ್ನದೊಂದು ಲಲಿತ ಪ್ರಬಂಧಗಳ ಸಂಕಲನ ಹೊರಬರುತ್ತಿದೆ. 'ಹೊಳೆಬಾಗಿಲು' ಅಂತ ಹೆಸರಿಟ್ಟಿದ್ದೇನೆ. ನಮ್ಮೆಲ್ಲರ ಪ್ರೀತಿಯ ಜೋಗಿ, ಇದಕ್ಕೆ ಮುನ್ನುಡಿ ಬರೆದು ಕೊಟ್ಟಿದಾರೆ. 'ಪ್ರೀತಿಯ ಹುಡುಗಿ'ಯ ಪ್ರೀತಿಯ ಹುಡುಗ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡ್ತಾರೆ. ಪುಸ್ತಕದೊಳಗೆ ಗೆಳೆಯ ಕಲಾಕಾರ ರಾಘು ಬಿಡಿಸಿದ ರೇಖಾಚಿತ್ರಗಳಿವೆ. ನನ್ನ ಕಾಟ ಎಲ್ಲಾ ಸಹಿಸಿಕೊಂಡು ಮುಖಪುಟ ರೂಪಿಸಿಕೊಟ್ಟದ್ದು ನೆಂಟ ರವೀಶ. ನಮ್ಮದೇ ಸಂಸ್ಥೆ ಪ್ರಣತಿ ಪ್ರಕಟಿಸ್ತಿರೋ ಈ ಪುಸ್ತಕ, ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪ್ರೋತ್ಸಾಹ ಪ್ರಕಟಣೆ ಯೋಜನೆಯಲ್ಲಿ ಆಯ್ಕೆಯಾಗಿತ್ತು.
ಅವತ್ತೇ ಡಾರ್ಲಿಂಗ್ ಶ್ರೀನಿಧಿಯ ಕವನಗುಚ್ಛ 'ಹೂವು ಹೆಕ್ಕುವ ಸಮಯ'ವೂ ಬಿಡುಗಡೆಯಾಗ್ತಿದೆ. ಅದರ ಬಗ್ಗೆ ಮಾತಾಡೋರು ರಾಧಾ-ಮಾಧವರು ಹರಸಿಹರೇನೋ ಎಂಬಂತೆ ಬರೆವ ಕವಿ ಎಚ್ಚೆಸ್ವಿ. ಜೋಗಿ ಸರ್ ಆಗೋದೇ ಇಲ್ಲ ಅಂದ್ರೂನೂ "ನೀವು ವೇದಿಕೆ ಮೇಲೆ ಇರಲೇಬೇಕು" ಅಂತ ನಾವು ಹಟ ಮಾಡಿ ಒಪ್ಪಿಸಿದ್ದೇವೆ. ಅವರು ಒಪ್ಪಿಕೊಂಡಿದಾರೆ.
ಮನೆಗೆ ಫೋನ್ ಮಾಡಿ ಅಪ್ಪ-ಅಮ್ಮ ಇಬ್ರೂ ಬನ್ನಿ ಅಂತ ಹೇಳಿದ್ರೆ "ಮಗನೇ ಮಳೇ ಅಂದ್ರೆ ಮಳೆ. ತ್ವಾಟಕ್ಕೆ ಕೊಳೆ ಔಷಧಿ ಹೊಡೆಸ್ತಾ ಇದ್ದಿ. ಅಲ್ದೇ ಅಜ್ಜನ್ನ ಒಬ್ಬವನ್ನೇ ಬಿಟ್ಟಿಕ್ ಬರಕ್ಕೆ ಆಗದಿಲ್ಲೆ. ಯಾರಾದ್ರೂ ಒಬ್ಬರಾದ್ರೂ ಬರಕ್ಕೆ ಟ್ರೈ ಮಾಡ್ತ್ಯ" ಅಂತ ಹೇಳಿದ್ದಾರೆ.
ಇನ್ನೇನು ಉಳೀತು? ಈ ಖುಶಿಯೆಲ್ಲ ಡಬಲ್ ಆಗಲಿಕ್ಕೆ ನೀವು ಬರಬೇಕು. ಈ ಅಕ್ಷರಗಳನ್ನೇ ಅಕ್ಷತೆ ಅಂದ್ಕೊಂಡು ಸ್ವೀಕರಿಸಿ. ನಾನು, ನಿಧಿ ಮತ್ತು ಪ್ರಣತಿಯ ಗೆಳೆಯರೆಲ್ಲ ನಿಮ್ಮನ್ನ ಎದುರುಗೊಳ್ಳಲಿಕ್ಕೆ ಕಾಫಿ ಸಮೇತ ಕಾಯ್ತಿರ್ತೀವಿ. ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಹಾಲ್ನಲ್ಲಿ ಬರೋ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ. ಇನ್ವಿಟೇಶನ್ ಇಲ್ಲಿದೆ.
