ರಿಸೆಪ್ಷನಿಷ್ಟ್ ರಜೆಯಲ್ಲಿದ್ದಳು. ಇಪಿಎಬಿಎಕ್ಸ್ ನಾನೇ ಹ್ಯಾಂಡ್ಲ್ ಮಾಡುತ್ತಿದ್ದೆ. ಕ್ಲೈಂಟ್ ಜೊತೆ ಬಾಸ್ ಕಾನ್ಫರೆನ್ಸ್ ರೂಮ್ನಲ್ಲಿ ಮೀಟಿಂಗಿನಲ್ಲಿದ್ದರು. ಆ ಕ್ಲೈಂಟುಗಳು ಜಾಸ್ತಿ ತಲೆತಿನ್ನುತ್ತಿದ್ದರು ಅಂತ ಕಾಣ್ಸುತ್ತೆ. ಬಾಸ್ ಅಲ್ಲಿಂದಲೇ ನನ್ನ ಮೊಬೈಲಿಗೆ ಎಸ್ಸೆಮ್ಮೆಸ್ ಮಾಡಿದರು: 'Call me on the intercom and tell me that somebody is coming for meeting. I'll tell u to postopone it. U call again after 2 mins and tell me that they r already on the way'.
ಮೆಸೇಜು ಓದಿದಾಕ್ಷಣ ನಗು ಬಂತಾದರೂ ಇಂತಹ ಹಲ್ಕಾ ಕೆಲಸಗಳನ್ನು ಮಾಡಿ ನನಗೆ ರೂಢಿಯಿತ್ತಾದ್ದರಿಂದ ತಕ್ಷಣ ರಿಸೀವರ್ ಎತ್ತಿ ಟೂ ಏಟ್ ಒತ್ತಿದೆ. ಬಾಸ್ ಎತ್ತಿದರು. 'Sir, Mr. Dhyan from GE Countrywide is coming for a meeting' ಅಂದೆ. 'Now? Why isn't it been entered in the dairy? Call him and tell him to come tomorrow.' ರಿಸೀವರ್ ಇಟ್ಟ ಸದ್ದು. ಸದ್ದಾಗದಂತೆ ನಗುತ್ತಾ ನಾನೂ ಫೋನ್ ಇಟ್ಟೆ.
ಎರಡು ನಿಮಿಷ ಬಿಟ್ಟು ರಿಸೀವರ್ ಎತ್ತಿ ಮತ್ತೆ ಟೂ ಏಟ್ ಒತ್ತಿದೆ. 'Sir they have already left from their office' ಅಂದೆ. 'Oh shit! They are on the way is it? Ok... Let them come.. I'll conclude this meeting then..'
ಐದು ನಿಮಿಷದಲ್ಲಿ ಮೀಟಿಂಗ್ ಮುಗಿಯಿತು. ಆರನೇ ನಿಮಿಷದಲ್ಲಿ ಬಾಸ್ ಛೇಂಬರಿನಲ್ಲಿ ಕೇಳಿಬರುತ್ತಿದ್ದ ನನ್ನ-ಅವರ ಜೋರು ನಗೆಗೆ ಹ್ಯಾಂಗ್ ಮಾಡಿದ್ದ ಕೋಟು, ಟೇಬಲ್ ಕ್ಲಾಕು ಮತ್ತು ಡೈರಿಯ ಒಡಲಿನಿಂದ ಇಣುಕುತ್ತಿದ್ದ ಪಾರ್ಕರ್ ಪೆನ್ನಿನ ಮೂತಿ ಕಿವಿಯಾಗಿದ್ದವು.
17 comments:
welcome maga!!:)
hello..
"ಸುಶ್ರುತ ದೊಡ್ಡೇರಿ"ಹೆಸರು ನೋಡಿದ್ದು ಶ್ರೀನಿಧಿ ಚಾಟ್ ಸ್ಟೇಟಸ್ನಲ್ಲಿ ಹಾಗೆ ಪ್ರತಿಭೆ ನೋಡಿದ್ದು ಅವನ ಬ್ಲಾಗಿನ ಒಂದು ಕಮೆಂಟಿನಲ್ಲಿ ಹಾಗೆ ನಿಮ್ಮ ಬ್ಲಾಗನ್ನು ತೆರೆದು ನೋಡಿದಾಗ ತಿಳಿಯಿತು ನಮ್ಮಲ್ಲಿ ಎಲೆ ಮರೆಯ ಕಾಯಿಗಳು ಹಲವಾರು ಜನ ಅಂತಾ...ನಿಮ್ಮೆಲ್ಲರ ಪ್ರತಿಭೆಗೂ ಮುಂದೊಮ್ಮೆ ಬೆಲೆ ಸಿಕ್ಕೆ ಸಿಗುತ್ತದೆಂದು ಆಶಿಸುತ್ತೇನೆ..."ಮೀಟಿಂಗ್ ಮುಗಿಸಿದ್ದು" ಕಥೆಯ ಬಗ್ಗೆ ಏನು ಬರೀಲಿಲ್ಲ ಅಂತಾ ತಿಳಿಯಬೇಡಿ "ಸೂಪರ್ ಕಥೆ" ಹೀಗೆ ಬರೀತಾ ಇರಿ......
