೧
ಕಾವಲಿಯ ಮೇಲೆ ಹಾಕಿದ ರವೆ
ದೋಸೆಯಂತೆ ಅದನ್ನೂ ನೀಟಾಗಿ ಸಟ್ಟುಗದಿಂದ
ಎತ್ತುವಂತಿದ್ದರೆ ಮಡಿಚಿ
ಚೀಲದಲ್ಲಿಟ್ಟು ಒಯ್ಯುತ್ತಿದ್ದೆ ನಾನು..
ತಾಸುಗಟ್ಟಲೆ ಕೂತು ತದೇಕ,
ಜತನದಿಂದ ಹಾಕಿದ್ದ ಆ ರಂಗೋಲಿ*
ಆಮೇಲೆ ಏನಾಯಿತು?
ಬಿಳಿ ಬಣ್ಣದ ಪುಡಿಹಾಸ ಮೇಲೆ
ಕೈಕೈ ಹಿಡಿದಾಡುತ್ತಿದ್ದ ಪುಟ್ಟ ಬಾಲಕರು
ಇನ್ನೂ ಎಷ್ಟು ಹೊತ್ತು ಹಾಗೇ ಇದ್ದರು?
ಹಸಿಹಸಿರು ಗಿಡದ ರೆಂಬೆ
ಬಾಡಲಿಲ್ಲ ತಾನೆ?
ಎವೆಯಿಕ್ಕದ ಗೂಬೆಯ ಕಣ್ಣನ್ನು
ಹಾರಿ ಬಂದ ಹರಾಮಿ ಧೂಳು ಮುಚ್ಚಿತಾ?
ಕಳೆಗುಂದಿದವೇ ಚಂದ್ರ-ಚುಕ್ಕಿ
ಕರಗಿದಂತೆ ಇರುಳು?
ಮರುಮುಂಜಾನೆ ಕಸ ಗುಡಿಸಲು ಬಂದ
ಕೆಲಸದವಳು ನಿಂತಳೇ ಬೆರಗಾಗಿ?
ಗೂಬೆ-ಗಿಡ-ಹುಡುಗರ ಹೆಡೆಮುರಿ
ಕಟ್ಟಿ ಒಯ್ಯುವ ಮುನ್ನ ಅವಳು,
ಪೊರಕೆ ಮೈತಡವಿದ ಕ್ಷಣ ಆದ
ಕಚಗುಳಿಗೆ ರಂಗೋಲಿಯ ಕಣಗಳು
ನಾಚಿದವಾ?
ಬದುಕಲ್ಲಿ ಖುಶಿ ಕ್ಷಣಿಕ ಎಂದು
ಬಿಕ್ಕಳಿಸಿತಾ ಮಿಶ್ರಬಣ್ಣ?
ಬಣ್ಣಗಳು ಬಿಡಿಬಿಡಿಯಾಗಿದ್ದರಷ್ಟೇ ಅರ್ಥ.
ಕಲಸಿಬಿಟ್ಟರೆ ಎಲ್ಲಿ ರಂಗೋಲಿ?
೨
ಎಂದು ಬರೆದಿಟ್ಟಿದ್ದ ನನ್ನ ಕವನ ಓದಿದ ಗೆಳೆಯ,
"ಅಯ್ಯೋ ಭಾವುಕ ಹುಚ್ಚನೇ,
ವರುಷಗಟ್ಟಲೆ ಜೋಪಾನ ಮಾಡಿದ್ದ ನನ್ನ ಹುಡುಗಿಗೆ
ನಿನ್ನೆ ಯಾರೊಂದಿಗೋ ಮದುವೆಯಾಯ್ತು"
ಎಂದು, ನಗುತ್ತ ಹೊರಟುಹೋದ.
--
* ಛಂದ ಪುಸ್ತಕ, ತನ್ನ ಸ್ಪರ್ಧೆಯಲ್ಲಿ ಗೆದ್ದ ಮುಖಪುಟವನ್ನು ಪುಸ್ತಕ ಬಿಡುಗಡೆ ಸಮಾರಂಭದ ದಿನ ರಂಗೋಲಿ ಹಾಕಿಸಿತ್ತು.
11 comments:
ಬಣ್ಣಗಳು ಬಿಡಿಬಿಡಿಯಾಗಿದ್ದರಷ್ಟೇ ಅರ್ಥ.
ಕಲಸಿಬಿಟ್ಟರೆ ಎಲ್ಲಿ ರಂಗೋಲಿ?
ಸುಂದರ ಸಾಲುಗಳು...
ತುಂಬಾ ಇಷ್ಟವಾಯಿತು.
ಬಣ್ಣ ಮತ್ತು ರಂಗೋಲಿಯ ಅರ್ಥ ನಮ್ಮ ಬದುಕಿಗೆ ಎಷ್ಟು ಹೋಲಿಕೆ? ಚೆನ್ನಾಗಿದೆ.
thumbaa ishta aaytu sushrutha
ಅಬ್ಬಾ !. lovely poem with lovely feelings !.
ಸುಶ್ರುತ ,
ನೀ ಬಿಡಿಸಿದ ರಂಗೋಲಿಯ
ಚೆಂದದ ಬಣ್ಣಗಳು ,
ಎಳೆದ ಗೆರೆಗಳು
ಕಡೆಗೊಮ್ಮೆ ಕಲೆಸಿಯೇ ಹೋಗಿದ್ದಕ್ಕಿಂತ
ಗೆಳೆಯನ ನಗುವಿನಲ್ಲಿನ ನೋವು ಹೆಚ್ಚು ವಿಷಾದ ತಂದಿತು
ಚೆಂದದ ಕವನ ,, ಬರೀತಾ ಇರು ಹೀಂಗೆ ....
ಆ ರಂಗೋಲಿಗೆ ನನ್ನ ಧನ್ಯವಾದಗಳು!
Good one Sushrutha!! that was one lovely Rangoli alwaa??
:-)
malathi S
M Knight shyamalan cinema galalli idiya cinemada thrill koneya 5 nimishadalli adagiruvante nimma kavanada koneya saalugalu thrilling agide. Good one.
Nice one
ಸೋ, ಹೀಗ್ಹೀಗೆಲ್ಲಾ ಇದೆ ಅಂತ ಆಯ್ತು. ಅದಕ್ಕೇ ಹೀಗ್ ಹೀಗೆಲ್ಲಾ ಆಗಿರೋದು.
ಚೆನ್ನಾಗಿದೆ ಕಣಯ್ಯಾ ರಂಗೋಲಿ.
ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.
malathi S,
ಹ್ಮ್ ಹ್ಮ್.. :-)
ಅರುಣ್,
ಕರೆಕ್ಟ್! :P
I understood the poem now... :-)its nice....
Post a Comment