Friday, August 24, 2007

ವರಮಹಾಲಕ್ಷ್ಮೀ ವ್ರತ

ಎನ್ನ ಅಜ್ಜಿ ಹೆಸ್ರು ವರಮಹಾಲಕ್ಷ್ಮೀ ಹೇಳಿ. ಅವ್ಳು ವರ್ಮಾಲಕ್ಷ್ಮೀ ಹಬ್ಬದ್ ದಿನ ಹುಟ್ಟಿದ್ರಿಂದ ಆ ಹೆಸ್ರು ಇಟ್ಟಿದ್ದಡ. ಹಂಗಾಗಿ ಇವತ್ತು ಅಜ್ಜಿ ಬರ್ತ್-ಡೇ! ಇದ್ದಿದ್ದಿದ್ರೆ ಫೋನ್ ಮಾಡಿ ವಿಶ್ ಮಾಡ್ಲಾಗಿತ್ತು. ಆದ್ರೆ ತೀರ್ಕ್ಯಂಡು ಒಂದೂವರೆ ವರ್ಷಾತು.

ಅವ್ಳು ಒಂದ್ಸಲ ಎಂಥ ಮಾಡಿದ್ಲಡಪಾ ಅಂದ್ರೆ, ಪ್ಯಾಟಿಗೆ ಹೋಗಿದ್ಲಡ. ಸಾಗ್ರ ಪ್ಯಾಟಿಗೆ. ಅಲ್ಲಿ ಸಾಮಾನೆಲ್ಲ ತಗಂಡು, ಹಂಗೇ ಗಣ್ಪತಿ ದೇವ್‍ಸ್ಥಾನದ್ ರಸ್ತೇಲ್ ಬರ್ತಿರಕ್ಕರೆ ಯಶೋಧ ಹೇಳಿ ಪುರಪ್ಪೆಮನೆ ಊರಿನವ್ಳು ಒಬ್ಳು ಕಂಡ್ಲಡ ಅಜ್ಜಿಗೆ. ಅಜ್ಜಿಗೆ ಅವ್ಳುನ್ನ ಮಾತಾಡಿಸ್ಲಾಗ ಹೇಳಿ ಕಾಣ್ಚಡ. ಎಂಥಕೆ ಹಂಗೆ ಕಾಣ್ಚೇನ ನಂಗೊತ್ತಿಲ್ಲೆ. ಸರಿ, ಈಗ ಯಶೋಧಕ್ಕನಿಂದ ಹೆಂಗಾರು ಮಾಡಿ ತಪ್ಪಿಸ್ಕ್ಯಳವಲಪಾ ಅಂತ ನೋಡ್ತಿರಕ್ಕರೆ, ಯಶೋಧಕ್ಕ ಅಲ್ಲೇ ಯಾವ್ದೋ ಅಂಗಡಿ ಹೊಕ್ಚಡ. ಅವ್ಳು ಅತ್ಲಾಗ್ ಹೊಕ್ಕಿದ್ದೇ ತಡ, ನಮ್ಮನೆ ಅಜ್ಜಿ ಫಾಸ್ಟಾಗಿ ಆ ಅಂಗ್ಡಿ ಕ್ರಾಸ್ ಮಾಡಿ ಮುಂದೆ ಹೋತಡ.

ಇನ್ನೂ ನಾಕು ಹೆಜ್ಜೆ ಇಟ್ಟಿರ್ಲೆ, ಅಷ್ಟೊತ್ತಿಗೆ ಯಶೋಧಕ್ಕ ಇತ್ಲಾಗ್ ತಿರುಗ್ಚಡ, ಅಜ್ಜಿನ ನೋಡ್ಬುಡ್ಚಡ! ಅಜ್ಜಿ ಸ್ಪೀಡಾಗಿ ನೆಡಿತಾ ಇತ್ತಾ, ಯಶೋಧಕ್ಕ ಹಿಂದಕ್ಕಿಂದ "ಹೋಯ್ ವರಮಾಲಕ್ಷ್ಮೀ.. ನಿಂತ್ಕಳೇ.. ಆನು ಯಶೋಧಾ.. ಹೋಯ್ ವರ್ಮಾಲಕ್ಷ್ಮೀ.." ಅಂತ ಜೋರಾಗಿ ಕರದ್ ಕೇಳ್ಚಡ. ಆದ್ರೆ ಅಜ್ಜಿಗೆ ತಿರುಗಿ ನೋಡ್ಲಾಗ ಹೇಳಿ. ಹಂಗಾಗಿ ನಮ್ಮನೆ ಅಜ್ಜಿ ಎಂಥ ಪ್ಲಾನ್ ಮಾಡ್ಚಡ ಗೊತಿದಾ? ಹಂಗೇ ಜೋರಾಗ್ ನೆಡ್ಕೋತ್ಲೇ "ಆಂ? ಆನು ವರಮಾಲಕ್ಷ್ಮೀ ಅಲ್ದೇ!" ಅಂತ ಹೇಳಿ ಮುಂದಕ್ ಹೋಗ್ಬುಡ್ಚಡ!

ಹೆಂಗೆ ನಮ್ಮನೆ ಅಜ್ಜಿ?! ಅವ್ಳು ಹಂಗೇ ಸೈಯಿ, ಏನಾರು ಮಾಡಕ್ಕು ಅಂತ ವ್ರತ ಕೈಗೊಂಡ್ರೆ ಮಾಡಿಯೇ ತೀರೋದು! ಗ್ರೇಟು ಅಲ್ದಾ?!

14 comments:

ಸಿಂಧು sindhu said...

