Sunday, July 03, 2011
ನಡೆಯುವ ಕಪ್ಪೆ
ಅವತ್ತೊಂದು ಮಳೆಗಾಲದ ದಿನ, ಹೀಗೇ ಜೋರು ಮಳೆ.
ನಮ್ಮೂರಿನ ರಸ್ತೆಯ ಪಕ್ಕದಲ್ಲೇ ದೊಡ್ಡ ಕೆರೆ.
ಹುಟ್ಟಿ ಮೂರು ದಿನವಾದ ಕಪ್ಪೆಗಳು ನೀರಿನಿಂದ ಹೊರ-
ಬಂದು ದಂಡೆ ಏರಿ ಕೋಡಿ ಹತ್ತಿಳಿದು ರಸ್ತೆಯನ್ನೂ ದಾಟಿ
ಆಚೆ ಹೋಗುವ ಸರ-
ಭರದಲ್ಲಿ ಚಲಿಸುವ ಜೋರು
ವಾಹನಗಳ ಚಕ್ರಕ್ಕೆ ಸಿಲುಕಿ
ಅಪ್ಪಚ್ಚಿಯಾಗಿ
ಸತ್ತು ಹೋಗುತ್ತಿದ್ದಾಗ
ಇದೊಂದು ಕಪ್ಪೆ ಕುಪ್ಪಳಿಸುವ ಬದಲು
ನಡೆದು ಹೋಗುತ್ತಿತ್ತು.
ಇದನ್ನು ನೋಡಿದ ಒಂದು ಪಿಕಳಾರ ಹಕ್ಕಿ ತಾನು
ಹಾರುವುದರ ಬದಲು ಕುಪ್ಪಳಿಸತೊಡಗಿತು
ಅಲ್ಲಿದ್ದ ನಾಯಿಯೊಂದು ನಡೆಯುವುದು ಬಿಟ್ಟು ಹಾರಿತು
ಕೆರೆಯಿಂದ ಕತ್ತೆತ್ತಿ ನೋಡಿದ ಮೀನುಗಳು
ದಂಡೆಯ ಮೇಲೆ ನಡೆದಾಡತೊಡಗಿದವು
ಹೆಗ್ಗಣಕ್ಕೆ ತಲೆಕೆಟ್ಟು ಕೆರೆಗೆ ಹಾರಿ ಈಜಿತು
ಈ ವಿಚಿತ್ರ ನೋಡುತ್ತ ವಾಹನಗಳೆಲ್ಲ ನಿಂತು
ಬಿಟ್ಟವು. ನಡೆಯುತ್ತಿದ್ದ ಕಪ್ಪೆ ಅರಾಮಾಗಿ ರಸ್ತೆ
ದಾಟಿತು. ನನಗೆ ಏನೂ ಮಾಡಲು ತೋಚದೆ
ಕವನ ಬರೆದೆ.
Subscribe to:
Post Comments (Atom)
14 comments:
ಸುಶ್ರುತ,
"ಇದೊಂದು ಕಪ್ಪೆ ಕುಪ್ಪಳಿಸುವ ಬದಲು
ನಡೆದು ಹೋಗುತ್ತಿತ್ತು."
ಅಲ್ಲಿಯವರೆಗೆ ಕವಿತೆ ಇದೆ ಅನ್ನಿಸಿತು.
ಅಲ್ಲಿಯವರೆಗೆ ಬಲು ಇಷ್ಟವಾಯ್ತು!!
ಒಳ್ಳೇದಾಯ್ತು ಬಿಡಿ !.
ರಸ್ತೆ ದಾಟಿದ ಕಪ್ಪೆ,
ಲೋಕಸಭೆಗೆ ಹೋಗಿ
ಪ್ರಧಾನ ಮಂತ್ರಿಯವರ ಕುರ್ಚಿಯಲ್ಲಿ ಕುಳಿತಿತು.
"ಎಂಥಾ simple PM!
ಎಂಥಾ honest PM!"
ಎಲ್ಲರೂ ಹೊಗಳಿದರು.
he heಹೇ ಹೇ
ಏನೋ ಮಾಡಲು ಹೋಗಿ ಏನು ಮಾಡಿದೆ ನೀನು?!! :O :-p
Aaha very tricky :)
ನೈಸ್...
ಅಂತೂ ಲೋಕಕೆ ಪ್ರಳಯ ಗ್ಯಾರಂಟಿ.. !
ಇದನ್ನು ಕಂಡ ನಮ್ಮ diggy-doggy ಇದು ವಿರೋಧ ಪಕ್ಷಗಳ ಹುಚ್ಚಾಟಿಕೆ ಎಂದು ಹೂಳಿಟ್ಟಿತು !!!
ಒಮ್ಮೊಮ್ಮೆ ಹೀಗೂ ಆಗುವುದು :)
@ Tina,
ಹೂಹುಂ? ;) ಮೇಬಿ! :) ಒಂದು ಪ್ರಯೋಗವಾಗಿ ಬರೆದೆ ಈ ಕವಿತೆ.
:-) ಪ್ರತಿಕ್ರಿಯಿಸಿದ ಎಲ್ಲರಿಗೂ ಥ್ಯಾಂಕ್ಸು.
ಓದಿದ ತಕ್ಷಣ ಇಷ್ಟವಾಗಿ ನಾನೂ ಕಮೆಂಟಿಸಿಬಿಟ್ಟೆ
innu EnEnu nODbEkO naavu..:) nc
Chennagide.....dhanyavaadagalu...
Post a Comment