Tuesday, September 26, 2006

'ಸರ್ವಸ್ವ'ದ ಬಗ್ಗೆ ಸರ್ವೇಸಾಮಾನ್ಯನ ಒಂದು ಸರ್ವೆ!

ಇಷ್ಟೊತ್ತಿನ ತನಕ ಗೆಳೆಯ ಸಂತೋಷನೊಂದಿಗೆ ಮಾತನಾಡುತ್ತಿದ್ದೆ. ಸಂತೋಷ ಮತ್ತು ನಾನು ಆಗೀಗೊಮ್ಮೆ ಫೋನ್ ಮಾಡಿಕೊಂಡು ಗಂಟೆಗಟ್ಟಲೆ ಮಾತನಾಡುವ ಸ್ನೇಹಿತರು. ನಮ್ಮ ಮಾತು ತೀರಾ ಭಾವನಾತ್ಮಕವಾಗಿರೊತ್ತೆ. ಸಾಮಾನ್ಯವಾಗಿ ಅದೊಂದು ಚರ್ಚೆಯೇ ಆಗಿರೊತ್ತೆ. ಯಾವುದೋ ಒಂದು topic ಅವನನ್ನು ಕಾಡಲಾರಂಭಿಸಿದಾಗ ಅವನು ನನಗೆ call ಮಾಡುತ್ತಾನೆ. ಆಮೇಲೆ ನಾವಿಬ್ಬರೂ ಗಂಟೆಗಟ್ಟಲೆ ಮಾತನಾಡುತ್ತೇವೆ. ನಮ್ಮ ಬಹಳಷ್ಟು ಚರ್ಚೆಗಳು ಎಲ್ಲೋ ಶುರುವಾಗಿ ಎಲ್ಲೋ ಹೋಗಿ ಮುಗಿಯುತ್ತವೆ. ಕೆಲವೊಮ್ಮೆ ಅವು right way ನಲ್ಲೇ ಸಾಗುತ್ತವೆ. ಅನೇಕ ಸಲ ಚರ್ಚೆ ದಾರಿ ತಪ್ಪುತ್ತದೆ. ನನ್ನ ಕೆಲ concept ಗಳನ್ನು ಆತ ಒಪ್ಪುವುದಿಲ್ಲ; ಹಾಗೆಯೇ ಅವನ ಕೆಲ ವಾದಗಳನ್ನು ನಾನು ಅಲ್ಲಗಳೆಯುತ್ತೇನೆ. ಒಟ್ಟಿನಲ್ಲಿ ಕೊನೆಯಲ್ಲಿ ಇಬ್ಬರೂ satisfy ಆಗದೇ ಮಾತು ಮುಗಿಸುತ್ತೇವೆ.

ಇವತ್ತು ನಾವು ಮಾತಾಡಿದ್ದು 'ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲನೇ?' ಎಂಬ ವಿಷಯದ ಮೇಲೆ. 'ಹಾಯ್' ನ ಬಾಟಮ್ ಐಟಮ್ ನಲ್ಲಿ ರವಿ ಬೆಳಗೆರೆ ಬರೆದ ಲೇಖನವೊಂದರ ತಳಹದಿಯ ಮೇಲೆ ನಮ್ಮ ವಾದ ಸಾಗಿತ್ತು. ನಾನೆಂದೆ, 'ಹೌದು, ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲ' ಅಂತ. ಆತ ಅದನ್ನು ಒಪ್ಪಲಿಲ್ಲ. ನನ್ನ ವಾದ- ನಾವು ಪ್ರೀತಿಸಿದ ವ್ಯಕ್ತಿ ನಮಗೆ ಸರ್ವಸ್ವವೇ ಅಲ್ಲವೇ? ನೀನೇ ನನ್ನ ಸರ್ವಸ್ವ ಅಂತ ಒಪ್ಪಿಕೊಂಡಿರುತ್ತೇವಲ್ಲವೇ ಅವಳ ಬಳಿ? ಆಕೆಗೆ ನಾನು ಸರ್ವಸ್ವ ಎಂದಾದಾಗ ನಾನು ಆಕೆಯನ್ನು ಸರ್ವಸ್ವ ಅಂದುಕೊಳ್ಳುವುದರಲ್ಲಿ ಯಾವ ತಪ್ಪಿದೆ? ಆಕೆಗೆ ನಾನು ಸರ್ವಸ್ವ ಅಲ್ಲ ಅಂತಾದರೆ, of course, ನನಗೆ ಆಕೆ ಸರ್ವಸ್ವಳಾಗಲಿಕ್ಕೂ ಅರ್ಹಳಲ್ಲ.

