Wednesday, September 24, 2008

ಪನ್ನೀರಿನ ಹುಡುಗಿ

ಶಹರದ ಛತ್ರದಿ ಗೆಳೆಯನ ಮದುವೆ
ಕರೆದಿಹ ತಪ್ಪದೇ ಬರಬೇಕೆಂದು
'ಆರತಕ್ಷತೆಗೂ ಬಾರದೆ ಇದ್ದರೆ
ಮಾತೇ ಆಡಿಸೆ' ಎಂದಿಹನು

ಗರಿಗರಿ ಜುಬ್ಬಾ, ಬಗಲಿಗೆ ಅತ್ತರು,
ಹೊಸ ಶೂಗೂನೂ ಪಾಲೀಶು!
ನಾನೂ ಭಾವೀ ಮದುಮಗನಲ್ಲವೇ?
ಇಷ್ಟೂ ಇರದಿರೆ ಬರಿ-ವೇಷ್ಟು!

ದಂಪತಿಗೆಂದೊಂದುಡುಗೊರೆ ಹಿಡಿದು
ಹೊರಟೆನು ನಯ ನಾಜೂಕಿನಲಿ
ಛತ್ರದ ತೋರಣ ಬಾಗಿಲು ಕೋರಿತು
ಸ್ವಾಗತ ಭಾರೀ ಸಂಭ್ರಮದಿ

ಬಾಗಿಲ ಪಕ್ಕದಿ ಗೆಳತಿಯರೊಡನೆ
ನಿಂತಿಹಳ್ಯಾರೋ ಸುಂದರಿಯು
ಬೆಳ್ಳಿಯ ಬಣ್ಣದ ದಾನಿಯ ತುಂಬಾ
ಹಿಡಿದು ಸಿಂಪಿಸಲ್ ಪನ್ನೀರು

ಸೋಕಿರೆ ನನಗೂ ಪರಿಮಳ ನೀರು
ಆಗಿದೆ ಮನಮೈ ರೋಮಾಂಚನವು
ಮುನಿಸನು ನಟಿಸುತ ದಿಟ್ಟಿಸೆ ನಾನು
ಚೆಲುವೆ ಕಿಲಾಡಿಗೆ ನಾಚಿಕೆಯು!

ಛತ್ರವೇ ಇದು? ಕಿನ್ನರ ಲೋಕವೇ?-
ನನಗೋ ದಿಗ್ಭ್ರಮೆ; ಅರೆ ಮರುಳು
ಮರೆತಿಹೆ ನಿಂತಿಹ ಸ್ಥಳವನೆ ಅರೆಚಣ;
ಈ ಚೆಲುವೆಗೋ, ನಗೆ-ಜೋರು!

ಹಂಸದ ಬಣ್ಣದ ಸೀರೆಯ ಹುಡುಗಿ,
ಕೈ ಬೆರಳುಗಳಿಗೆ ಮದರಂಗಿ
ಹಿಮಾಲಯದ ತರು ಬಿಟ್ಟರೆ ಕೆಂಪುಹೂ
ಹೀಗೆಯೆ ಕಾಣಲುಬಹುದೇನೋ?

ನೂಕುನುಗ್ಗಲಲಿ ಸರಿದೆಹೆ ನಾನೂ
ಛತ್ರದ ಸಭೆಯ ಅಂಗಳಕೆ
ಉಡುಗೊರೆ ಸಾಲೋ ಉದ್ದವೇ ಉದ್ದ
ಕಾಯಲೇಬೇಕು ಹಾ, ಆಕಳಿಕೆ!

ಯಾರಿರಬಹುದು ಆ ಎಳೆತರಳೆ-
ಗಂಡಿನ ಕಡೆಯವಳೆ? ಹೆಣ್ಣಿನ ಕಡೆಯವಳೆ?
ಸಭೆಯೊಳಗೊಮ್ಮೆ ಹಾದು ಹೋಗಿರೆ
ಓಹ್! ಕೋಲ್ಮಿಂಚೊಂದು ಹೊಳೆದಂತೆ

ಏನೋ ನೆವದಲಿ ಸುಳಿದಾಡುವಳು
ನನಗೆ ತಿಳಿಯದೆ ಇದರ ಒಳಗುಟ್ಟು?
'ಅಯ್ಯೋ ಹುಡುಗಿ, ನಾ ಮೆಚ್ಚಿಯಾಗಿದೆ
ಸಾಕು ಬಿಡು ನೀ ಈ ಕಸರತ್ತು!'