ತಪ್ಪಿಸಿದ್ರೆ ನಮಗೆ ಬೇಜಾರಾಗತ್ತೆ. ಹಾಗೆ ಮಾಡ್ಬೇಡಿ.
ಕಾಯುತ್ತಾ,
ಪ್ರೀತಿಯಿಂದ,
-ಸು
Subscribe to:
Post Comments (Atom)
27 comments:
:) :) :) :) :)ನಂಗೂ ಖುಷಿ ಆಗಿದೆ.
ಶುಭಾಶಯಗಳು....
ಸುಶ್ರುತ....
ತುಂಬಾ ಖುಷಿಯಾಯ್ತು...
ಪುಸ್ತಕ ಬಿಡುಗಡೆ ವಿಷಯ ತಿಳಿದು
ಹಾಗೆಯೇ ಜೋಗಿಯನ್ನು ಹಿಡಿದುದಕ್ಕೂ ಕೂಡ ಖುಷಿಯಾಯಿತು......
ಶ್ರೀನಿಧಿಗೂ, ನಿಮಗೂ ಶುಭ ಹಾರೈಸುತ್ತೇನೆ...
ಬರೆ ಟೀ, ಕಾಫೀ ಸಾಲೋದಿಲ್ಲ...
ತೀಂಡಿವ್ಯವಸ್ಥೆಯೂ ಇರಲಿ...
ನಾನೂ ನಿಮ್ಮ ಖುಷಿಯಲ್ಲಿ ಭಾಗಿಯಾಗುತ್ತೇನೆ..
ಸುಚಿತ್ರದಲ್ಲಿ....
ಸುಶ್ರುತ,
ಕೇರಳದಿಂದ ಬೆಳಿಗ್ಗೆ ೯ ಗಂಟೆಗೆ ಬೆಂಗಳೂರಿಗೆ ಬಂದಿರುತ್ತೇನೆ. ಅಲ್ಲಿಂದ ನೇರ ಸುಚಿತ್ರ ಪಿಲ್ಮ್ ಸೊಸೈಟಿ ಹಾಲ್ ಕಡೆಗೆ. ಸರಿಯಾದ ಸಮಯಕ್ಕೆ ಗೆಳೆಯರೊಂದಿಗೆ ಅಲ್ಲಿರುತ್ತೇನೆ...
ಮತ್ತೆ ಪುಸ್ತಕದ ವಿನ್ಯಾಸ ಇಷ್ಟವಾಯ್ತು...
ಶ್ರೀನಿಧಿಗೂ ನನ್ನ ಶುಭಾಶಯಗಳು.
ಶುಭಾಶಯಗಳು ಸುಶ್ರುತ.. :)
ಸುಶ್ರುತ ರವರೆ,
ಅಭಿನಂದನೆಗಳು
ನಿಮ್ಮ ಕಾರ್ಯಕ್ರಮಕ್ಕೆ ಶುಭ ಕೋರುತ್ತೇನೆ
ಬರೀ ಕಾಫೀನಾ???? ಸಾಲಲ್ಲ!!!
ಸುಶ್, ಎಲ್ಲಾ ಚೊಲೋದಾಗ್ಲಿ..!
ಅಭಿನಂದನೆಗಳು ಸುಶ್!
ಪುಟ್ಟಣ್ಣಾ...
ಖುಷಿ ಕಣೋ...
ಇಂಥದೊಂದು ದಿನಕ್ಕೆ ಇಲ್ಲಿಂದಲೇ ಶುಭಾಶಯ. ನಂಗೊಂದು ಪುಸ್ತಕ ಎತ್ತಿಡು. ನಾನೂ ಓದ್ಬೇಕು.
‘ಹೊಳೆಬಾಗಿಲು’ ತೆರೆದು ಓದಲು ಕಾಯ್ತಿದ್ದೇನೆ.
ಒಂದಿಷ್ಟು ಪ್ರೀತಿ. ಬೆನ್ನಿಗೊಂದು ಗುದ್ದು. ಖುಷಿ ಖುಷಿ.
ಅಲ್ಲೇ ಶ್ರೀನಿಧಿಗೂ ನನ್ನ ಶುಭಾಶಯ ಹೇಳ್ಬಿಡು.
ಪ್ರೀತಿಯಿಂದ,
ಪುಟ್ಟಕ್ಕ.
ಸುಶ್,
ಶುಭಾಶಯಗಳು ಮತ್ತು ಹರಕೆ ಹಾರೈಕೆಗಳು. ನಿನ್ನ ಹಳೇ ಪುಸ್ತಕವನ್ನೂ ಇದನ್ನೂ ಜೊತೆಗೇ ಪಡೆಯುತ್ತೇನೆ, ಸಿಕ್ಕಾಗ.
