Tuesday, February 02, 2010

ಚಿತ್ರಸಂತೆ

ಬೆಳಗಿನಿಂದ ಸಂಜೆಯವರೆಗೆ
ಮರವೊಂದರ ಕೆಳಗೆ ನಿಂತಿದ್ದ
ತನ್ನ ಬೆತ್ತಲೆ ಬೆಡಗಿ
ಈಗ ಈ ಮಬ್ಬುಗತ್ತಲಲ್ಲಿ
ಚೌಕಾಶಿ ಗ್ರಾಹಕನಿಗೆ
ವಿಕ್ರಯವಾಗುತ್ತಿರುವಾಗ
ಕುಂಚದ ಕುಸುಮಗಳು
ಬಿಕ್ಕಳಿಸಿದ ಸದ್ದು
ಕಲಾವಿದನ ಜೋಳಿಗೆಯ ಒಳಗೆ
ಭದ್ರ.

ಮಟಮಟ ಮಧ್ಯಾಹ್ನ
ಈ ಬೆಡಗಿಯ ತೆರೆದ
ಎದೆಯ ಮೇಲೆ ಬಿದ್ದೊಂದು
ಹಣ್ಣೆಲೆಯನ್ನು ಕಲಾವಿದ
ಬೇಷರತ್ ಪಕ್ಕಕ್ಕೆ ಸರಿಸಿದ್ದು
ಹಾಯುವ ಸಾವಿರ
ಕಾಲುಗಳ ನೆರಳಲ್ಲಿ
ಮರೆ.

ಲಕ್ಷ ಕಣ್ಣುಗಳ
ತಿನ್ನುವ ನೋಟಕ್ಕೆ ಬೆದರಿದ
ಬೆಡಗಿಯ ಎದೆಯ ಹಿಂದಿನ ತನ್ನದೇ
ಹೃದಯದ ಕಣ್ಣೀರು
ಅಭಿಧಮನಿಯಿಂದ
ಅಪಧಮನಿಗೆ ತೊಟ್ಟಿಕ್ಕಿದ್ದು
ಕಲಾವಿದನ ಜುಬ್ಬದ ತೆರೆಯಲ್ಲಿ
ಆಶ್ರಿತ.

ಮಗಳ ಮಾರಿ ಸಿಕ್ಕ ನೋಟು
ಜೋಳಿಗೆಯಲ್ಲಿ ತುರುಕುವಾಗ
ನಡುಗಿದ ಕಲಾವಿದನ
ಕೈಯ ಬೆರಳುಗಳ ನಡುವೆ
ಈಗ ಸಿಗರೇಟೊಂದು
ಕುಬ್ಜವಾಗುವಾಗುತ್ತಿರುವಾಗಲೇ
ಸಂತೆಗೆ ಕತ್ತಲು ಕವಿದು

ಓಕಳೀಪುರದ ಹಳೇ
ಸೇತುವೆಯ ಪಕ್ಕ
ಅದೇ ಭಂಗಿಯ
ತೆರೆದೆದೆಯ ಬೆಡಗಿಯ
ನಿತ್ಯಚಿತ್ರವನ್ನು
ನಗರಿಯ ಕುಂಚ
ಅನಾವರಣಗೊಳಿಸುತ್ತಿತ್ತು.

24 comments:

PARAANJAPE K.N. said...

ಸುಶ್ರುತ, ಬಹಳ ಚೆನ್ನಾಗಿದೆ ಕವನ,

ಕ್ಷಣ... ಚಿಂತನೆ... said...

ಸರ್‍, ಚಿತ್ರ ಸಂತೆಯ ಬಗ್ಗೆಯ ಈ ಕವಿತೆ, ಬೆಳಗಿನಿಂದ ಸಂಜೆಯವರಗಿನ ವಿದ್ಯಮಾನ ತಿಳಿಸುತ್ತಿದೆ.

ಧನ್ಯವಾದಗಳು,

kanasu said...

wow!!! tumba powerful agide!! naa odida nimma eevaregina kavanagalalli idu best!!! :)

sunaath said...

ಭೀಕರ ವಾಸ್ತವತೆ ಚಿತ್ರವಾಗಿದೆ,ಕವನವಾಗಿದೆ.

V.R.BHAT said...

good, ಚೆನ್ನಾಗಿದೆ, ದಿನದ ಕ್ಷಣ ಕ್ಷಣದ ಅವಲೋಕನ, ಅವಲಂಬನ, ಚಿರಂತನ , ಕಾವ್ಯ ಇನ್ನೂ ಮೂಡಿಬರಲಿ, ಶುಭ ಹಾರೈಕೆಗಳು

shivu.k said...

ಕವಿತೆಯ ಆಳ ಇಷ್ಟವಾಯ್ತು. ಕುಂಚಗಳು ಬಿಕ್ಕಳಿಸಿದ್ದು ನಿಜಕ್ಕೂ ಹೊಸ ಕಲ್ಪನೆ.

ಸಾಗರದಾಚೆಯ ಇಂಚರ said...