ಇಷ್ಟಕ್ಕೂ ಒಬ್ಬ ವ್ಯಕ್ತಿ ನನಗೆ ಸರ್ವಸ್ವ ಯಾವಾಗ ಆಗುತ್ತಾನೆ? ಆತ ನನ್ನೆಲ್ಲಾ need ಗಳನ್ನೂ fulfill ಮಾಡುವವನಾಗಿದ್ದಾಗ. ಬೆಳಗೆರೆಯ ಉದಾಹರಣೆಯನ್ನೇ ಇಲ್ಲಿ ಬಳಸುವುದಾದರೆ, ನಮ್ಮ ಮಗುವಿನ ಮೂಗಿನಲ್ಲಿ ಬಳಪ ಸಿಕ್ಕಿಕೊಂಡಿರುತ್ತದೆ. ನಾವು ಡಾಕ್ಟರ್ ಬಳಿಗೊಯ್ಯುತ್ತೇವೆ. ಆಗಿನ ಆ ಕ್ಷಣದಲ್ಲಿ ಆ ಡಾಕ್ಟರೇ ನಮ್ಮ ಸರ್ವಸ್ವ. ಹೀಗೆ, ನಮ್ಮನ್ನು ಕಷ್ಟದಿಂದ ಪಾರು ಮಾಡುವವರು, ನಮ್ಮ ಅಪೇಕ್ಷೆಯನ್ನು ಈಡೇರಿಸುವವರು ನಮಗೆ ಸರ್ವಸ್ವವಾಗುತ್ತಾರೆ.