ಲಗ್ನದ ಗದ್ದಲ ತುಂಬಿದ ಮನೆಯಲಿ
ಇಬ್ಬರು ಕಳ್ಳರು ಇರುವವರೀಗ
ನೋಟವ ಕದ್ದರೆ ಸದ್ದೇ ಆಗದು
ಪ್ರೇಮ ಅರಳುವುದು ಬಲುಬೇಗ

ಮಂಟಪದಲ್ಲಿ ನಿಂತಿಹ ಜೋಡಿಯು
ನಾನು-ಅವಳೇ ಆದಂತೆ;
ಊಟದ ತಟ್ಟೆಯ ಹೋಳಿಗೆಯಲ್ಲೂ
ಅವಳಾ ಮುಖವೇ ಕಂಡಂತೆ!

ನನಗೂ ತಿಳಿದಿದೆ: ಇಂತಹ ಪ್ರೀತಿಗೆ
ಆಯಸ್ಸೆಂಬುದು ಬಲು ಕಮ್ಮಿ
ಛತ್ರದ ಹೊಸ್ತಿಲ ದಾಟಲು ಮರೆವುದು
ಅನಿವಾರ್ಯವೇ ಹೂಂ, ಸರಿಯೆನ್ನಿ.

ಆದರೂ ಈಕೆಯು ಬರುವಳು ಸಂಗಡ
ಜುಬ್ಬದ ವಸಂತ ಪರಿಮಳವಾಗಿ;
ಪನ್ನೀರಿನ ಘಮ ಸುಳಿದಾಗೆಲ್ಲ
ನೆನಪಾಗುವಳು ಕಾಡುವ ಕಣ್ಣಾಗಿ.

[ನನ್ನ ಬ್ಲಾಗಿನ ನೂರನೇ ಪೋಸ್ಟು]

42 comments:

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
ನೂರನೆಯ ಬರಹಕ್ಕೆ ಶುಭಾಶಯ.
`ನೂರು ಮುನ್ನೂರಾಗಿ ಸಾಗಿ ಸಾವಿರವಾಗಲಿ’ ಎಂಬೊಂದು ಆಶಯ.

"ಹಂಸದ ಬಣ್ಣದ ಸೀರೆಯ ಹುಡುಗಿ,
ಕೈ ಬೆರಳುಗಳಿಗೆ ಮದರಂಗಿ
ಹಿಮಾಲಯದ ತರು ಬಿಟ್ಟರೆ ಕೆಂಪುಹೂ
ಹೀಗೆಯೆ ಕಾಣಲುಬಹುದೇನೋ?

ನೋಟವ ಕದ್ದರೆ ಸದ್ದೇ ಆಗದು
ಪ್ರೇಮ ಅರಳುವುದು ಬಲುಬೇಗ"

ಅದೆಷ್ಟ್ ಚೆನಾಗ್ ಬರದ್ದೆ ಪುಟ್ಟಣ್ಣಾ...
ರಾಶೀ ಇಷ್ಟ ಆತು.

Lakshmi Shashidhar Chaitanya said...

congratulations-u !! noor post aagiddakke...

obbaTTallU huDgi mukhanE kaaNistaa nimge ? hmmm....irli irli.

Archu said...

he sush,
congrats..

kavite simple and beautiful :)

cheers,
archana

ಚಿತ್ರಾ said...

ಸುಶ್ರುತ ,

ನೂರನೇ ಪೋಸ್ಟ್ ಗೆ ಅಭಿನಂದನೆಗಳು !
ಈ ಸ್ಪೆಷಲ್ ಪೋಸ್ಟ್ ಒಂದು ಸುಂದರ ಕವನವಾಗಿದ್ದು ಖುಷಿ.

ಅಲ್ಲಾ, ಮರೆಯದ್ದೇ ಹೆಂಗಾದ್ರೂ ಮಾಡಿ ಅವಳ ಹೆಸರು ,ವಿಳಾಸ , ಫೋನ್ ನಂ. ಸಂಪಾದಿಸಿಕ್ಯಂಡಿದ್ರೆ ಮುಂದಿಂದು ವಿಚಾರ ಮಾಡ್ಲಾಗಿತ್ತೇನ !

