Wednesday, March 17, 2010

ಇನ್ನೊಂದು ಲಾರ್ಜ್

ವಿಳಾಸವೇ ಬರೆದಿರದ ಪರಿಮಳದ
ಜಾಡು ಹಿಡಿದು ಬೆಟ್ಟವನ್ನೇರುತ್ತಿರುವ ತುಂಬಿಗೆ
ಹುಚ್ಚು ಭ್ರಮೆಯಿರಬೇಕು

ಹೂವು ಬೆಟ್ಟದ ಮೇಲೇ ಇರಬಹುದು
ಆಚೆ ತಪ್ಪಲಲ್ಲೂ ಇರಬಹುದು
ಇಲ್ಲದೆಯೂ ಇರಬಹುದು, ಅಥವಾ
ಅದರೊಡಲ ಮಧುಪಾತ್ರೆ ಈಗಾಗಲೇ
ಬರಿದಾಗಿರಬಹುದು.
ಪುಟ್ಟ ಪಾರದರ್ಶಕ ರೆಕ್ಕೆಗಳಿಗೆ
ಭ್ರಾಂತಿಯ ಎಣ್ಣೆ ಸವರಿರದಿದ್ದರೆ
ಹೇಗೆ ಬಂದೀತು ಬಳಲಿ ಬರದಂತೆ
ಬಡಿಯುವ ಕಸುವು?

ಮೆಚ್ಚುತ್ತೇನೆ-
'ಅದು ಭ್ರಮೆಯೂ ಅಲ್ಲ, ಭ್ರಾಂತಿಯೂ ಅಲ್ಲ;
ಬರೀ ಪ್ರೀತಿ.. ಹೂವಿನ ಪರಿಮಳದೆಡೆಗಿನ ತುಂಬಿಯ
ಕನಸಿನ ರೀತಿ' ಎಂದುತ್ತರಿಸುವ ನಿನ್ನ ಜಾಣ್ಮೆ.

ಆದರೆ-
ಸಿಗಲಿಲ್ಲ ಹಣ್ಣು ಎಂದಾಕ್ಷಣ
ದ್ರಾಕ್ಷಿ ಹುಳಿಯೆಂದ ನರಿಯಂತೆ ಹುಸಿ
ಬುದ್ದಿವಂತಿಕೆ ತೋರುವ ನಿನ್ನೀ ಮುಖ ನೋಡಿ
ಯಾಕೋ ಹೂವೇ ಮುಗ್ಧ ಅಂತ ನನಗನಿಸಿದರೆ,
ಕ್ಷಮಿಸು.

ಈಗಾಗಲೇ ಸಿಕ್ಕಾಪಟ್ಟೆ ಕುಡಿದಿದ್ದೀಯ,
ಇನ್ನೊಂದು ಲಾರ್ಜ್‌ಗೆ ಆರ್ಡರ್ ಮಾಡುವ ಮುನ್ನ
ಕೊಂಚ ಯೋಚಿಸು.

27 comments:

ವಿ.ರಾ.ಹೆ. said...

ಇದ್ನ ಹ್ಯಾಗೋವರ್ ಕವಿತೆ ಅನ್ಬೋದು. ಜಾಸ್ತಿ ಕುಡೀಬೇಡ ಮಾರಾಯ. ಕವಿತೆಗಳನ್ನು ಸಹಿಸಿಕೊಳ್ಳೋದು ಕಷ್ಟ ಆಗುತ್ತೆ!

ಗುರು-ದೆಸೆ !! said...

'ಸುಶ್ರುತ ದೊಡ್ಡೇರಿ' ಅವ್ರೆ..,

ಉತ್ತಮ ಪದಗಳ ಬಳಕೆ..
ಕವಿತೆ ಸೊಗಸಾಗಿದೆ..


ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ..: http://manasinamane.blogspot.com (ಮಾರ್ಚ್ ೧೫ ರಂದು ನವೀಕರಿಸಲಾಗಿದೆ)

PARAANJAPE K.N. said...

ಚೆನ್ನಾಗಿದೆ, ವಿಕಾಸ್ ಹೇಳಿದ೦ತೆ ಹ್ಯಾ೦ಗೋವರ್ ಪರಿಣಾಮದಿ೦ದ ಹುಟ್ಟಿದ ಕವಿತೆ ಅಲ್ಲವಲ್ಲ.