ಸಂತೋಷ ನಾನು ಮೊದಲು ಹೇಳಿದ್ದನ್ನೇ ಮತ್ತೆ ಕೈಗೆತ್ತಿಕೊಂಡು ಕೆಣಕಲಾರಂಭಿಸಿದ. 'ಪ್ರೀತಿಸಿದ ವ್ಯಕ್ತಿಯೇ ಸರ್ವಸ್ವ ಅಂದೆಯಲ್ಲಾ, ನೀನು ನಿನ್ನ ತಾಯಿಯನ್ನು ಪ್ರೀತಿಸುತ್ತೀಯ. ಹಾಗಾದರೆ ನೀನು ತಾಯಿಯನ್ನು ಸರ್ವಸ್ವ ಎಂದು ಭಾವಿಸಿದ್ದೀಯಾ? ಪ್ರಾಮಾಣಿಕವಾಗಿ ಉತ್ತರಿಸು.' ನಾನು ಯೋಚಿಸಿದೆ: ಹೌದು, ನನ್ನಮ್ಮ ನನ್ನ ಪಾಲಿಗೆ ಸರ್ವಸ್ವವೇ ಸರಿ. ಹಾಗಿದ್ದಾಗ, ಆಕೆಯೇ ನನ್ನ ಸರ್ವಸ್ವವಾಗಿದ್ದಾಗ, ನಾನ್ಯಾಕೆ ಮತ್ತೊಬ್ಬ ಹುಡುಗಿಯನ್ನು ಪ್ರೀತಿಸಬೇಕು? ಅಮ್ಮನಲ್ಲಿ ಇಲ್ಲದ್ದು ಇವಳಲ್ಲಿ ಏನಿದೆ? ಹೌದು, ಸಾಕಷ್ಟಿದೆ. ಅದಕ್ಕಾಗಿಯೇ ನಾನು ಇವಳ ಪ್ರೀತಿಗೆ ಕೈ ಚಾಚಿದ್ದು. ಇವಳು ಅಂತ ಅಷ್ಟೇ ಅಲ್ಲ, ಇವಳ ಪ್ರೀತಿ ಅಲ್ಲದೆಯೂ ನನಗೆ ಇನ್ನೂ ಸಾಕಷ್ಟು ಬೇಕು. ನನಗೆ ಸಂತೋಷನಂತಾ ಉತ್ತಮ ಗೆಳೆಯರ ಸ್ನೇಹ ಬೇಕು, ಬೆಳಗೆರೆಯಂತಾ 'ಗುರುವಲ್ಲದ ಗುರು-ತಂದೆಯಲ್ಲದ ತಂದೆ'ಯ ಬರಹ ಬೇಕು, ಮನಸ್ಸಿಗೆ ಬೇಸರವಾದಾಗ ಮುದ ನೀಡುವಂತಹ ಹಾಡು ಬೇಕು, ನೋಡಲು ಖುಷಿ ನೀಡುವಂತಹ ಸಿನಿಮಾ ಬೇಕು... ನನ್ನ ಬೇಕುಗಳ ಪಟ್ಟಿ ದೊಡ್ಡದಿದೆ. ಇವನ್ನೆಲ್ಲಾ ಕೊಡಮಾಡುವವರು ಆಯಾ ಕ್ಷಣದಲ್ಲಿ ನನ್ನ ಪಾಲಿನ ಸರ್ವಸ್ವಗಳೇ. ಆದರೂ ಒಬ್ಬ ಹುಡುಗಿ ಒಬ್ಬ ಹುಡುಗನಿಗೆ ಕೊಡಬಹುದಾದಂತಹ ಸರ್ವಸ್ವದ ಘಾಢತೆ ಇದೆಯಲ್ಲಾ, ಅದು ಉಳಿದೆಲ್ಲಕ್ಕಿಂತ ಶ್ರೇಷ್ಟವಾದದ್ದು ಅಂತ ನನ್ನ ನಂಬುಗೆ. ಒಬ್ಬ ಹುಡುಗಿ ನನಗೆ ಎಲ್ಲವೂ ಆಗಬಲ್ಲಳು. ಆಕೆ ನನಗೆ ಅತ್ಯುತ್ತಮ ಗೆಳತಿ, ಪ್ರೇಯಸಿ, ಗುರು, ಅಮ್ಮ, ಬಂಧು... ಆಕೆಗೆ ಸರ್ವಸ್ವವೂ ಆಗುವ ಸಾದ್ಯತೆ ಇದೆ. She means everything to me. ಬಹಶಃ ಬೇರೆ ಯಾರಿಗೂ ಈ ಸಾಧ್ಯತೆ ಇಲ್ಲ.

ಸಂತೋಷ ಮತ್ತೆ ನನ್ನನ್ನು cross-question ಮಾಡಿದ: ಹಾಗಾದರೆ 'ಪ್ರೀತಿ' ಮತ್ತು 'ಅವಳಿಗೆ ಸರ್ವಸ್ವವಾಗುವುದು' ('love' and 'being everything to her') ಎರಡೂ ಒಂದೇನಾ? ಒಂದೇ ಎಂತಾದರೆ, ನೀನಾಗ ಹೇಳಿದಂತೆ 'ನಮ್ಮ ಅಪೇಕ್ಷೆಯನ್ನು ಈಡೇರಿಸುವವರೇ ನಮಗೆ ಸರ್ವಸ್ವ'; ಹಾಗಾಗಿ ಪ್ರೀತಿಯೂ ಸಹ ನಿನ್ನ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುವ ಒಂದು ಮಾರ್ಗ ಅಷ್ಟೇನಾ? ನೀನು ಪ್ರೀತಿ ಮಾಡುವುದು ಕೇವಲ ನಿನ್ನ ಅಪೇಕ್ಷೆಗಳ ಈಡೇರಿಕೆಗೋಸ್ಕರವೊ? ನಿರಪೇಕ್ಷ ಪ್ರೇಮವೆಂಬುದಿಲ್ಲವೋ?