ಅಥವಾ...

ನನಗೂ ತಿಳಿದಿದೆ: ಇಂತಹ ಪ್ರೀತಿಗೆ
ಆಯಸ್ಸೆಂಬುದು ಬಲು ಕಮ್ಮಿ
ಛತ್ರದ ಹೊಸ್ತಿಲ ದಾಟಲು ಮರೆವುದು
ಅನಿವಾರ್ಯವೇ ಹೂಂ, ಸರಿಯೆನ್ನಿ.

...ಛತ್ರದ ಹೊಸಿಲು ದಾಟಿದ ಕೂಡಲೇ ಮರೀದೇ ಹೋದ್ರೆ, ಮುಂದಿನ ಮದುವೇಲಿ ಮತ್ತೆ ಯಾರನ್ನಾದರೂ ನೋಡದು ಕಷ್ಟ ಹೇಳಾ ಹೆಂಗೆ? ;)

ಚೆನಾಗಿದ್ದು ಕವನ .

ತೇಜಸ್ವಿನಿ ಹೆಗಡೆ said...

ಸುಶ್ರುತ,

ಕಾಡುವ ಹೆಣ್ಣಿನ ಕವನವನ್ನೋದಿ ಇಷ್ಟವೂ ಆಯಿತು.. ನಗುವೂ ಬಂತು :) ಆದಷ್ಟು ಬೇಗ ಹಂಸ ಸುಂದರಿಯೋರ್ವಳನ್ನು ವರಿಸುವಂತಾಗಲಿ ಎಂದು ಹಾರೈಸುವೆ.

ಮೌನವಾಗಿ ಗಾಳಹಾಕುತ್ತಾ ನೂರಕ್ಕೆ ಲಗ್ಗೆ ಇಟ್ಟ ನಿನಗೆ ಹಾಗೂ ನಿನ್ನ ಬ್ಲಾಗ್‌ಗೆ ಹಾರ್ದಿಕ ಶುಭಾಶಯಗಳು.

Harisha - ಹರೀಶ said...

ಶತಕದ ಸಂಭ್ರಮಕ್ಕೆ ನನ್ನದೂ ಶುಭಾಶಯ :-)

ಅಲ್ಲ..

ಎನಿಲ್ಲೇ ಬಿಡು ;-)

Sushrutha Dodderi said...

@ ಪುಟ್ಟಕ್ಕ,
ಥ್ಯಾಂಕ್ಸಕ್ಕಾ..

lakshmi,
ಹೂಂ ಕಣ್ರೀ! ಕಾಣಿಸ್ತು!

archu,
thanks kane..

chitra,
ಅಲ್ಲಾ ನೀ ಹಿಂಗೆಲ್ಲಾ ನೇರಾನೇರ ವಿಚಾರಣೆ ಮಾಡಿರೆ ಹೆಂಗೆ? ನಾ ಪಾಪ ಅಲ್ದಾ? ನಿನ್ ಪ್ರಶ್ನಿಗೆ ಉತ್ರ ಕೊಡ್ಲಾ ಅಥ್ವಾ ಆರ್ಕುಟ್ಟಲ್ಲೇನಾದ್ರೂ ಇದ್ಲಾ ಅವ್ಳು ಅಂತ ಹುಡುಕ್ಲಾ? ಆಂ? ನೀನೇ ಹೇಳು.. ;)

ತೇಜಕ್ಕ,
"ಬೇಗ"?! ಮಾರಾಯ್ತೀ ನಾನು ಇನ್ನೂ ಒಂದಷ್ಟ್ ಮದ್ವೆಮನಿಗೆ ಹಿಂಗೇ ಜುಬ್ಬಾ ಹಾಕ್ಯಂಡ್ ಹೋಗ್ಬಪ್ಪನ ಅಂತ ಅಂದ್ಕಂಡಿದಿದ್ದಿ.. :-O

ಹರೀಶ,
ಗೊತಾತು ಬಿಡು ನೀ ಏನ್ ಹೇಳಕ್ ಹೊಂಟೆ ಅಂತ.. ಹ್ಮ್.. ಇರ್ಲಿ ಇರ್ಲಿ.. :x

ಯಜ್ಞೇಶ್ (yajnesh) said...

