Monday, April 19, 2010

ಗೋಕುಲ ವಿರಹ

ರಾತ್ರಿ ಅಂಥಾ ಮಳೆ ಬಂದಿತ್ತು ಅಂತ
ಗೊತ್ತಾಗಿದ್ದು ಬೆಳಗ್ಗೆ ಎದ್ದಮೇಲೇ.

ನಂಬಲಿಲ್ಲ ನಾನು,
ಚೂರೂ
ಒದ್ದೆಯಾಗಿರಲಿಲ್ಲವಲ್ಲ ನೀನು
ನಡೆದು ಬರುವಾಗ ತಡರಾತ್ರಿ
ಕನಸಿನಲ್ಲಿ?

ನೆಂದಿದ್ದರೆ, ಮೆತ್ತನೆ ವಸ್ತ್ರದಲ್ಲಿ
ನಿನ್ನ ತಲೆ ಒರೆಸಿ
ಗರಿಗರಿ ಷರಾಯಿ ತೊಡಿಸಿ
ಬೆಚ್ಚನೆ ಹಾಲು ಕುಡಿಸಿ
ಅಂತಃಪುರದ ಸೋಪಾನದಲ್ಲಿ
ರಜಾಯಿ ಸಮೇತ ಬಳಸಿ
ತಟ್ಟುತ್ತಿದ್ದೆ ಚುಕ್ಕು.

ಆದರೆ, ಬಂದ ನೀನು
ಒದ್ದೆಯಾಗಿರಲೇ ಇಲ್ಲವಲ್ಲ..?
ಹಾಗಾದರೆ ಗಂಧವತೀ ಭೂಮಿ
ಸುಳ್ಳು ಹೇಳುತಿದೆಯೇ?
ಬಿದ್ದಿರುವ ತರಗೆಲೆಗಳು ಒದ್ದೆಯಾಗಿವೆ ಏಕೆ?
ಭವಂತಿ ಅಂಗಳದಲ್ಲಿ ನೀರು ಹೇಗೆ?

ಎಚ್ಚರಾದಾಕ್ಷಣ ಪಕ್ಕದಲ್ಲಿ ತಡವಿ
ನೀನಿಲ್ಲದ್ದು ತಿಳಿದು ಬಾಗಿಲಿಗೆ ಓಡೋಡಿ ಬಂದು
ಎಲ್ಲಿ ಹೋದ ನನ್ನಿನಿಯ ಎಲ್ಲಿ ಹೋದ ಕಾಂತ
ಅಂತ ಅರಮನೆಯನ್ನೆಲ್ಲ ಹುಚ್ಚಿಯಂತೆ ಹುಡುಕುವಾಗ
ಸಖಿಯರು ಬಂದು ಸಮಾಧಾನ ಮಾಡುತ್ತಾರೆ:
ಬಿಡು, ಬಿದ್ದದ್ದು ಎಂದಿನಂತೆ ಒಣ ಕನಸು ಅಂತ.

ಹೌದು, ಬಿಡದ ಭ್ರಮೆ ನನಗೆ..
ಕೃಷ್ಣ ಬಿಟ್ಟುಹೋದಮೇಲೆ
ಗೋಕುಲದಲ್ಲಿ ಮಳೆಯೆಲ್ಲಿ ಆಗಿದೆ?
ಈ ಒದ್ದೆ, ಈ ಒಸರು ಎಲ್ಲ
ರಾಧೆ ಮತ್ತವಳ ಸಖಿಯರ
ಕಣ್ಣೀರ ಹರಿವಿನ ಕುರುಹು
ಎಂಬುದು ಹೊಳೆಯದೆ ಹೋಯಿತಲ್ಲ..

26 comments:

ರಂಜನಾ ಹೆಗ್ಡೆ said...

puttanna
superb. virahada vedaneyannu thumba channagi bannisiddiya

Anonymous said...

:-)
surprising was thinking about Radha and Meera today and their love for Krishna!!!
and now this poem
lovely coincidence lovely poem
:-)
malathi S

ಶ್ರೀನಿಧಿ.ಡಿ.ಎಸ್ said...

ah! such a lovely poem. Loved it maga.ಬಿದ್ದಿರುವ ತರಗೆಲೆಗಳು ಒದ್ದೆಯಾಗಿವೆ ಏಕೆ?
ಭವಂತಿ ಅಂಗಳದಲ್ಲಿ ನೀರು ಹೇಗೆ?
-ah!

Subrahmanya said...

simply superb .

ಡಾ.ಕೃಷ್ಣಮೂರ್ತಿ.ಡಿ.ಟಿ. said...

'ಕೃಷ್ಣ ಬಿಟ್ಟು ಹೋದ ಮೇಲೆ ---------ಹೊಳೆಯದೇ ಹೋಯಿತಲ್ಲ 'ತುಂಬಾಮಾರ್ಮಿಕವಾಗಿವೆ!ಧನ್ಯವಾದಗಳು.

ಗೌತಮ್ ಹೆಗಡೆ said...

bro maate ille...

sunaath said...

ಸುಶ್ರುತ,
ಅತ್ಯುತ್ತಮ ಕವನ ಬರೆದಿರುವಿರಿ.

kanaadaraaghava said...

kanasugalu osaruttave! kyaa baat hai!

ಶ್ವೇತ said...

Wow tumba chennagide. Yaake blaag nalli free aagi oodalu haakiddira? ondu kavana sankala horatarabaarade? climax antu tumba ne chennagide.

