ನಿಮ್ಮ ಮದುವೆಯ ಮಾಸಲು ಮುಖಪುಟದ ಅಲ್ಬಮ್ ಸವರುವಾಗ
ಕಾಟನ್ ಶರ್ಟು-ಕಚ್ಚೆಪಂಚೆಯ ದೊಡ್ಡಜ್ಜ
ಜಗುಲಿಕಟ್ಟೆಯ ಆ ಹಳೇ ಮರದ ಖುರ್ಚಿಯಲ್ಲಿ ಕೂತು
ಕವಳ ಹಾಕುತ್ತಿದ್ದ ನೆನಪು.
ನಿಮ್ಮ ಮದುವೆ ಅಲ್ಬಮ್ಮಿನ ಅಂಟಿಕೊಂಡ ಪುಟಗಳನ್ನು ಬಿಡಿಸುವಾಗ
ಕೇಜಿಗಟ್ಟಲೆ ಮೂಸಂಬಿ-ದ್ರಾಕ್ಷಿ ಹಿಡಿದು ಮಾವ
ಉಳವಿಯಿಂದ ಬಾಡಿಗೆ ಸೈಕಲ್ ಹೊಡೆದುಕೊಂಡು
ನಡುಮಧ್ಯಾಹ್ನ ಕೆಂಪಾಗಿ ಬರುತ್ತಿದ್ದ ನೆನಪು.
ನಿಮ್ಮ ಮದುವೆ ಅಲ್ಬಮ್ಮಿನ ಬ್ಲಾಕ್ ಅಂಡ್ ವ್ಹೈಟ್ ಫೋಟೋಗಳನ್ನು
ಕವರಿನಿಂದ ಹುಷಾರಾಗಿ ಹೊರತೆಗೆಯುವಾಗ
ಆ ನಶ್ಯದ ಡಬ್ಬಿಯ ಪುರೋಹಿತ ಭಟ್ಟರು ಒಮ್ಮೆ ನನ್ನ ಕೈ ನೋಡಿ
ಭಾರೀ ಉಜ್ವಲ ದಿನಗಳ ಭವಿಷ್ಯ ಹೇಳಿದ ನೆನಪು.
ನಿಮ್ಮ ಮದುವೆಯ ಆ ಫೋಟೋಗಳನ್ನು ಸ್ಕ್ಯಾನ್ ಮಾಡುವಾಗ
ತನ್ನ ಯೌವನದ ದಿನಗಳಲ್ಲಿ ಕನ್ನಡಿ ಮುಂದೆ ನಿಂತ ಅಪ್ಪ
ಮೀಸೆಯನ್ನು ಚೂಪಗೆ ಟ್ರಿಮ್ ಮಾಡಿಕೊಂಡು, ಮುಖಕ್ಕೆ ಪೌಡರ್
ಹಚ್ಚಿಕೊಳ್ಳುತ್ತಿದ್ದ ಬೆಳ್ಳನೆ ನೆನಪು.
ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ಆ ಫೋಟೋಗಳಿಗೆ
ಟಚ್-ಅಪ್ ಕೊಟ್ಟು ರಕ್ಷಿಸಿ ಇಡುವಾಗ, ಅಮ್ಮ ನೈಟಿ ತೊಡಲೋ ಬೇಡವೋ
ಅಂತ ವಾರಗಟ್ಟಲೆ ಯೋಚಿಸಿ ಪಕ್ಕದ ಮನೆಯವಳ ಬಳಿ ಚರ್ಚಿಸಿ
ಕೊನೆಗೂ ಸೀರೆಯನ್ನೇ ಖಾಯಂ ಮಾಡಿದ ಹಚ್ಚನೆ ನೆನಪು.
ಅಪ್ಪ-ಅಮ್ಮನ ಮದುವೆಯ ಫೋಟೋಗಳಲ್ಲಿ ನಾನಿಲ್ಲ
ನನ್ನ ನೆನಪಿನ ಅಲ್ಬಮ್ಮಿನಲ್ಲಿ ಅಪ್ಪ, ಅಮ್ಮ ಮತ್ತು ಎಲ್ಲ.
12 comments:
liked it... last 2 lines are simply superb!
ಸುಶ್ರುತ್ ಅವರೇ..
ನಿಮ್ಮ ನೆನಪಿನ ಅಲ್ಬ೦ ನೋಡಿದೆ.. ಚೆನ್ನಾಗಿದೆ..
ನನ್ನಪ್ಪ ಅಮ್ಮನ ಮದ್ವೆ ಅಲ್ಬ೦ನಲ್ಲೂ ನಾನಿಲ್ಲ..!
ಚನ್ನಾಗಿದೇರಿ.............
ugdi .....
ಚೆನ್ನಾಗಿದೆ ಸುಶ್ ಆದರೆ ಈಗೀಗ ನೆನಪುಗಳು ಅಲ್ಬಮ್ ಗಳಲ್ಲಿ ಬಂಧಿಯಾಗುತ್ತಿಲ್ಲ
ಕಂಪ್ಯೂಟರ್ ನಲ್ಲಿ ಅವಿತಿವೆ ವೈರಸ್ ಬಂದಾಗ ಮಾಯನೂ ಆಗುತ್ತಿವೆ
sooper as usual...:-)
Sush,
Like it :)
Cheers,
Archu
sakkat.
raashi chanda iddu shushruta !
ಎಷ್ಟು ಚೆನ್ನಾಗಿ ಬರೆದಿದ್ದೀರಾ.... ಸಿಂಪ್ಲಿ ಸೂಪರ್ಬ್ :)
ಇಷ್ಟ ಪಟ್ಟಿದ್ದನ್ನ ಹೇಳಿದ್ದಕ್ಕೆ ಎಲ್ಲರಿಗೂ ಥ್ಯಾಂಕ್ಸ್! :-)
ಒಳ್ಳೆಯ ಲೇಖನ!
Post a Comment