ಕವನ ಚೆನಾಗಿದ್ದು.

ನೂರರ ಗಡಿಯನ್ನು ಉತ್ತಮವಾಗಿ ದಾಟಿದ್ದಕ್ಕೆ ಶುಭಾಶಯಗಳು. ಇನ್ನು ಉತ್ತಪ ಲೇಖನ/ಕವನಗಳು ಬರಲಿ

VENU VINOD said...

ಸೋಕಿರೆ ನನಗೂ ಪರಿಮಳ ನೀರು
ಆಗಿದೆ ಮನಮೈ ರೋಮಾಂಚನವು
ಮುನಿಸನು ನಟಿಸುತ ದಿಟ್ಟಿಸೆ ನಾನು
ಚೆಲುವೆ ಕಿಲಾಡಿಗೆ ನಾಚಿಕೆಯು!

ಛತ್ರವೇ ಇದು? ಕಿನ್ನರ ಲೋಕವೇ?-
ನನಗೋ ದಿಗ್ಭ್ರಮೆ; ಅರೆ ಮರುಳು
ಮರೆತಿಹೆ ನಿಂತಿಹ ಸ್ಥಳವನೆ ಅರೆಚಣ;
ಈ ಚೆಲುವೆಗೋ, ನಗೆ-ಜೋರು!

ಹಹ್ಹಹ್ಹಾ ಸೂಪರ್‍ :)

ಸೆಂಚುರಿ ಬಾರಿಸಿದ್ದಕ್ಕೂ congratulations

ಸುಧನ್ವಾ ದೇರಾಜೆ. said...

majavaagide sushrutha. heege simple aagi bareyodoo sulabha alla.

hamsanandi said...

ಸುಶ್ರುತ ಅವರೆ,
ಕವಿತೆ ಲವಒಲವಿಕೆಯಿಂದ ಕೂಡಿ, ಬಹಳ ಚೆನ್ನಾಗಿ ಬಂದಿದೆ.

ಮತ್ತೆ ನೂರು ದಾಟಿದ್ದಕ್ಕೆ ಶುಭಹಾರೈಕೆಗಳು!

Parisarapremi said...

ಲನಾ ಭಟ್ಟರು ಭಾನುವಾರ ಮನೆಗೆ ಬರುತ್ತಾರಲ್ಲಾ, ಆಗ ಇದೆ ನಿಂಗೆ!! :-)

ಚರಿತಾ said...

ಸುಶ್ರುತ,
ಕವನ ತುಂಬಾ ಮುದ್ದಾಗಿದೆ.....:)
ಅಭಿನಂದನೆಗಳು....!!

ರಂಜನಾ ಹೆಗ್ಡೆ said...

ಪುಟ್ಟಾ
ಸುಪರ್ ಆಗಿ ಬರದ್ದೆ,

century ಬಾರಿಸಿದಕ್ಕೆ congrates.

Unknown said...

ಮತ್ತೆ ಮತ್ತೆ ಓದುವಂತ ಸಾಲುಗಳು. ಒಟ್ಟಾರೆ ಒಂದೊಳ್ಳೆ ಕವಿತೆ.

ಅಂತೆ ನೂರರ ಸಂಭ್ರಮಕ್ಕೆ ನನ್ನದೊಂದು ಶುಭಾಶಯ.
-ಜಿತೇಂದ್ರ

Sree said...

ಕವನದ ಬಗ್ಗೆ ಎಲ್ಲ ಹೇಳಿ ಆಗಿದೆ, ಎಂದಿನಂತೆ ನನ್ನದು ಲೇಟ್ ಎಂಟ್ರಿ:)) ನೂರು ಕುಟ್ಟಿದ್ದಕ್ಕೆ ಕಂಗ್ರಾಟ್ಸು:)

ಆಲಾಪಿನಿ said...

ರಾಯರು ಬಂದರು
ನೆನಪಿಗೆಬಂದರು
ನಿಮ್ಮಯ ಕವನ
ಓದಿದ ಮೇಲೆ

sunaath said...

ಕನಸಲಿ ರೆಕ್ಕೆಯ ಕಟ್ಟುತ ಹಾರೈ
ಮನಸಿನ ಮಾಯಾಲೋಕದಲಿ
ಕಿನ್ನರಿ ಸಿಗುವದು ಕಷ್ಟವೆ ಜಾಣ?
ನಿನ್ನಂಥಾ ನಲ್ ಸೊಬಗನಿಗೆ?