ಸುಶ್ರುತ ಸರ್,
ತುಂಬಾ ಚೆನ್ನಾಗಿ ಕವನವನ್ನು ಶಬ್ದಗಳಲ್ಲಿ ಸೆರೆ ಹಿಡಿದಿದ್ದಿರಿ
ಸುಂದರವಾಗಿದೆ

Nisha said...

Chennagide kavana

Narayan Bhat said...

ಸಂತೆಯಲ್ಲಿ ಬಿಕರಿಯಾಗುವ ಚಿತ್ರಗಳ ನೋವಿನ ಚಿತ್ರ ಕಣ್ಣೆದುರಿಗೆ ಕಟ್ಟುವಂತಿದೆ.

ನಾಗರಾಜ್ .ಕೆ (NRK) said...

u hav shown chitrasante.... its really very good....

Parisarapremi said...

mizaru, kikazaru, iwazaru - andkond irorge ivella kaaNsolla.

ಸುಮ said...

ಚೆನ್ನಾಗಿದೆ ಕವನ. ನಿಜವಾದ ಕಲಾವಿದನಿಗೆ ತನ್ನ ಸೃಷ್ಠಿ ಸ್ವಂತ ಮಗುವಂತೆಯೆ , ಅದನ್ನು ಮಾರುವಾಗ ಆಗಬಹುದಾದ ನೋವು ಅದಕ್ಕೆ ಬೆಲೆಕಟ್ಟುವವನಿಗೆ ಅರ್ಥವಾಗುವುದು ಕಷ್ಟ.
ಕವನದ ಕೊನೇ ಪ್ಯಾರಾದಲ್ಲಿನ ಭೀಕರ ವಾಸ್ತವತೆಯ ಚಿತ್ರಣ ಮನಕಲುತ್ತದೆ.

umesh desai said...

ಸುಶ್ರುತ ಕವನ ನಿಜಕ್ಕೂ ಚೆನ್ನಾಗಿದೆ ಒಳಗನ್ನು ಬೆತ್ತಲಾಗಿಸುವ ಪರಿ ಹಾಗೂ ಅದನ್ನು ನೀ ಹೇಳಿದ ರೀತಿ ಅಭಿನಂದನೀಯ

Subrahmanya said...

ಕುಂಚಗಳು ಬಿಕ್ಕಳಿಸಿದ್ದು ಹೊಸ ಕಲ್ಪನೆ ಮತ್ತು ವಾಸ್ತವದ ದರ್ಶನ...ಚೆನ್ನಾಗಿದೆ ಕವನ್

supthadeepthi said...

ಸುಶ್, ಕವನ ಹೊಸೆದ ರೀತಿ ಚೆನ್ನಾಗಿದೆ. ಅದರಲ್ಲೂ ಕೊನೆಯ ಚರಣದ ಅರ್ಥವ್ಯಾಪ್ತಿ ನೈಜ ಲೋಕಕ್ಕೆ ಕನ್ನಡಿ. ಒಳ್ಳೆಯ ಕವನ.

ಅನಿಕೇತನ ಸುನಿಲ್ said...

Tumba Chennagide sush....

Sushrutha Dodderi said...

ಪ್ರತಿಕ್ರಿಯಿಸ್ತಿರೋ ಎಲ್ಲರಿಗೂ ಧನ್ಯವಾದಗಳು.

@kanasu,
Huh! :O Mean it?

Parisarapremi,
ಕರೆಕ್ಟ್ ನೋಡಿ! ಟಾಂಡ್ರಿಯನ್, ಬ್ರಿರೋಜೆ, ಮಾರ್ವೋಚ್ ಇತ್ಯಾದಿ ಅಂದ್ಕೊಳ್ಳೋರಿಗೂ ಅರ್ಥ ಆಗಲ್ಲ. ಅಲ್ವಾ? :P

kanasu said...

yeaa!!! i liked it...i think it is also the subject matter that gave it a much more weightage!

Pramod P T said...

ವ್ಹಾವ್! ತುಂಬಾ ಚೆನ್ನಾಗಿದೆ ಸುಶ್ರುತ. ಒಂದೊಂದು ಸಾಲು ಕೂಡ.
ಈ ಬಾರಿ ಚಿತ್ರಸಂತೆ ಮಿಸ್ ಆಗೋಯ್ತು :(

Dr.D.T.Krishna Murthy. said...

Excellent poem. Wonderful expressions. It was painful to see people haggling with the artists for a paltry few rupees for an excellent piece of art. The helplessness of the artists was palpably visible. Kindly visit my blog and give your comments.

ಶ್ರೀನಿಧಿ.ಡಿ.ಎಸ್ said...

khushyato, nice.

Phaneendra Hegde said...

Tumba chennagiddu Sushrutanna.......one of d best poem i ever read....
-----------------Phaneendra Hegde

Anonymous said...

SAAAAAAR NEEVU KADEGU MALLESHWARAMNA BAGGE BAREDE ILLAA.NIMMA BARAVANIGEYA NIREEKSHEYALLI NAAVU SADAA NAAVU.

jaya shetty said...

Very nice