(ಬಾಸ್ ಆಗಿರುವವರು ಇಂತಾ ಉಪಾಯ ಹೇಳಿಕೊಟ್ಟರು ಅಂತಾ ಮುಂದೊಮ್ಮೆ "ಗುರುವಿಗೆ ತಿರುಮಂತ್ರ" ಆಗುದಿಲ್ಲಾ ಅಂತ ತಿಳಿದಿರುತ್ತೇನೆ)
ಸುಶ್, ಸಹವಾಸ ದೋಷದ ಪ್ರಭಾವ ಇದು...!!! ಡೌಟ್ ಇತ್ತು ನಂಗೆ, ಪ್ರೂಫ್ ಸಿಗ್ತು...!!!
ಪುಟ್ಟಣ್ಣ.
ಮಸ್ತಲಾ ಪುಟ್ಟ. ನನ್ನ ಹಳೆ ಆಫೀಸ್ ನಲ್ಲಿ ಇಂಥಾ ಕೆಲಸ ನೆಲ್ಲಾ ಮಾಡ್ತಾ ಇದ್ವಿ. ನಿನ್ನ ಲೇಖನ ಓದಿ ನಂಗೂ ನಗು ಬಂದಿತು. ಹಾಃ ಹಾಃ!
Nice observational report!. There are some clues of Sushrutha becoming a diplomat.
Regards
Dr.D.M.Sagar
Canada
ಹಹ್ಹಹ್ಹ. ಒಳ್ಳೇ ಹಾಸ್ಯ ಸುಶ್ರುತ.
ನಮ್ಮ ಕಚೇರಿಗೆ ಯಾವಾಗಲೂ ಫೋನ್ ಮಾಡೋ ಒಂದು ಕಿರಿಕ್ ಪಾರ್ಟಿಗೂ ಇದೇ ಪ್ರಯೋಗ ಮಾಡೋಣ ಎಂದಿದ್ದೇನೆ:)
@ ಶ್ರೀನಿಧಿ
ಬಂದಾತು! ;)
@ nishchith
ಥ್ಯಾಂಕ್ಸ್ ನಿಶ್ಚಿತ್. ನಿಮ್ಮ ಆಶಯ ಸುಳ್ಳಾಗದಿರಲಿ.
ಬಾಸ್ಗೆ ತಿರುಮಂತ್ರ... ನೋಡೋಣ, ಏನಾಗತ್ತೆ ಅಂತ..! :)
@ shree
ತಲೆಬಿಸಿ ಮಾಡ್ಕೋಬೇಡ ಶ್ರೀ.. ಏನೋ ಹಿಂಗೆ ಒಂದು ಟ್ರೈ ಮಾಡಿದೆ ಅಷ್ಟೆ.. ;)
@ ranju
ನೀನು ನಗ್ಯಾಡೋ ಸ್ಟೈಲ್ ನೋಡಿ ನಂಗೆ ನಗು ಬಂತು.. ;D
@ condumdots
Clue ಸಿಕ್ಕೇಬಿಡ್ತಾ?? ಛೇ! ನೋಡೋಣ, ನಿಮ್ಮ ಗೆಸ್ಸು ಸರಿಯೋ ತಪ್ಪೋ ಅಂತ .. ಮುಂದೆ ಗೊತ್ತಾಗತ್ತೆ.. :) :)
@ venu vinod
ರೀ, ಈ ಟ್ರಿಕ್ಕಿನ copyright ನಮ್ ಬಾಸ್ದು. ಅವ್ರ permission ಇಲ್ದೆ ನೀವು ಉಪಯೋಗಿಸಿದ್ರೆ notice ಕಳಿಸ್ತೇವೆ ಮತ್ತೆ..!! :O
'ಬಂದಾತು' ಅಂದರೆ? ತಾವು ಇನ್ನು ಮುಂದೆ ಹಾಸ್ಯ ಬರಹಗಳಲ್ಲಿ ಹೆಚ್ಚು ಕೈಯಾಡಿಸುತ್ತೀರಿ ಎಂದು ಅರ್ಥವೆ, ಸುಶ್ರುತರೇ?
@ shree
ಹಂಗೂ ಅರ್ಥ ಮಾಡ್ಕೋಬಹುದು. ಅಥ್ವಾ 'ಬಂದ್' ಆಯ್ತು -ಅಂದ್ರೆ ಇಲ್ಲಿಗೇ ಕೊನೆ ಅಂತ್ಲೂ ಅಂದ್ಕೋಬಹುದು! ಯಾವ್ದಕ್ಕೂ- ಕಾದು ನೋಡಿ...!! ;)
ನಮಸ್ಕಾರ ಸುಶ್ರುತ, ನಾನು ಶಂಕರ.