Ultrafast laser said...

"ಲಗ್ನದ ಗದ್ದಲ ತುಂಬಿದ ಮನೆಯಲಿ
ಇಬ್ಬರು ಕಳ್ಳರು ಇರುವವರೀಗ
ನೋಟವ ಕದ್ದರೆ ಸದ್ದೇ ಆಗದು
ಪ್ರೇಮ ಅರಳುವುದು ಬಲುಬೇಗ" - ಈ ಸಾಲುಗಳು ಇಷ್ಟವಾದವು. ನಿಜಕ್ಕೂ ಇದು ಅನುಭವಿಸಿ ಬರೆದ ಹಾಗಿದೆ.
"ಹಿಮಾಲಯದ ತರು ಬಿಟ್ಟರೆ ಕೆಂಪುಹೂ
ಹೀಗೆಯೆ ಕಾಣಲುಬಹುದೇನೋ?" - ಇದು ಸ್ವಲ್ಪ ಅಭಾಸದ ವಿಷಯ. ಹಿಮಾಲಯದಲ್ಲಿ ಸದಾ ಕಾಲ ಮಂಜು ಮುಸುಕಿರುತ್ತದೆ, ಹಿಮಾಚ್ಚಾದಿತವಾದ ಪ್ರದೇಶ. ಹೂ ಬಿಡುವ ಮರಗಳನ್ನು ಉಹಿಸಿಕೊಳ್ಳುವುದು ಕಷ್ಟ !.
ಅಥವಾ ಹಿಮಾಲಯದ ಮರಗಳು ಹೂ ಬಿಡುತ್ತವೆ ಎನ್ನುವುದು ಬಹುಶಯ ಕವಿ(ಸುಶ್ರುತ) ಸಮಯ??!

Sushrutha Dodderi said...

@ ಯಜ್ಞೇಶಣ್ಣ, ವೇಣು, ಸುಧನ್ವ, ಹಂಸಾನಂದಿ,

ಧನ್ಯವಾದಗಳೂ.. .. :-)

ಅರುಣ್,
ಯಾಕ್ ಗುರೂ? :O ನಾನಂತೂ ಭಟ್ರ ಎದ್ರಿಗೇ ಬರಲ್ಲಪ್ಪ!

ಚರಿತಾ, ರಂಜು, ಜಿತೇಂದ್ರ,
ಥ್ಯಾಂಕ್ಸ್ ಥ್ರೀಸ್..!

ಶ್ರೀಮಾತಾ,
ನಿಮ್ದು ಯಾವಾಗ್ಲೂ ಇದೇ ಹಾಡಾಯ್ತು.. :x

ಕಳಸದ,
ಹಂಗಂತೀರಾ?

Sushrutha Dodderi said...

ಸುನಾಥ ಕಾಕಾ,
ನಿಮ್ ಆಶಯ ಇದ್ರೆ ಆಯ್ತು ಬಿಡಿ! ಸಿಕ್ಕೇ ಸಿಗ್ತಾಳೆ! ;)

DMS,
ಏನ್ ಮಾಡೋಣ ಹೇಳಿ? ಅವಾಗಿವಾಗ ಸುಶ್ರುತನೊಳಗಿನ ಕವಿ ಜಾಗೃತನಾಗಿಬಿಡ್ತಾನೆ.. ಆಗ ಇಂತಹ ದುರಂತಗಳು ಸಂಭವಿಸ್ತಾವೆ!
ಆದ್ರೂ ಹಿಮಾಲಯದಲ್ಲಿ ಕೆಂಪೀ ಕೆಂಪಿ ಹೂವಿನ ಗಿಡಗಳಿದ್ರೆ ಎಷ್ಟ್ ಚನಾಗಲ್ವಾ? ;)

ಶ್ರೀನಿಧಿ.ಡಿ.ಎಸ್ said...

ನೂರಕ್ಕೆ ಕಂಗ್ರಾಟ್ಸು..ಕವನ ನೈಸು. ಸ್ವಲ್ಪ ಜಾಸ್ತಿ ಕವನ ಬರಿಯಪಾ,:)

ಮನಸ್ವಿನಿ said...

congrats :) ಮಸ್ತ್ ಅಲ್ಲೋ..
ಕವನ ಚಂದ ಉಂಟು....