ಪ್ರೋಗ್ರಾಂ ಚೆಂದಾಗಲಿ.
nangoo bhaaLa khushi... kaaryakramakke shubha haaraikegaLu
ಅಭಿನಂದನೆಗಳು!
ಸುಶ್,
ಹೊಳೆಬಾಗಿಲನ್ನು ನನಗೂ ತೆರೆದಿಡಪ್ಪ..:) ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆಯಲೆಂದು ಹಾರೈಸುವೆ.
ಸುಶ್ರುತ ,
ಶುಭಾಶಯಗಳು ! ಕಾರ್ಯಕ್ರಮ ಸುಂದರವಾಗಿ ಮೂಡಿಬರುತ್ತದೆ ಎಂಬ ಭರವಸೆಯಿದೆ. ಕನ್ನಡಕ್ಕೆ ಇನ್ನೊಬ್ಬ ಒಳ್ಳೆಯ ಯುವ ಬರಹಗಾರ ಸಿಕ್ಕಿದಕ್ಕೆ ಖುಷಿಯಾಗ್ತಾ ಇದ್ದು.
ಹೀಗೆ ಸಾಹಿತ್ಯ ಸೇವೆ ಮುಂದುವರೀಲಿ ಅಂತ ಇಲ್ಲಿಂದಲೇ ಹೃತ್ಪೂರ್ವಕವಾಗಿ ಹಾರೈಸ್ತಿ !
ಸದ್ಯಕ್ಕೆ ನಾನು ಹೊರನಾಡ ಕನ್ನಡತಿ. ಹಾಂಗಾಗಿ ಪುಸ್ತಕನಾ ನಾನು ಹೇಗೆ ತಗಳ್ಳಕ್ಕು ಹೇಳ್ತ್ಯ? ಅಥವಾ ಬೆಂಗಳೂರಲ್ಲಿ ಎಲ್ಲಿ ಸಿಕ್ತು ಹೇಳಿದ್ರೆ , ಅಲ್ಲಿಂದ ತರಿಸ್ಕ್ಯಳ ವ್ಯವಸ್ಥೆ ಮಾಡ್ಕ್ಯತ್ತಿ ನಾನು.
ನಿಮಗೂ, ಶ್ರೀನಿಧಿಯವರಿಗೂ ಕಂಗ್ರಾಟ್ಸ್... ನಿಮ್ಮ ಪುಸ್ತಕ ಬಿಡುಗಡೆ ವಿಷಯ ತಿಳಿದು ನಂಗೆ ತುಂಬಾ ಖುಷಿಯಾಯಿತು. ಕಾರ್ಯಕ್ರಮ ಚೆನ್ನಾಗಿ ನೆರವೇರಲಿ ಎಂದು ಹಾರೈಸುತ್ತೇನೆ.. ನಂಗೆ ಬರಲಿಕ್ಕಾಗುವುದಿಲ್ಲವಲ್ಲ ಎಂಬುದೊಂದೇ ಬೇಜಾರ್....
Sapna
Sush,
Congrats :) barde ippale hegagtu ?
Cheers
Chin
ಖಂಡಿತ ಶುಭವಾಗಲಿ.
ಅಂದ ಹಾಗೆ ತಿಂಡಿ ಉಪ್ಪಿಟ್ಟು ಮಾತ್ರ ಬೇಡ. ನಾನು ಆಂತಾರಾಷ್ಟ್ರೀಯ ಉಪ್ಪಿಟ್ಟು ವಿರೋಧಿಗಳ ಸಂಘದ ಅಧ್ಯಕ್ಷ.
-ಪವನಜ
sushruta avare,
pustaka hora taruttiddeera idu kushiyaada vishaya. nanna shubhaashayagaLu :)
ಕೆಲವರು ವಿಳಾಸ ಕೇಳ್ತಿದಾರೆ. ವಿಳಾಸ ಹೀಗಿದೆ:
Suchitra Film Society,
# 36, 9th Main, BV Karanth Road,
II Stage, Banashankari,
Bangalore - 560 070.
Landmark: Banashankari BDA Complex.
You can find it here on the yahoomaps.
amazing, great, congratulations.
shashi
Best of luck Sush :)
ShubhashayagaLu..
Naanoo samarambhakke baralu uthsukanagiddene.... :-)
congrats sush..
ಶುಭಾಶಯಗಳು ಸುಶ್ರುತ :) ಸುಚಿತ್ರದಲ್ಲಿ ಸಿಕ್ತಿ :)
ಸುಶ್ರುತ ಊರಿಂದ ಬಂದಿದ್ದೇ ಇವತ್ತು ರವಿವಾರ ಬರ್ತೇನಿ...
ಶುಭಾಶಯಗಳು....ಸುಶ್ರುತ!
ಪುಸ್ತಕ ಬಿಡುಗಡೆ ವಿಷಯ ತಿಳಿದು ಖುಷಿಯಾಯಿತು :-)
Post a Comment