ನಾನು ಚಿಕ್ಕವನಿದ್ದಾಗ ಅಪ್ಪ ನನಗಾಗಿ ‘ಬಾಲಮಂಗಳ’ ಎಂಬ ಮಕ್ಕಳ ಪಾಕ್ಷಿಕವನ್ನು ತರಿಸುತ್ತಿದ್ದ. ಬಹುಶಃ ನನಗೆ ಓದಿನ ಹುಚ್ಚು ಶುರುವಾದದ್ದು ಆಗಿನಿಂದಲೇ ಇರಬೇಕು. ಅಪ್ಪ ನನಗಿಂತ ಒಳ್ಳೇ reader. ನಮ್ಮ ಮನೆಗೆ ಅನೇಕ ಒಳ್ಳೆಯ magazine ಗಳು ಬರುತ್ತಿದ್ದವು. ಸಾಗರದ ಲೈಬ್ರರಿಯಲ್ಲಿ ಅಪ್ಪನ membership ಇತ್ತು. ಅಪ್ಪ ಸಾಗರಕ್ಕೆ ಹೋದಾಗ ಪುಸ್ತಕ change ಮಾಡಿಸಿಕೊಂಡು ಬರುತ್ತಿದ್ದ. ಹೀಗಾಗಿ, ನಮ್ಮ ಮನೆ ಯಾವಾಗಲೂ ಪುಸ್ತಕಗಳ ಆಗರದಂತಿರುತ್ತಿತ್ತು. ಅಮ್ಮ, ಅಜ್ಜಿಯರೂ ಸಹ ಸದಾ ಏನನ್ನೋ ಓದುತ್ತಿರುತ್ತಿದ್ದರು.
ಇಂತಹ ಪರಿಸರದಲ್ಲಿದ್ದ ನನಗೆ ಸಹಜವಾಗಿಯೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಬಾಲಮಂಗಳದಿಂದ ನಿಧಾನಕ್ಕೆ ‘ಮಂಗಳ’ಕ್ಕೆ shift ಆದೆ. ಸಣ್ಣಪುಟ್ಟ ಕತೆಗಳನ್ನು ಓದಲಿಕ್ಕೆ ಶುರು ಮಾಡಿದೆ. ಚುಟುಕು, ಕವಿತೆಗಳು ಇಷ್ಟವಾಗತೊಡಗಿದವು. ಕಾದಂಬರಿಯ ಕಡೆಗೂ ಕಣ್ಣಾಡಿಸುತ್ತಿದ್ದೆ. ಆದರೆ ಅಪ್ಪ ತರುತ್ತಿದ್ದ ಕಾದಂಬರಿಯನ್ನು ಮೊದಲು ಅವನು ಓದುತ್ತಿದ್ದ, ಆಮೇಲೆ ಅಮ್ಮ ಓದುತ್ತಿದ್ದಳು, ಆಮೇಲೆ ಅಜ್ಜಿ... ಅಷ್ಟರಲ್ಲಿ ಒಂದು ವಾರ ಕಳೆದುಹೋಗಿರುತ್ತಿತ್ತು ಮತ್ತು ಅಪ್ಪ ಸಾಗರಕ್ಕೆ ಹೋಗುವ ದಿನ ಬಂದುಬಿಡುತ್ತಿತ್ತು. ಹಾಗಾಗಿ ನನಗೆ ಓದಲಿಕ್ಕೆ ಪುಸ್ತಕ ಸಿಗುತ್ತಲೇ ಇರಲಿಲ್ಲ. ಅಲ್ಲದೇ ನನಗೆ ಓದಲಿಕ್ಕೆ ಮನೆಯಲ್ಲಿ support ಕೂಡ ಇರಲಿಲ್ಲ. ಎಲ್ಲರೂ ನನಗೆ ‘ನಿನ್ನ education material ಓದ್ಕೋ’ ಅಂತ ತಾಕೀತು ಮಾಡುವವರೇ. ಹೀಗಾಗಿ ನಾನೂ ಹೆಚ್ಚು ಬಯ್ಯಿಸಿಕೊಳ್ಳುವ ಇಷ್ಟವಿಲ್ಲದೆ ಸುಮ್ಮನಾಗುತ್ತಿದ್ದೆ. ಅಲ್ಲದೇ school / college ಗೆ ಹೋಗಿ ಬಂದು, ಆಮೇಲೆ cricket ಆಡಿ ಬಂದು, ಆಮೇಲೆ ಸಂಧ್ಯಾ (ನನ್ನ ಎಕ್ಸ್-ಡವ್ವು!) ವಂದನೆ ಮಾಡಿ, ಆಮೇಲೆ ಊಟ ಮಾಡಿ, ಆಮೇಲೆ ಹೋಮ್‌ವರ್ಕ್ಸ್ ಮಾಡಿ.... ಅಷ್ಟರಲ್ಲಿ ನನಗೆ ನಿದ್ದೆ ಬಂದುಬಿಟ್ಟಿರುತ್ತಿತ್ತು; ಓದೋದು ಬೇಡ ಏನೂ ಬೇಡ ಅನ್ನಿಸುವಂತಾಗುತ್ತಿತ್ತು.