ಪಾರ್ಟಿ ಕೊಡು...ಕೊಡ್ತೇನೆ ಹೇಳಿ ಹೇಳ್ತಾನೆ ಇದ್ದೀಯಾ ..ಗುರ್ರ್ ಗುರ್ರ್

Unknown said...

ಮಗಾ, ಸೆಂಚುರಿ ಬಾರಿಸಿದ್ದಕ್ಕೆ ಶುಭಾಶಯಗಳು,
ಹೆಚ್ಚು ಹೆಚ್ಚು ಕತೆ ಬರಿ ಓಕೆ

Sushrutha Dodderi said...

@ ಶ್ರೀನಿಧಿ,
ಥ್ಯಾಂಕ್ಯೂ ಡಾರ್ಲಿಂಗ್.. ಬರಿತಿ..

ಮನಸ್ವಿನಿ,
ಕರೆದಾಗ ಒಮ್ಮೇನೂ ಬರ್ಬೇಡ.. ಇಲ್ಲಿ ಪಾರ್ಟಿ ಕೊಡ್ಸಿಲ್ಲ ಅಂತ ಕ್ಯಾತೆ ತೆಗಿ.. ಗುರ್ರ್.. :x

vmk,
ಥ್ಯಾಂಕ್ಸ್ ರೂಮೀ.. ಬರಿತಿ.. ಒಂದೇ ಕಂಡೀಶನ್: ನೀನು ರೇಡಿಯೋನ ದೊಡ್ಡದಾಗಿ ಹಾಕ್ಲಾಗ ಅಷ್ಟೇ! :D

ಶರಶ್ಚಂದ್ರ ಕಲ್ಮನೆ said...

ಹಾಯ್ ಸುಶ್ರುತ,

ನೂರನೇ ಬರಹಕ್ಕೆ ಶುಭಾಶಯಗಳು. ನಿನ್ನಿಂದ ಇನ್ನೂ ಇಂತಹ ಒಳ್ಳೆಯ ಬರಹಗಳು ಬರುತ್ತಿರಲಿ.

ಶರಶ್ಚಂದ್ರ ಕಲ್ಮನೆ

MD said...

ತೆಂಡೂಲ್ಕರ್ ಬ್ಯಾಟಿಂಗ್ ಕಣೋ ಡ ಡಾ ಡಂ
ಈ ಸೆಂಚುರಿಗಳು ಫಾಸ್ಟೆಸ್ಟ್ ಫಿಫ್ಟಿಗಳು ಹೀಗೇ ಮುಂದುವರಿಯಲಿ.
"ನೋಟವ ಕದ್ದರೆ ಸದ್ದೇ ಆಗದು" ಸದ್ದು ಗದ್ದಲವೆಲ್ಲ ಆಗೋದು ಕಳ್ಳತನವಾದ ಮೇಲೆಯೇ :-)

mruganayanee said...

congracts for century

Suma Udupa said...

Hi,

Nimma kavana chennagi ide... :)
100 posts madidakke congrats!!
-Suma.

Sushrutha Dodderi said...

ಶರಶ್ಚಂದ್ರ, ನಯನಿ, ಸುಮಾ,
ಧನ್ಯವಾದಗಳೂ... :-)

MD,
ಹೆಹ್ಹೆಹ್ಹೆ! ಅದು ನಿಜ! :D

ಮನಸ್ವಿ said...

ಶತಕದ ಸಂಭ್ರಮಕ್ಕೆ ನನ್ನದೂ ಶುಭಾಷಯ .. ಭರ್ತಿ ಚನಾಗಿ ಬರದ್ಯೋ.. ಇನ್ನು ಸೆಂಚುರಿ ಮೇಲೆ ಸೆಂಚುರಿ ಹೊಡಿತಾನೆ ಇರು....

Shree said...

Yaardo gaaLi beeside nin kaDe! irli, aDDille, chendada kavana.
Century hoDediddakke congrats!
Hange next neenu hogo madveli sigo panneer huDgine neenu madve agangaagli amta manasu thumbi haaraisthini... :P

chetana said...

nimma ee kavite saraLa, sundara

-Chetana

Anonymous said...