ಶಂಭುಲಿಂಗ said...

ಅಹಾಹಾ..! ಚೆನ್ನಾಗಿದೆ ಕವಿತೆ.

sunaath said...

ಆತ್ಮಚರಿತ್ರೆ ಸೊಗಸಾಗಿದೆ!

Anonymous said...

ಸಕ್ಕತ್ ಕವಿತೆ. ಇಷ್ಟ ಆಯ್ತು..:)

ಗೌತಮ್ ಹೆಗಡೆ said...

ಹದಾಕೆ ತಗಳೋ :)ಕವಿತೆಯ ಕಿಕ್ ಒಂಥರ ಮಜವಾಗಿದ್ದು :)

Divya Mallya - ದಿವ್ಯಾ ಮಲ್ಯ said...

ಚೆನ್ನಾಗಿದೆ ಕವನ.. ವಿಷಯ ವ್ಯಕ್ತಪಡಿಸಲು ಬಳಸಿದ ರೂಪಕಗಳು ಸೂಪರ್!

umesh desai said...

ಅದೇನೋಪ್ಪಾ ಸುಶ್ರುತನ ಮ್ಯಾಜಿಕ್ಕು ದಿನೇ ದಿನೇ ಹರೆಯ ಪಡೆದುಕೊಳ್ತಿದೆ.....ಒಳ್ಳೆಯ ಕವಿತೆ ಅಭಿನಂದನೆಗಳು..

ವಿನಾಯಕ ಕೆ.ಎಸ್ said...

ಏನೋ ಸುಶ್ರುತ ಎಲ್ಲಾ ನಿಂಗೆ ಇಂಟರ್‌ನ್ಯಾಷನಲ್‌ ಕುಡುಕನ ಪಟ್ಟ ಕಟ್ಟೊ ಹುನ್ನಾರ ನಡೆಸ್ತಾ ಇದ್ದಾರಲ್ಲೋ?! ಬೇಗ ಗಾಂಧಿ ಪ್ರತಿಮೆ ಎದುರೋ, ಟೌನ್‌ಹಾಲ್‌ನಲ್ಲೋ ಒಂದು ಪ್ರತಿಭಟನೆ ಮಾಡಿ ವಿರೋಧಿಗಳ ಪಿತೂರಿ ಸಂಚು ಬಯಲು ಮಾಡು! ಇಲ್ಲ ಅಂದ್ರೆ ಆಮ್ಯಾಕೆ ಡೇಂಜರ್‌ ನೋಡು. ಮೋದ್ಲೆ ಮದ್ವೆಯಾಗದ ಹುಡುಗ!!!

ಸುಶ್ರುತ ದೊಡ್ಡೇರಿ said...

@ ವಿ.ರಾ.ಹೆ,
ಓಕೆ.

ದೆಸೆ,
ಥ್ಯಾಂಕ್ಯೂ. ಬರ್ತೀನಿ.

ಪರಾಂಜಪೆ,
ಅಲ್ಲ. ವಿಕಾಸನ ಕಮೆಂಟು ಹ್ಯಾಂಗೋವರ್‌ನಿಂದ ಹುಟ್ಟಿದ್ದು ಅಷ್ಟೇ. :P

ಶಂಭುಲಿಂಗ,
ಶರಣು. :-)

ಸುನಾಥ್,
ಎಂಥ ಆತ್ಮಚರಿತ್ರೆ ಕಾಕಾ? :O

ಬ್ಲೂಫ್ಲವರ್,
:-) ಥ್ಯಾಂಕ್ಸ್!

ಗೌತಮ್,
ಅಡ್ಡಿಲ್ಯಾ.. ನೀ ಹೇಳಿದ್ಮೇಲೆ ಸೈ.

ಮಲ್ಯ,
ಹ್ಮ್.. ಥ್ಯಾಂಕ್ಸ್‌ರೀ..

