Wednesday, April 26, 2006

Welcome to my page...
Hi,

Welcome to my world...! My name is Sushrutha. Friends call me 'Sushi'.

ನಾನು ಒಂಥರಾ ಖುಶಿ ಹುಡುಗ. ಸುಶ್ರುತ ಅಂದ್ರೆ ವೇದಪಾರಂಗತ ಅಂತ್ಲಂತೆ. ಆದ್ರೆ ನಂಗೆ ಮಾತ್ರ ಒಂದು ವೇದಾನೂ ಗೊತ್ತಿಲ್ಲಪ್ಪ.. ಹಾಂ, ನಮಗೆ ಪ್ರೈಮರಿ ಸ್ಕೂಲ್‌ನಲ್ಲಿ ಒಬ್ಬ ಟೀಚರ್ ಇದ್ರು: ವೇದಾವತಿ ಮಿಸ್ ಅಂತ. ಅವ್ರನ್ನ ಗೊತ್ತು ಅಷ್ಟೆ. ಅವ್ರು ಈಗ ಎಲ್ಲಿದಾರೋ ಗೊತ್ತಿಲ್ಲ. ತುಂಬಾ ಸಿಡುಕಿ ಟೀಚರ್ ಆಗಿದ್ರು ಅವರು. ಅವರಕ್ಕಿಂತಾ ಮುಂಚೆ ಯಶೋಧ ಟೀಚರ್ ಅಂತ ಒಬ್ರು ಇದ್ರು. ಅವ್ರು ಮಾತ್ರ ತುಂಬಾ ಒಳ್ಳೇವ್ರು. ಅವ್ರಿಗೆ 'ಸಹನಾ' ಅಂತ ಒಬ್ಳು ಮಗಳು ಇದ್ಲು. ಟೀಚರ್ ಮನೆ ನಮ್ಮನೆ ಹತ್ರಾನೇ ಇತ್ತು. ಸಹನಾಗೆ ಆಟ ಆಡ್ಲಿಕ್ಕೆ ನಾನೇ ಬೇಕಿತ್ತು. ಟೀಚರ್ರು ಮಗಳನ್ನ ಅವಾಗಿವಾಗ ಶಾಲೆಗೆ ಕರ್ಕೊಂಡುಬಂದ್ರೆ, ಸಹನಾ ಪುಟ್ಟೀನೂ ನನ್ನೂ ಹೊರಗಡೆ ಆಟ ಆಡ್ಕೊಳ್ಲಿಕ್ಕೆ ಕಳಿಸಿ ತಾವು ಒಳಗಡೆ ಪಾಟ ಮಾಡ್ಕೊತಿದ್ರು. ನಂಗೆ ಮಾತ್ರ ಪಾಟ ಇಲ್ಲ! ಬಹುಶ: ನಾನಾಗ ಮೂರನೇ ಕ್ಲಾಸು ಅನ್ಸುತ್ತೆ.

ನಾನೊಬ್ಬ ಭಾವನೆಗಳ ಹುಡುಗ. ನನಗೆ ರಾತ್ರಿ ಇಷ್ಟ. ನನಗೆ ಕತ್ತಲೆ ಇಷ್ಟ. ನನಗೆ ಹಿತವಾದ ಬೆಳದಿಂಗಳು ಇಷ್ಟ. ತಂಗಾಳಿ ಇಷ್ಟ. ನಕ್ಷತ್ರ ತುಂಬಿದ ಬಿಚ್ಚು ಆಕಾಶ ಇಷ್ಟ. ಅಲ್ಲಿ ಚುಕ್ಕಿ ಎಣಿಸುವುದು ಇಷ್ಟ.