Divya Mallya - ದಿವ್ಯಾ ಮಲ್ಯ said...

"ಈ ಒದ್ದೆ, ಈ ಒಸರು ಎಲ್ಲ
ರಾಧೆ ಮತ್ತವಳ ಸಖಿಯರ
ಕಣ್ಣೀರ ಹರಿವಿನ ಕುರುಹು"
Really superb!!

Sree said...

sikkapatte niceu:)

ಸುಮ said...

ಸುಶ್ರುತ ಕವನ ತುಂಬ ಚೆನ್ನಾಗಿದೆ. ಪುತಿನ ಅವರ ’ಗೋಕುಲನಿರ್ಗಮನ’ ನೆನಪಾಯಿತು.

umesh desai said...

ಸುಶ್ರುತನಿಗೆ ಮಾತ್ರ ಈ ರೀತಿ ಬರೆಯಲು ಸಾಧ್ಯ ಆ ಸಾಲು ಹಿಡಿದು ನಿಲ್ಲಿಸುತ್ತದೆ...
ಬಿದ್ದಿರುವ ತರಗೆಲೆಗಳು ಒದ್ದೆಯಾಗಿವೆ ಏಕೆ?
ಭವಂತಿ ಅಂಗಳದಲ್ಲಿ ನೀರು ಹೇಗೆ?

vikas negiloni said...

simply beautiful sushrutha!
keep work going.
-vikas negiloni

Vijaya said...

:-) chennagide! paapa viraha baree gopikeyarige maatra .... paapi krishnange???

ವಿ.ರಾ.ಹೆ. said...

’ಚುಕ್ಕು ’ ಅಂದ್ರೆ?

ಸುಶ್ರುತ ದೊಡ್ಡೇರಿ said...

ಡಿಯರ್ ಆಲ್,
ಥ್ಯಾಂಕ್ಯೂ ವೆರಿ ಮಚ್!

ಶ್ವೇತ,
ವೆಲ್.. ಹೆಹೆ.. ಓಕೇ, ನೋ ಕಮೆಂಟ್ಸ್! :) :-)

Vijaya,
;)


ವಿ.ರಾ.ಹೆ.,
ಗೊತ್ತಿಲ್ಯಾ? ಚುಕ್ಕು ತಟ್ಟೋದು ಕಣೋ.. ನಿದ್ದೆ ಬರ್ಲಿ ಪಾಪಚ್ಚಿಗೆ ಅಂತ ದದ್ದಾ ಲಾಲೀ.. ಜೋಜೋ ಲಾಲೀ.. ಅಂತ ತಟ್ಟೀ ತಟ್ಟೀ ಮಾಡದು..

kusuma sayimane said...

ಸುಶ್ರುತ,
ಚಂದ ಪದ್ಯ ಬರದ್ದೆ.ಆದಷ್ಟು ಬೇಗ ಕವನ ಸಂಕಲನವೊಂದು ಹೊರಬರಲಿ.ಧನ್ಯವಾದಗಳು.
ಕುಸುಮಾ ಸಾಯಿಮನೆ

nostalgia said...

hi
recently lot of poems......... good too........

ಸಾಗರದಾಚೆಯ ಇಂಚರ said...

Simply Superb Sir
liked it

ವಿನಾಯಕ ಕುರುವೇರಿ said...

ಸುಶ್ರುತ ಅವರೇ,
ತುಂಬಾ ಆಪ್ತವಾಗುವಂತಹ ಸಾಲುಗಳು. 'ಗೋಕುಲ ನಿರ್ಗಮನ' ಒಂದು ಕ್ಷಣಕ್ಕೆ ನೆನಪಾಯಿತು. ಬರೆಯುತ್ತಿರಿ ಹೀಗೇ. ನನ್ನದೂ ಇದೇ ಎಳೆಯಲ್ಲಿನ ಒಂದು ಕವಿತೆಯಿದೆ. ಕೊಂಡಿ ಇಲ್ಲಿದೆ :-)
http://navilinagari.blogspot.com/2007/01/blog-post_16.html

ಅನಿಕೇತನ ಸುನಿಲ್ said...

Excellent Sush...no other words...;-)

ಅರುಂಧತಿ said...

ವಿರಹ ಬಾಧೇಯೋಳಗ ಬಿದ್ದ ನೋಯುತ್ತಿರುವ ರಾಧೇ ಮತ್ತು ಅವರ ಸಖಿಯರ ನೋವಿನ ಆಳಾ , ಕಲ್ಪನೆ ಮಿರಿಸಿದಂಥ ಕನಸಿನ ಬಗ್ಗೆ ಭಾರಿ ಛಂದ ಬರದೀರಿ .
ಮನಸ್ಸಿಗೆ ಹಿಡಿಶೇದ ನೋಡ್ರಿ ಸುಶೃತ ಅವರ . . keep it up . .

Parisarapremi said...

@vijaya: krishnange viraha aagbitre iDee tattvashaastra ne matte bareebekaagutte ashte... ;-)

@sushrutha: enayya, neenu eshshshshshtu sogasaagi kavite bareeteeyallayya...

aadroo ninge, shreenidhi ge yaako krishna and avana sangaDigara mele kaNNu jaasti. alva? ;-)

ಸುಶ್ರುತ ದೊಡ್ಡೇರಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್ ಆಯ್ತಾ? :-)

@ Arun,
ಹೂಂ.. ಅದೊಂಥರಾ ಹಂಗೇ! :)

Niveditha said...

Beeeaaauuuttiiiffffuuullllllll(beautiful)