ಈ ಬಗ್ಗೆ ಇಬ್ಬರೂ ಸ್ವಲ್ಪ ಚರ್ಚಿಸಿದೆವಾದರೂ, 'ಪ್ರೀತಿ'ಗೆ ಹೊಸ definition ಕೊಡಬೇಕಾದಂತಾದಾಗ, ಅದನ್ನು ಅಲ್ಲಿಗೇ ಕೈಬಿಟ್ಟು ಮತ್ತೆ ವಾಪಾಸು ಬಂದೆವು.

ಇಷ್ಟಕ್ಕೂ 'ಅವಳಿಗೆ ಸರ್ವಸ್ವವಾಗುವುದು' ಅಂದರೇನು? ಅದೊಂದು ಸಾಧ್ಯವಾಗುವಂತಹ ಮಾತಾ? ಯಾವಾಗ 'ಅವಳೇ ನನ್ನ ಸರ್ವಸ್ವ' ಅಂತ ನನಗೆ ಭಾಸವಾಗುತ್ತದೆಯೆಂದರೆ, ನಾನು ಅವಳ ಪ್ರೀತಿಯ ಕೊಳದಲ್ಲಿ ಪೂರ್ತಿ ಮುಳುಗಿಹೋಗಿದ್ದಾಗ. ನಾನು ಯಾರನ್ನು ನೋಡಿದರೂ, ಏನನ್ನು ನೋಡಿದರೂ ಅದರಲ್ಲಿ ಅವಳ ಬಿಂಬವೇ ಕಾಣಿಸುತ್ತದೆ. ಅಮ್ಮನಲ್ಲೂ ಅವಳು, ಗುರುವಿನಲ್ಲೂ ಅವಳು, ಸಿನಿಮಾದ ನಾಯಕಿಯಲ್ಲೂ ಅವಳ ಮುಖ, ಹಾಡಿನ ಗಾಯಕಿಯಲ್ಲೂ ಅವಳ ದನಿ. ಈಕೆ ಹೀಗೆಂದರೆ, ನಾನು ಎಲ್ಲವನ್ನೂ ಅವಳ ಪ್ರೀತಿಯ ಕೊಳದ ನೀರಿನ ಮೂಲಕವೇ ನೋಡುತ್ತಿದ್ದೇನೆ.

ಈ ವಾದದ ಮಧ್ಯೆ ನನಗೆ ಮತ್ತೊಂದು ಅನುಮಾನ ಬಂತು. ಹಾಗಾದರೆ ಈ ಪ್ರೀತಿಯ ಕೊಳ ಬತ್ತಿಹೋದರೆ? 'ನನ್ನ ಸರ್ವಸ್ವ' ಅಂದುಕೊಂಡಿದ್ದ ಅವಳು ಬಿಟ್ಟುಹೋದರೆ? ಸರ್ವಸ್ವವೂ ಹೋದಮೇಲೆ ಉಳಿಯುವುದೇನು? ನಾನೂ ಉಳಿಯಬಾರದಲ್ಲವೇ? ಆದರೂ ಎಷ್ಟೊಂದು ಜನ ಹೀಗಾದಮೇಲೂ ಉಳಿದಿದ್ದಾರಲ್ಲವೇ? ಸರ್ವಸ್ವ ಎಂದುಕೊಂಡಿದ್ದ ಹುಡುಗಿ ಬಿಟ್ಟುಹೋದಮೇಲೂ ಬದುಕಿದ್ದಾರೆ, ಮತ್ತೊಂದು 'ಸರ್ವಸ್ವ'(?) ದೆಡೆಗೆ ಕಣ್-ಚಾಚಿದ್ದಾರೆ. ಹಾಗಾದರೆ ಪ್ರೀತಿ, ಪ್ರೀತಿಸಿದ ಹುಡುಗಿ ಸರ್ವಸ್ವ ಅಲ್ಲವೇ? ಯಾರೂ ಯಾರಿಗೂ 'ಸರ್ವಸ್ವ' ಆಗಲಿಕ್ಕೆ ಸಾಧ್ಯವಿಲ್ಲವೇ? 'ಅವಳೇ ನನ್ನ ಸರ್ವಸ್ವ' ಅಂದುಕೊಳ್ಳುವುದು ಕೇವಲ ಭ್ರಮೆಯೇ? 'Being everything to somebody' ಎಂಬುದು ಕೇವಲ ಆ ಕ್ಷಣದ ಸತ್ಯವೇ? ಅಷ್ಟೇನೇನೋ ಅನ್ನಿಸಿಬಿಟ್ಟಿತು -ಫೋನೀಟ್ಟ ಮೇಲೆ.