ಮೊನ್ನೆ ಏನಾಯ್ತು ಗೊತ್ತಾ? ರಾತ್ರಿ ಹನ್ನೊಂದೂವರೆ ಆಗಿತ್ತೇನೋ. ನನ್ನ ಸಿಂಗಲ್ ರೂಮ್ ಎಂಬ ಗೂಡಿನಲ್ಲಿ ಭೈರಪ್ಪನವರ 'ಜಲಪಾತ' ಕಾದಂಬರಿ ಓದುತ್ತಾ ಕುಳುತಿದ್ದವನು ಸುಮ್ಮನೆ ಹೀಗೆ ಹೊರಬಂದೆ. ಗೆಳೆಯ ಬಂದಾಗ ಬಿಟ್ಟು ಹೋಗಿದ್ದ ಸಿಗರೇಟೊಂದು ನನ್ನ ಕೈಯಲ್ಲಿತ್ತು. ಅದನ್ನು ಹಚ್ಚಲೋ ಬಿಡಲೋ ಎಂಬ dilemmaದಲ್ಲಿದ್ದೆ. ಆಗತಾನೆ ಬಂದು ಹೋಗಿದ್ದ ಮಳೆಯೊಂದು ಟೆರೇಸನ್ನು ಒದ್ದೆ ಮಾಡಿತ್ತು. ತಂಪಾದ ಗಾಳಿ ಬೀಸುತ್ತಿತ್ತು. ಈ ಹವೆಗೆ, ಈ ರಾತ್ರಿಗೆ, ಈ ಮೂಡಿಗೆ ಈ ಸಿಗರೇಟು ಸೇದಲೇ ಸರಿ ಅನ್ನಿಸಿ ಕಡ್ಡಿ ಗೀರಿ ಅದಕ್ಕೆ ಬೆಂಕಿ ಕೊಟ್ಟೆ... ಎಲ್ಲಿಂದಲೋ ತೇಲಿಬಂತು ಒಂದು ನಾದ... ನನ್ನ ಸಿಗರೇಟಿನ ಮೊದಲ ಧಮ್ಮಿನ ಹೊಗೆಯನ್ನು ಇನ್ನೂ ಬಿಟ್ಟಿರಲಿಲ್ಲ.... ತಂಗಾಳಿಯೊಂದಿಗೇ ಬೆರೆತು ಬಂದಿತ್ತು ಆ ಸುಮಧುರ ಗಾನ.. ನಾನು alert ಆದೆ. ಕಿವಿ ನಿಮಿರಿಸಿದೆ. ಪಕ್ಕದ ಮನೆಯ ಹುಡುಗಿಯ ಹಾಡದು. ನನಗೆ ಆ ಕ್ಷಣ ಆ ಹಾಡು ಇಷ್ಟವಾಯಿತು. ಆ ದನಿ ಇಷ್ಟವಾಯಿತು. ನಾನು ಬಗ್ಗಿ, ತಲೆ ಎತ್ತಿ, ಎಲ್ಲಾ ಮಾಡಿ ನೋಡಿದೆ: ಉಹೂಂ, ಹುಡುಗಿ ಕಾಣುತ್ತಿಲ್ಲ... ಕೇವಲ ಹಾಡು ಮಾತ್ರ ಕೇಳಿಸುತ್ತಿದೆ... ಮನಸು ಎಂಥಾ ವಿಚಿತ್ರ ಅಲ್ವಾ? ಹಾಡಿನ ಜೊತೆಜೊತೆಗೇ ಹಾಡಿನ ಹುಡುಗಿಯೂ ಇಷ್ಟವಾಗತೊಡಗುತ್ತಾಳೆ....! ನಾನು ಸಿಗರೇಟ್ off ಮಾಡುತ್ತೇನೆ.

Sorry, ನಾನು ಭಾವನೆಗಳ ಹುಡುಗ ಅಂತ ಹೇಳಲು ಹೋಗಿ, ಲಹರಿಗೆ ಸಿಕ್ಕು, ಎಲ್ಲೆಲ್ಲಿಗೋ ಹೋಗಿಬಿಟ್ಟೆ. ಇಲ್ಲ, ಇವನ್ನೆಲ್ಲಾ ಯಾರ ಜೊತೆಗೋ share ಮಾಡ್ಕೋಬೇಕು ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ಇವೆಲ್ಲ ಕೇವಲ ನನ್ನ ಪಾಲಿನವು. ನನ್ನ ಖಾಸ್‍ಬಾತ್. ನನ್ನ ಡೈರಿಯಲ್ಲಿ ಬೆಚ್ಚಗಿರುವಂತವು. ನನ್ನ ಚಿತ್ತಕೋಶದಲ್ಲಿ ಭದ್ರವಾಗಿರುವಂತವು. ಆದರೆ friends, ಹಂಚಿಕೊಳ್ಳಬಹುದಾಂತಹ, ಹಂಚಿಕೊಳ್ಳಲೇಬೇಕಾದಂತಹ ಕೆಲವೊಂದು ಸಂಗತಿಗಳು, ವಿಷಯಗಳು, ಮಾತುಗಳು ನನ್ನ ಬಳಿ ಇವೆ. ಅದಕ್ಕಾಗಿ ಈ blog.

Ok, let's start! Thanx for visiting my Blog. If you like my blog and its contents, please feel free to write a few words.

Thanks, Bye,

-ಸುಶಿ.

3 comments:

Raghuuuuu said...

enlo maga hengegell barkondu bittidiya idella nijana...................

ಸುಶ್ರುತ ದೊಡ್ಡೇರಿ said...

hoom kananna, naanyake suL heLli? eno nimmanthavra asirvada.. barithidivi, badukdivi.. neevu hinge support madthidre baryonanthe innoonu..!

ranju said...

ಪುಟ್ಟಣ್ಣ,

ಈ ಲೇಖನನ ತುಂಬಾ ದಿನದ ಹಿಂದೆ ಓದಿದ್ದೆ. ಆವತ್ತು ಎನೋ ಬೇರೆನೆ ಸುಶ್ರುತ ಕಂಡಿದ್ದ ಆದ್ರೆ ಇವತ್ತು ನಂಗೆ ಬೇರೆನೆ ಅರ್ಥ ಕೊಡ್ತಾ ಇದೆ ಈ ಲೇಖನ ಮತ್ತು ನನ್ನ ಅಣ್ಣ ತುಂಬಾ ಇಷ್ಟ ಆಕ್ತಾ ಇದ್ದ. ಆ ಭಾವನೆಗಳ ಹುಡುಗ something different from others.