ಕಟ್ಟೆ-ಬಳಗ.ಬ್ಲಾಗ್ ಸ್ಪಾಟ್.ಕಾಂ ನನ್ನದೇ....
ಕತ್ತೆ ಸತ್ರೆ ಮೋಟು ಗೋಡೆ ಪಕ್ಕ...
ಇದರಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿದೆ. ಅದೇನು ವ್ಯಂಗ್ಯವೋ ಅಥವಾ ಬೇರೆ ಏನೋ ಎಂದು ಅರ್ಥ ಆಗಿಲ್ಲ...
ಸ್ವಲ್ಪ ನನ್ನ ಈ ಡೌಟನ್ನು ಕ್ಲಿಯರ್ ಮಾಡ್ತೀರಾ ??
ಆ ಲೇಖನವನ್ನು ಬರೆಯಲು ಕುಳಿತೆ.. ಏನೋ ಕೆಲಸ ಆಫೀಸಲ್ಲಿ ತಲೆ ಮೇಲೆ ಬಿತ್ತು..ಅದಕ್ಕೆ ಎರಡೇ ಎರಡು ಲೈನು ಬರೆದು ಸಧ್ಯಕ್ಕೆ ನಿಲ್ಲಿಸಿರುವೆ...
ನಿಮ್ಮವನು,
ಶಂKAR
ಶಂಕರ್ ಪ್ರಸಾದ್,
ನಮಸ್ಕಾರ. ನಿಮ್ಮ ಬ್ಲಾಗಿನ ಲಿಂಕು ಎಲ್ಲೋ ಸಿಕ್ಕಿತು. ಹಾಗೇ ಒಂದು ವಿಸಿಟ್ ಕೊಟ್ಟೆ. ಆದ್ರೆ ಅಲ್ಲಿ ಏನೂ ಇರ್ಲಿಲ್ಲ, ಬರೀ ಇದೊಂದು ಸಾಲು ಇತ್ತು. ಏನು ಅಂತಾನೇ ಅರ್ಥ ಆಗ್ಲಿಲ್ಲ. ಆದ್ರೆ 'ಮೋಟುಗೋಡೆ' ಅನ್ನೋ ಶಬ್ದ ಕಾಣ್ತಲ್ಲ, ಹಾಗಾಗಿ ನಂಗೆ ನಮ್ ಬ್ಲಾಗು 'ಮೋಟುಗೋಡೆಯಾಚೆ ಇಣುಕಿ' ನೆನಪಾಯ್ತು. ಅದಕ್ಕೇ ಸುಮ್ನೆ ತಮಾಷೆಗೆ ಒಂದು ಕಮೆಂಟ್ ಬಿಟ್ಟೆ ಅಷ್ಟೆ.
ಅದರಲ್ಲಿ ವ್ಯಂಗ್ಯ-ಗಿಂಗ್ಯ ಏನೂ ಇಲ್ಲ ಸಾರ್.. ತಪ್ ತಿಳ್ಕೋಬೇಡಿ. ನಿಮ್ಮ ಬ್ಲಾಗ್ ಬರಹವನ್ನು ಕಂಟಿನ್ಯೂ ಮಾಡಿ. ಓದಲಿಕ್ಕೆ, ಪ್ರೋತ್ಸಾಹಿಸಲಿಕ್ಕೆ ನಾವಿದ್ದೇವೆ. ಥ್ಯಾಂಕ್ಸ್.
ha ha ha! the daily stresses of office life!
well written short story. I'll be going to office soon, I think I'll miss school....
-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/
ಬರವಣಿಗೆ ಚೆನ್ನಾಗಿದೆ.
ಮತ್ತೆ.....ಈ ಬ್ಲಾಗಿನ ಕೊಂಡಿಯನ್ನು ನಿಮ್ಮ 'ಗಿರಾಕಿ' (client)ಗೆ ಕೊಟ್ಟಿದ್ದೇನೆ. ಅವರು ಖುಶಿಪಡ್ತಾರೆ.
@ laxmi
Thanx for the comment! All the best for your professional career!
@ Jagali Bhagavata
ಏನ್ ಭಾಗ್ವತ್ರೇ ನೀವ್ ಹಿಂಗಾ ಮಾಡೋದು? ಡೀಲ್ ಮಾಡ್ಬುಟ್ರಲ್ರೀ?! ಒಂದು ಒಳ್ಳೇ ಕ್ಲೈಂಟ್ನ ಕಳ್ಕೊಳ್ಳೋಹಂಗಾಯ್ತು ನಾವು! ;)
ಹ್ಹ ಹ್ಹ... ಸೂಪರ್ ಐಡಿಯ...:)
@ prashanth
Welcome to my blog.
:-)
Post a Comment