ಗೆಳೆಯನಿಗೆ SMS ಮಾಡಿದೆ: 'ಸಂತೋಷ, ಅವಳೇ ಸರ್ವಸ್ವ ಅಲ್ಲದಿರಬಹುದು, ಆದರೆ ಅವಳೇ ನನ್ನ ಸರ್ವಸ್ವ - ಮತ್ತು ಅವಳಿಗೆ ನಾನೇ ಸರ್ವಸ್ವ ಅಂದುಕೊಳ್ಳುವಾಗ ಸಿಗುವ ನಿರಾಳತೆ, ಖುಷಿ ಮತ್ತು ಹಮ್ಮು ಇದೆಯಲ್ಲ, ಅವು ನಿಜಕ್ಕೂ ಉನ್ನತವಾದವು. ಮತ್ತು ಅದಕ್ಕಾಗಿಯಾದರೂ ಪ್ರೀತಿಸಬೇಕು!' ಅಂತ. 'Good Night' ಒಂದು ಆ ಕಡೆಯಿಂದ ಬಂತು.

(೨೫.೦೯.೨೦೦೬; ರಾತ್ರಿ ೧.೩೦)


--------------
ಇಲ್ಲಿ 'ಅವಳು' ಅಂತ ಇರುವಲ್ಲೆಲ್ಲ 'ಅವನು' ಅಂತ, replace ಮಾಡಿಕೊಂಡರೂ ಈ ಲೇಖನದ ದಾಟಿ ಬದಲಾಗಲಾರದು ಅಲ್ಲವೇ? (ಹುಡುಗಿಯರೇ ಉತ್ತರಿಸಬೇಕು!)

10 comments:

Enigma said...

did write a big comment1 but srever wne down1 so shall re write tomorrow

mavinayanasa said...

ಮನೋಜ್ಞ ಚಿಂತನೆ, ಸುಂದರ ಲೇಖನ. ನನ್ನ ಚಿಂತನೆಯ ಪ್ರಕಾರ ಆಯಾ ಕಾಲಕ್ಕೆ ತಕ್ಕಂತೆ ಸರ್ವಸ್ವ ಎಂಬ ಅನಿಸಿಕೆಗಳು ಬದಲಾಗುತ್ತಿರುತ್ತವೆ. ಇಂತಹದ್ದೇ ಇಂತಹವರೇ ನಮಗೆ ಸರ್ವಸ್ವ ಎಂದು ಯಾವ ಕಾಲದಲ್ಲಿಯೂ ಹೇಳಲಾಗುವುದಿಲ್ಲ. ಮಗುವಿಗೆ ಅಮ್ಮ ಸರ್ವಸ್ವವೆಂದು ಕಂಡರೂ, ಮೀಸೆ ಮೂಡಲು ಅದೆಲ್ಲವೂ ಮಾಯವಾಗುವುದು. ಮರೀಚಿಕೆಯ ಹಿಂದೆ ಓಡೋಡಿ ಅದನ್ನು ತನ್ನದಾಗಿಸಿಕೊಳ್ಳಲು ಏನೆಲ್ಲಾ ನಾಟಕ ಮಾಡಿ, ನೀನೇ ನನ್ನ ಸರ್ವಸ್ವ ಎನ್ನುವುದೂ ಸಾಮಾನ್ಯ. ಅದೇ ಕಾವು ಕಡಿಮೆಯಾಗಲು, ಈ ಸರ್ವಸ್ವ ಬೇರೆಡೆಗೆ ವರ್ಗವಾಗುವುದು. ಕೆಲವೊಮ್ಮೆ ಅಧೀರತೆಯಿಂದ ಸರ್ವಸ್ವ ಎಂದು ಸ್ವೀಕರಿಸಿದರೆ, ಇನ್ನು ಕೆಲವೊಮ್ಮೆ ಅಧೀನತೆಯಿಂದ ಸರ್ವಸ್ವ ಎಂದು ಸ್ವೀಕರಿಸಬೇಕಾಗಬಹುದು.
ಇಂದಿನವರೆವಿಗೆ ಇಂತಹವರೇ ನನ್ನ ಸರ್ವಸ್ವ ಎಂದು ನನಗನ್ನಿಸಿಯೇ ಇಲ್ಲ. ಆದರೆ ಆ ಕಾಣದ ಕೈಯೊಂದು ಮಾತ್ರ ಸರ್ವಸ್ವವಾಗಿರಬಹುದೇನೋ. ಇನ್ನೂ ಹುಡುಕುತ್ತಿರುವೆ.

