ಆಮ್ಲೆಟ್ ಆಗದ ಒಂದು ಮೊಟ್ಟೆ
ತಾನೂ ಕವಿತೆಯಾಗುತ್ತೇನೆ ಎಂದಿತು
ಪರ್ಮನೆಂಟ್ ಮಾರ್ಕರ್ ಪೆನ್ನಿನಿಂದ
ಅದಕ್ಕೆ ಕಣ್ಣು ಮೂಗು ಬಾಯಿ ಬರೆದು
ಶೋಕೇಸಿನಲ್ಲಿಟ್ಟು
ದೋಶಮುಕ್ತನಾಗಲು ತೀರ್ಥಯಾತ್ರೆಗೆ ಹೊರಟೆ
ವಾಪಸು ಬಂದು ನೋಡಿದರೆ
ಅಂಗಳದ ತುಂಬ ಪುಟ್ಟಪುಟ್ಟ ಮರಿಗಳು
ಕಿಂವ್ಕಿಂವ್ಕಿಂವ್ಕಿಂವ್ ಗಲಾಟಿ
ಯಾವುದೋ ಒಂದು ಮರಿ ಎತ್ತಿಕೊಂಡು
ಹೆಸರೇನು ಕೇಳಿದೆ
ಕವಿತೆ ಅಂತ ಹೇಳಿತು
ಒಳಗೆ ಹೋಗಿ ನೋಡಿದರೆ
ಮುಖ ಒಡೆದು ಚೂರಾಗಿ
ಶೋಕೇಸೆಲ್ಲ ರಾಡಿ.
ಕಾಲಿಗೆ ಬಂದು ಮುತ್ತಿಕೊಳ್ಳುವ ಮರಿಗಳನ್ನು ನೋಡುತ್ತ
ಒಂದು ಮೊಟ್ಟೆಯೊಳಗೆ ಒಂದೇ ಕೋಳಿ
ಒಂದು ಕೋಳಿಯಿಂದ ನೂರಾರು ಮೊಟ್ಟೆ
ಅಂತೆಲ್ಲ ಬರೆಯಬಹುದು ಎಂದುಕೊಂಡೆ,
ಅಂತೂ ಚರ್ಚೆ ಮುಗಿಸಿದ ಮಹಾನುಭಾವರು ಹೊರಬಂದು
ಹೋಯ್, ಭಾರೀ ಲಾಯ್ಕಿವೆಯೋ ಮರಿಗಳು
ಎಂದರು.
11 comments:
ಕಲ್ಪನೆಗೆ ಲಯ ಸಿಕ್ಕಾಗ ಮೊಟ್ಟೆಯೂ ಸಹ ಕವನವಾಗಬಹುದು.
ಈ ಒಂದು ಮೊಟ್ಟೆ ಆಮ್ ಲೆಟ್ ಆಗಿದ್ದರೆ, ನೀವಷ್ಟೇ ತಿನ್ನುತ್ತಿದ್ದಿರಿ, ಕವನವಾದದ್ದರಿಂದ ನಾವೆಲ್ಲ ಸವಿಯುತ್ತಿದ್ದೇವೆ.
ಆಮ್ಲೆಟ್ ಕೋಳಿಮರಿ-ಕವಿತೆಯಾಗಿದ್ದು ಚೆನ್ನಾಗಿದೆ.
ಹಾ ಹಾ, ಚೆನ್ನಾಗಿ ಇದೆ ಮೊಟ್ಟೆಯ ಕವನ......
ಮೊಟ್ಟೆಯೂ ಸಹ ಕವಿತೆಗೆ ಸಹ್ಯವಾದದ್ದು ನಿಮ್ಮ ಕಲ್ಪನಾ ವಿಶೇಷ.
ಚೆನ್ನಾಗಿದ್ದು ...
ಸುಶ್ರುತ,
ನಿನ್ನ ಆಮ್ಲೆಟ್ ನ ಎರಡೂ ಭಾಗನು ಒಂದೇ ಸಲ ತಿಂದಿ ನೋಡು. ಭಾಳ ರುಚಿ ಇತ್ತಪ. ನೀ ಮಾಡಿದ ಮೇಲೆ ತಿನ್ಲಕ್ಕು. ಬ್ರಾಹ್ಮಣರ ಮಾಣಿ ಮಾಡಿದ್ದು ಮಡೀಲಿ ಹೇಳಿ . ಹಿ ಹಿ ಹಿ . ಏನು ತಿನ್ನದು ಹೇಳದು ಅವರವರ ಮನಸ್ಸಿಗೆ ಬಿಟ್ಟಿದ್ದು ಹೇಳಿ ನನ್ನ ಅಭಿಪ್ರಾಯ . ನಿಂಗೆ ಇಷ್ಟ ಆಗಿದ್ದು ನೀ ತಿನ್ನು ಜಾಸ್ತಿ ತಲೆ ಬಿಸಿ ಎಂತಕೆ? . ಹಿ ಹಿ ಹಿ
ಸುಶ್ರುತ ಈ ಕವನದಿಂದ ನಿಮ್ಮ ಕಮ್ ಬ್ಯಾಕ್ ಆಗಿದೆ....!
ಮೊಟ್ಟೆಯೋ ಕೋಳಿಯೋ ಅಂತೂ ಅದರಿಂದ ನಿಮ್ಮ ಕವಿತೆ ಹುಟ್ಟಿದ್ದು ಚೆನ್ನಾಗಿದೆ. ಹೀಗೆ ಆಮ್ಲೆಟ್ ಹಾಕ್ತಾ ಇರಿ.
naavellaa manassu maadiddare motteyinda aamlet aaguttittu... nimminda adu kavanavaagide.....
tumbaa chennaagide...
ಚೆನ್ನಾಗಿದೆ ಸುಶ್ರುತ..
ಮೌನಗಾಳದಲ್ಲಿ ಮೀನುಗಳಿಗಿಂತ ಅಮ್ಲೆಟ್ಟಿನದ್ದೇ ಹೆಚ್ಚು ವಾಸನೆ :)
ಕವಿತೆ ಎಂಬ ಕೋಳಿಮರಿ ಇಷ್ಟವಾಯ್ತು
@ All,
ಇದು ಆಮ್ಲೆಟ್ ಸೀರಿಸ್ಸಿನ ಎರಡನೇ ಕಂತು; ಬಹುಶಃ ಕೊನೇದೂ ಹೌದು. ಅಗೇನ್, ಕವಿತೆ ಪ್ರಯೋಗಕ್ಕೊಳಗಾಗಿದೆ.
ನಿಮ್ಮ ಮೆಚ್ಚುಗೆಗಳೆಲ್ಲ ಕವಿತೆ ಹುಟ್ಟಿದ ಕ್ಷಣಕ್ಕೆ. ಥ್ಯಾಂಕ್ಸ್! :-)
ಕವಿಯ ಕಲ್ಪನೆಗೆ
ಸಿಕ್ಕ ಪ್ರತಿಯೊಂದು ವಿಚಾರವೂ ಕಲಾತ್ಮಕವಾಗಿ ಮೂಡಿ ಬರುತ್ತದೆ ಎಂಬುದಕ್ಕೆ ನಿಮ್ಮ ಕವನವೇ ಸಾಕ್ಷಿ.
ಡಬಲ್ ಆಮ್ಲೆಟ್ ಸವಿ ಸವಿಯಾಗಿ ಮಾಡಿದ್ದೀರಾ....
ತುಂಬಾ ತುಂಬಾ ಚೆನ್ನಾಗಿದೆ.
Post a Comment