ಕೊನೆಗೆ ಓದು ಮುಗಿಸಿ(?) ಈ ಬೆಂಗಳೂರು ಎಂಬ ಕನಸಿನ ಊರಿಗೆ ಬಂದಾಯಿತು. ಇಲ್ಲಿ ಓದುವುದಕ್ಕಿರಲಿ, ಊಟ ಮಾಡುವುದಕ್ಕಿರಲಿ, ಕುಂಡೆ ತುರಿಸುವುದಕ್ಕೂ ಪುರುಸೊತ್ತಿಲ್ಲ! ಆಫೀಸಿಗೆ ಹೋಗಿ ಬರುವಷ್ಟರಲ್ಲಿ ಸಾಕು-ಬೇಕು ಅನ್ನುವಷ್ಟಾಗಿರುತ್ತೆ. ಇನ್ನೇನು ಓದೋದು? ಹಾಸಿಗೆ ಹಾಸಿ ಮಲಗುವುದಕ್ಕೊಂದು ಮನಸಾಗುತ್ತದೆ. ಆದಾಗ್ಯೂ, ಖುಷಿಯ ಸಂಗತಿಯೆಂದರೆ, ಈಗ ಎರಡು ವರ್ಷದಿಂದ ಪ್ರತಿ ತಿಂಗಳು ಎರಡು ಪುಸ್ತಕದಂತೆ ಖರೀದಿಸಿ ತರುತ್ತಿದ್ದೇನೆ. ನನ್ನ ಕಪಾಟು ಮಿನಿ ಲೈಬ್ರರಿಯಾಗುತ್ತಿದೆ. ನೋಡಿಕೊಂಡರೆ ನನಗೇ ಒಂಥರಾ ಸಂತಸವಾಗುತ್ತದೆ. ಎಷ್ಟೇ ನಿದ್ರೆ ಬಂದರೂ, ರಾತ್ರಿ ಹನ್ನೆರಡರವರೆಗೆ ಕೂತು ಓದುತ್ತೇನೆ. ಈಗ roomನಲ್ಲಿ ನಾನು ಒಬ್ಬನೇ ಇರುವುದರಿಂದ ನಾನು ಬಯಸುವ privacy ಸಿಕ್ಕಿದೆ. I’m happy nowadays.
ಸಧ್ಯಕ್ಕೆ ಎಸ್.ಎಲ್. ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನೂ collect ಮಾಡುತ್ತಿದ್ದೇನೆ. ನಿನ್ನೆ ರಾತ್ರಿ ‘ಪರ್ವ’ ಓದಿ ಮುಗಿಸಿದೆ. It’s a great experience reading it. ಆ ಕಾದಂಬರಿಯನ್ನು ಓದುತ್ತಿದ್ದಾಗ ಮತ್ತು ಓದಿದ ನಂತರ ಹೊಳೆದ ಕೆಲವು ಅಂಶಗಳನ್ನು -ವಿಮರ್ಶೆ ಅಂತ ಕರೆಯಬಹುದೇನೋ- ಇಲ್ಲಿ publish ಮಾಡುತ್ತಿದ್ದೇನೆ. ಈ ಹಿಂದೆ ಓದಿದ ಕೃತಿಗಳ ಬಗ್ಗೆಯೂ ಬರೆದಿಟ್ಟಿದ್ದೇನೆ, type ಮಾಡಿ upload ಮಾಡಬೇಕು time ಸಿಕ್ಕಾಗ. ಅದ್ಯಾವಾಗ ಸಿಗುತ್ತದೋ ಹಾಳು ಟೈಮು....?
1 comment:
ಸುಶ್ರುತ....
ಉಳಿದ ಪುಸ್ತಕಗಳ ಬಗ್ಗೆ ಯಾವಾಗ ಬರಿತೆ?
Post a Comment