ಉತ್ತಮ ಚಿಂತನಾ ಲೇಖನಕ್ಕೆ ವಂದನೆಗಳು.

ಗುರುದೇವ ದಯಾ ಕರೊ ದೀನ ಜನೆ

ಸುಶ್ರುತ ದೊಡ್ಡೇರಿ said...

@ enigma

....what happened? or u r just trying to justify ur name 'enigma' (mystery, puzzle)??!!

'nyway, still waiting....

ಸುಶ್ರುತ ದೊಡ್ಡೇರಿ said...

@ mavinayanasa

ಧನ್ಯವಾದಗಳು ಸರ್. "...ಕೆಲವೊಮ್ಮೆ ಅಧೀರತೆಯಿಂದ ಸರ್ವಸ್ವ ಎಂದು ಸ್ವೀಕರಿಸಿದರೆ, ಇನ್ನು ಕೆಲವೊಮ್ಮೆ ಅಧೀನತೆಯಿಂದ ಸರ್ವಸ್ವ ಎಂದು ಸ್ವೀಕರಿಸಬೇಕಾಗಬಹುದು." ವ್ಹಾವ್! ಅಕ್ಷರಶಃ ಸತ್ಯ. ನನ್ನ ಚಿಂತನೆಗೆ ಈ ವಾಕ್ಯ core support.

Anonymous said...

ನಮಗೆ ಆಪತ್ತು ಬಂದಾಗ,ಒಂಟಿತನವನ್ನು ಅನುಭವಿಸುತ್ತಿರುವಾಗ,ದುಃಖವಾದಾಗ,ಚಿಂತೆಯಾದಾಗ ಅದನ್ನು ಹಂಚ್ಕೊಳ್ಳಕ್ಕೆ ನಮ್ಮವ್ರು ಯಾರಾದ್ರು ಬೇಕು ಅಂತ ಅನುಸ್ತ ಅಪ್ಪಿ.ಇಂತದ್ನಲ್ಲ ಹಂಚ್ಕೊಳ್ಳಕ್ಕೆ ಯಾರು ಮುಂದೆಬತ್ವ, ಅವರು ನಮಗೆ ಹತ್ತ್ರ ಆಗ್ತ.ಅವರು ನಮ್ಗೆ ಸಮಾಧಾನ ಆಗೋಹಾಗೆ ಮಾತಾಡಿದ್ರೆ ನಮ್ಗೆ ಇಷ್ಟ ಆಗ್ತ.ಅಂತ ಹುಡ್ಗಿನಾ ಮದುವೆ ಆದ್ರೆ ಅವ್ಳೇ ಸರ್ವಸ್ವ ಆಗ್ತ, ಅಲ್ದನಾ?

ಸುಶ್ರುತ ದೊಡ್ಡೇರಿ said...

@ anonymous

ಹೂಂ. ಅಂದ್ರೆ ನೀ ಹೇಳ್ತಿರೋದು ತುತ್ತು ತಿನ್ನೋವಾಗ ಅಮ್ಮ, ಮುತ್ತು ಪಡೀವಾಗ 'ಮುತ್ತುಗಾರ್ತಿ'-ನಮ್ಮ ಸರ್ವಸ್ವ ಅಂತ ಸಯ್ಯಲ...? ಇಷ್ಟ ಆದ ಹುಡ್ಗೀನೇ ಮದ್ವೆ ಆಗವು ಅನ್ನೋದೂ ಒಪ್ಪಬೇಕಾದಂಥ ಮಾತು.. :)

ಶ್ರೀನಿಧಿ.ಡಿ.ಎಸ್ said...