:-)

ಚೆನಾಗಿದ್ದು.. ಹೋಯ್ ಸು.. ಆನು ಈ ರೈಟ್ ಅಪ್ ಓದಿ ನೆಗ್ಯಾಡಲ್ಲೆ ಮತ್ತೆ.. :)

:D ಅವ್ಳು ಇದ್ದಿದ್ರೆ, ಖಂಡಿತಾ ಊರಿಗೆ ಹೋದಾಗ ನೋಡಿ ಕೆನ್ನೆ ಹಿಂಡಿ ಬರ್ತಿದ್ದಿ ನಾನು..

Ranju said...

ಪುಟ್ಟಾ,
ನಾನಂತು ಆಫೀಸ್ ನಲ್ಲಿ ಗಟ್ಟಿ ನಗಲಾಗ ಹೇಳಿ ಸಣ್ಣಕೆ ಮನಸ್ಸಲ್ಲೆ ನೆಗಿಆಡದಿ.
ನಂಗೆ ಅಮ್ಮಮ್ಮನ ಕೆನ್ನೆಗೆ ಪಪ್ಪಿ ಕೊಡನ ಅಂತಾ ಅನ್ನಿಸ್ತಾ ಇದ್ದು.:)

ಚನ್ನಾಗಿ ಬರದ್ದೆ ಹವ್ಯಕ ಭಾಷೆಲಿ. ಸಕತ್

Anonymous said...

ಸಿರ್ಸಿ ಕಡೆ ಭಟ್ಟರ ಭಾಷಾದಾಗ ಭಾಳ ಮಸ್ತ್ ಬರದಿರಿ ಬಿಡ್ರಿ. ನಿಮ್ಮಜ್ಜಿ ಅವರು ಭಾಳ ಜಾಬಾದ್ ಇದ್ರು ಅನ್ಸತೈತಿ. ಶರಣರಿ.

Jagali bhaagavata said...

ತುಂಬ ಚೆನ್ನಾಗಿದೆ. ಹೊಟ್ಟೆತುಂಬ ನಗು ಬಂತು. ಅಜ್ಜಿಯಂದಿರ ಜೀವನಾನುಭವದ ಕಥೆಗಳು ಯಾವತ್ತು ರಸವತ್ತಾಗಿರುತ್ತದೆ. ನಾನು ಈಗಲೂ ಪೀಡಿಸುತ್ತೇನೆ ಅಜ್ಜಿಯನ್ನ, "ಕಥೆ ಹೇಳು" ಅಂತ.

ಅಜ್ಜಿಯನ್ನ ಕಳೆದುಕೊಂಡದ್ದಕ್ಕೆ ವಿಷಾದವೂ ಇದ್ದ ಹಾಗಿದೆ. ನನ್ನ ನಗು ಇರಿಸುಮುರಿಸು ತಂದರೆ ಕ್ಷಮೆ ಇರಲಿ.

'ಬರ್ತ್-ಡೇ' ಸರಿ ,ಮಾಡು.

ಯಜ್ಞೇಶ್ (yajnesh) said...

ಅಜ್ಜಿ ಉತ್ರ ಕೇಳಿ ನಗ್ಯಾಡಿದಿ ಮಾರಾಯ... ಚೆನ್ನಾಗಿ ಬರದ್ದೆ.

ಮನಸ್ವಿನಿ said...

ಹ ಹ ಹ..ಚೆನ್ನಾಗಿದೆ :)

Anonymous said...

Oble kutgand Boragittu. idanna odkyand nagu tadkalalle aagle. innu nagta iddi.

venu said...

Cholo iddo ajji kathe

Pramod P T said...

ಚೆನ್ನಾಗಿದೆ!
ನಂಗೊತ್ತಿಲ್ಲೆ ಅನ್ನೋದು ಎಂಗೊತ್ತಿಲ್ಲೆ ಅಂತಾನೆ ಬಳಸ್ತಾರಲ್ವಾ!?
ಹೀಗೆ ಸುಮ್ನೆ.. :):)

PRAVINA KUMAR.S said...

ಹಬ್ಬಗಳನ್ನು ತುಂಬಾ ಸುಂದರವಾಗಿ ವರ್ಣಿಸಿದ್ದೀರಿ.

Shree said...

:) :) :)

Anonymous said...

ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.

ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.

ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.

ಅವರ ಕೆಲವು ಮಾತು ಗಳು ಹೀಗಿದ್ದವು -

"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."



ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/


http://www.karnatakarakshanavedike.org/app/webroot/files/samaavesha_varadi.pdf


೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ

ಮೃಗನಯನೀ said...

nange bahashe arthve aagolla maraya enmaadli ellaru nagadid nodi naanu 'hotte Urkoling'

Sushrutha Dodderi said...

ನಕ್ಕ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಅಜ್ಜಿಯ ಬಗ್ಗೆ ಬರಿಯಲಿಕ್ಕೆ ತುಂಬಾ ಇದೆ. ಆಕೆ ತೀರಿಕೊಂಡ ಸಂದರ್ಭದಲ್ಲಿ ಪೂರ್ತಿ ಐವತ್ತು ಫುಲ್‍ಸ್ಕೇಪ್ ಪುಟಗಳಷ್ಟು ನಾನು ಬರೆದಿಟ್ಟಿದ್ದೇನೆ. ಸಮಯ ಸಿಕ್ಕಾಗ ಇಲ್ಲಿ ಹಾಕುತ್ತೇನೆ.

ಪ್ರಮೋದ್, ಯು ಆರ್ ರೈಟ್!
ಮೃಗನಯನಿ, ನಿಂಗೆ ನಾರ್ಮಲ್ ಕನ್ನಡದಲ್ಲಿ ಎಕ್ಸ್‍ಪ್ಲೈನ್ ಮಾಡ್ತೀನಿ, ಬೇಜಾರ್ ಮಾಡ್ಕೋಬೇಡ. :-)