ತುಂಬ ಚೆನ್ನಾಗಿದೆ..

Sushrutha Dodderi said...

@ ಮನಸ್ವಿ,
ಧನ್ಯವಾದ ಕಣಯ್ಯಾ..

ಶ್ರೀ,
ಯಾರ್ ಗಾಳಿ? ಅದ್ರಲ್ಲಿ ಪನ್ನೀರ್ ಹುಡ್ಗಿ ಪರಿಮಳ ಅಂತೂ ಇತ್ತು.. ;)
ಒಟ್ನಲ್ಲಿ ಬೇಗ ನಂಗೊಂದು ಮದ್ವೆ ಮಾಡಿಸ್ಬೇಕು ಅಂತ ಆಗ್‍ಹೋಗಿದೆ ನಿಂಗೆ.. ಹಹ್! :x

ಚೇತನಾ, ರಾಘವೇಂದ್ರ,
ಥ್ಯಾಂಕ್ಸ್ ಥ್ಯಾಂಕ್ಸ್.. :-)

nishu mane said...

wow! nooraayta? congrats Sushruta. bEga innoo ondu nooru maaDbiDi.
-Meera.

Anonymous said...

namdu ondu shubhaashaya....
nimma baraha yella odtaa irte...
comment madoke swalpa udaashna..
noorara sambhramakke olle padya kottiddiri..
khushi aaytu

vijayraj

shivu.k said...

ನೂರನೇ ಪೋಸ್ಟಿಗೆ ಅಭಿನಂದನೆಗಳು. ನಿಮ್ಮ ಈ ಕವನದ ಅನುಭವ ನಾನು ಪ್ರತಿಮದುವೆ ಪೋಟೊ ತೆಗೆಯುವಾಗಲು ಸ್ವಲ್ಪ ಹೆಚ್ಚಾಗೆ ಆಗುತ್ತದೆ. ಹೀಗೆ ಬರೆಯುತ್ತಿರಿ....

ಶಿವು.ಕೆ

ವಿನಾಯಕ ಕೆ.ಎಸ್ said...

shush,
century hodedu run out aagibittidyala maaraaya. deepaavali hatra bantu enaaru bari!!!

Shashi Dodderi said...

congratulations for posting 100 blogs. Nice poem I hope your mother read this poem!!!!!!!!!! looks like your life is in a corner waiting to take a turn

jomon varghese said...

ಶತಕ ಸಂಭ್ರಮಕ್ಕೆ ನನ್ನದೂ ಒಂದು ಶುಭ ಹಾರೈಕೆ... ಚೆಂದ ದ ಕವನ. ಇತ್ತೀಚೆಗೆ ಲವಲವಿಕೆಯಿಂದ ತುಂಬಾ ಖುಷಿಯಲ್ಲಿರೋ ಹಾಗಿದೆ? ಏನಾಯಿತು?

Sushrutha Dodderi said...

@ nishumane
ಥ್ಯಾಂಕ್ಸ್ ಮೀರಾಜೀ... :-)

vijay,
ಧನ್ಯವಾದ.. ಓದ್ತಿರಿ..

ಶಿವು,
ಹ್ಮ್.. ಫೋಟೋ‍ಮಾಸ್ಟರ್! ;) ಥ್ಯಾಂಕ್ಸ್.

ವಿನಾಯಕ,
ಔಟೇನೂ ಆಗಲ್ಲೆ ಮಾರಾಯಾ.. 'ಡ್ರಿಂಕ್ಸ್ ಬ್ರೇಕ್' ತಗಂಡಿದ್ದಿದ್ದಿ ಅಷ್ಟೇ! ಬರದ್ದಿ ನೋಡು ಹೊಸ ಪೋಸ್ಟು.. ;-)

nostalgia,
ಹೇ ಶಶಿಯಣ್ಣಾ.. ಥ್ಯಾಂಕ್ಯೂ! ಊರಿಗ್ ಬಂದವಾಗ ಅಮ್ಮಂಗೆ ಹೇಳದೊಂದು ಹೇಳಡ ನೋಡು. ;O

ಜೋಮನ್,
ಥ್ಯಾಂಕ್ಯೂ.
ಎಲ್ಲಿ? ಏನಾಯ್ತು? ;)