ಚನಾಗಿ ಬರದ್ದೆ ಸುಶ್,
ತ ವಿ ಶ್ರೀ ಹೇಳ್ದಾಂಗೆ, ಸರ್ವಸ್ವ ದ ಆಲೋಚನೆ ಕಾಲಕ್ ತಕ್ಕ ಹಾನ್ಗೆ ಬದ್ಲಾಗ್ತಾ ಇರ್ತು; ಹೊಸ ಪರಿಸರ- ಹೊಸ ಸಂಬಂಧ- ಅಥ್ವಾ ಕೆಲವು ಘಟನೆಗಳು ನಮ್ಮ "ಸರ್ವಸ್ವ" ವನ್ನ, ಬದಲಾವಣೆ ಮಾಡ್ಲಕ್ಕು...

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ

Thanx ಶ್ರೀ. ಕಾಲಾಯ ತಸ್ಮೈ ನಮಃ ಅಂದ್ಕಂಡು ಸಿಕ್ಕ 'ಸರ್ವಸ್ವ'ಗಳನ್ನೆಲ್ಲಾ enjoy ಮಾಡ್ತಾ ಹೋಗುವವನೇ ಬುದ್ಧಿವಂತ ಅಂತಾತು.. ಸರಿ ಸರಿ..!

Sree said...

'ಸರ್ವಸ್ವ' ಅನ್ನೋದು ಸಾರ್ವಕಾಲಿಕ ಸತ್ಯ ಆಗೋದು ಕಷ್ಟನೇ!:) ಅವಳೇ ನನ್ನ ಸರ್ವಸ್ವ ಅನ್ನೋದು ಪರ್ಮನೆಂಟ್ ಟ್ರುತ್ ಆಗಬೇಕು ಅಂದ್ರೆ ಮೊದಲು ನಿಮ್ಮ 'ಸರ್ವಸ್ವ' ಅನ್ನೋದು ಒಂದು ಪರ್ಮನೆಂಟ್ ಟ್ರುಥ್ ಆಗ್ಬೇಕು ಅಲ್ಲ್ವ? ಅದು ಸಾಧ್ಯವಾ? ನಾವೇ ದಿನ ದಿನಕ್ಕೆ, ಕ್ಷಣ ಕ್ಷಣಕ್ಕೆ ಬದಲಾಗ್ತಿರೋವಾಗ ಒಂದರೆ ಕ್ಷಣಕ್ಕದ್ರೂ ಯಾರಾದ್ರೂ ನಮ್ಮ ಸರ್ವಸ್ವ ಅನ್ನಿಸಿದ್ದ್ರೆ ಆ ಕ್ಷಣ ಅಮೂಲ್ಯ ಅನ್ನಿಸುತ್ತೆ... ಎಲ್ಲವೂ ಯಾವಾಗ್ಲೂ ಇರಬೇಕು ಅಂತ ಹಂಬಲಿಸಬೇಕಾ?:)

ಇನ್ನು ಅದರ ಎಕ್ಸ್ಕ್ಲೂಸಿವಿಟಿಯ ಬಗ್ಗೆ ಹೇಳ್ಬೆಕಾದ್ರೆ, ಹೌದು,ಸಿನೆಮಾ ಹಾಡು, ಬೆಳಗೆರೆಯವ್ರ ಲೇಖನ ಎಲ್ಲವೂ ಬೇಕಾದ್ರೂ ಪ್ರಯಾರಿಟಿಯ ವಿಷ್ಯಕ್ಕೆ ಬಂದ್ರೆ ಈ ನಿಮ್ಮ 'ಸರ್ವಸ್ವ' ಆಗೋ ಒಂದು ವ್ಯಕ್ತಿಗಾಗಿ ಬದುಕಿನ ಈ ಮಿಕ್ಕೆಲ್ಲ ಖುಷಿಗಳನ್ನ ಪಕ್ಕಕ್ಕಿಡಬಲ್ಲಿರಿ ಅಲ್ಲ್ವ? ಇಡ್ತೀವಿ ನಾವು ಹುಡ್ಗೀರಂತೂ;p ಹಾಗೆ ನನ್ನ ಡಿಫಿನಿಶನ್ ನಲ್ಲಿ ನಮ್ಮ ಇನ್ನೆಲ್ಲ ಖಯಾಲಿಗಳನ್ನ(ಒಂದು ರೀತಿಯಲ್ಲಿ ನಮ್ಮ 'ಸರ್ವಸ್ವ'ವನ) ಯಾರಿಗೊಸ್ಕರವಾದ್ರೂ ಬಿಡೊಕೆ ಸಿದ್ಧ ಆಗ್ಬಿಟ್ಟ್ರೆ ಅವರು ನಮ್ಮ 'ಸರ್ವಸ್ವ' ಆಗ್ತಾರೆ!:)
ಕನ್ನಡಸಾಹಿತ್ಯ.ಕಾಂ ನಲ್ಲಿ ವಿಕ್ರಮ್ ಹತ್ವಾರ್ ಅವ್ರು ಬರ್ದಿರೋ ಒಂದು ಕಥೆ(ನೀ ಮಾಯೆಯೊಳಗೋ?) ನೆನಪಾಯ್ತು ನಿಮ್ಮ ಪೋಸ್ಟ್ ನೋಡ್ತಾ. ಓದಿಲ್ಲವಾದ್ರೆ ಓದಿ ನೋಡಿ:)
ಏನೆನೋ ಕುಟ್ಟಿಬಿಟ್ಟಿದೀನಿ, ಓದಿ ಮಜಾ ಮಾಡಿ:))
ಚೆನ್ನಾಗಿ ಬರೀತೀರ, ಹೀಗೇ ಬರೀತಿರಿ, ನಿಮ್ಮ ಬ್ಲಾಗ್ ನ ಹೀಗೆ ಸುಮ್ಮ್ನೆ ಲಿಂಕ್ ಮಾಡ್ತಿದೀನಿ:)

ಸುಶ್ರುತ ದೊಡ್ಡೇರಿ said...

@ Sree

ಸುಸ್ವಾಗತ. ನಿಮ್ಮ ಉದ್ದುದ್ದ ಪ್ರತ್ರಿಕ್ರಿಯೆಗೆ ಧನ್ಯವಾದಗಳು.

ಎಲ್ಲವೂ ಯಾವಾಗ್ಲೂ ಇರಬೇಕು ಅಂತ ಹಂಬಲಿಸಬೇಕಾ? ಹಂಬಲಿಸಬಹುದು. ಆದ್ರೆ ಮನುಷ್ಯನ ದುರಂತ ಅಂದ್ರೆ ಯಾವುದೇ ಆದ್ರೂ ಸ್ವಲ್ಪೇ ಸಮಯಕ್ಕೆ boring ಅನ್ನಿಸಿ ಬೇರೆಯದನ್ನು / ಹೊಸದನ್ನು ಬಯಸಲು ಶುರುವಿಡುವುದು..!

ಈ ನಿಮ್ಮ 'ಸರ್ವಸ್ವ' ಆಗೋ ಒಂದು ವ್ಯಕ್ತಿಗಾಗಿ ಬದುಕಿನ ಈ ಮಿಕ್ಕೆಲ್ಲ ಖುಷಿಗಳನ್ನ ಪಕ್ಕಕ್ಕಿಡಬಲ್ಲಿರಿ ಅಲ್ಲ್ವ? ಇಡ್ತೀವಿ ನಾವು ಹುಡ್ಗೀರಂತೂ;p -ಈ ಮಾತನ್ನ ಒಪ್ಪಬೇಕಾ ಬಿಡಬೇಕಾ ಗೊಂದಲವಾಗುತ್ತಿದೆ :)

'ನೀ ಮಾಯೆಯೊಳಗೆ' ಒಮ್ಮೆ ಓದಿದ್ದೇನೆ; ಮತ್ತೊಮ್ಮೆ ಓದುವೆ.