ದೇಸಾಯೀಜಿ,
ಅದೇನೋಪ್ಪ! :O :P

ಕ್ವಾಡ್ಸರ,
ಹೂಂ ಕಣಪ್ಪ.. ಕಾಲ ಹಾಳಾಗೋಗಿದೆ.. ಮದ್ವೆ ಆಗದ, ಒಳ್ಳೆ ಗುಣದ ಹುಡುಗ್ರನ್ನ ಕಂಡ್ರೆ ಆಗಲ್ಲ ಜನಕ್ಕೆ..

ಸಾಗರದಾಚೆಯ ಇಂಚರ said...

ಸಕತ್ತಾಗಿದೆ ಸರ್
ಅಷ್ಟೊಂದು ಕುಡಿದು ಬರಿಬೇಡಿ :)

Sree said...

super:)

ಮನದಾಳದಿಂದ said...

ಶುಶ್ರುತ ಅವರೇ, ಒಳ್ಳೆಯ ಕವಿತೆ.
ಹ್ಯಾಂಗೋವರ್ ಪರಿಣಾಮ ಅಲ್ಲ ಅಂತ ಗೊತ್ತಾಗಿ ಖುಷಿಯಾಯ್ತು.
ಹೀಗೆ ಬರೀತಾ ಇರಿ

Annapoorna Daithota said...

Chennaagide :-)

ದಿವ್ಯಾ said...

chanaagi baradde.... :-)

Raghavendra said...

ಬೆಟ್ಟದ ತಪ್ಪಲಿಗೆ ಹೋಗಿ ಬಂದಂತನ್ನಿಸಿತು..

ಕುಡಿದ ಮತ್ತಿನಲ್ಲಿ ನಿಜ ಹೊರಬರುತ್ತದೆ ಎನ್ನುತ್ತಾರೆ, ಅದು ಎಷ್ಟು ಸತ್ಯವೋ ಗೊತ್ತಿಲ್ಲ, ಆದರೆ ಕಾವ್ಯದ ಮತ್ತಿನಲ್ಲಿ ನಿಜ ಹೊರಬರುವುದು ಸತ್ಯವೇ ಅನ್ನಿಸುತ್ತದೆ.. ಏಕೆಂದರೆ,
ಕಾವ್ಯದ ಮತ್ತು ಭ್ರಮೆಯನ್ನೂ ಜಾಗೃತಿಯಿಂದ ನೋಡುತ್ತದೆ ಅಲ್ಲವೇ??

P Kalyan said...

ವ್ಹಾಹ್! ತುಂಬಾ ಚೆನ್ನಾಗಿದೆ.

shivu.k said...

ಕವಿತೆ ನಿಜಕ್ಕೂ ತುಂಬಾ ಚೆನ್ನಾಗಿದೆ...ಅದ್ರೆ ಕೊನೆಯಲ್ಲಿನ ಹ್ಯಾಂಗೋವರ್ ಲಿಂಕ್ ಇಲ್ಲದಿದ್ದರೂ ಚೆಂದವಿತ್ತೇನೋ...

Parisarapremi said...

heegoo unTe???

Anonymous said...

SAAR NIMMA KAVIHE OODI BLACK CADILAC NA MABBUKATTALALLI KULITHU 90 MELE 90 ERISIDA ANUBHAVAVAITHU.EE THARAHADA MANASSIGE KICK KODUVA KAVITHEGALINNUU HARIDU BARALI.

ರಂಜನಾ ಹೆಗ್ಡೆ said...

thumba thumba channagi ide. saalu galanna thumba channagi henediddiya.

ಸುಶ್ರುತ ದೊಡ್ಡೇರಿ said...

@ ಇಂಚರ,
ಆಯ್ತು ಸರ್.. ಇನ್ಮೇಲೆ ಕಡ್ಮೆ ಕುಡೀತೀನಿ. :)

Sree,
:-)

ಮನದಾಳದಿಂದ,
ರೈಟ್ ಸರ್!

ಅನಾ, ದಿವ್ಯಾ,
ಥ್ಯಾಂಕ್ಸ್!

ರಾಘವೇಂದ್ರ,
ನಿಜ ನಿಜ.. ಚನಾಗ್ ಹೇಳಿದ್ರಿ.. ಥ್ಯಾಂಕ್ಸ್ ಅ ಲಾಟ್!

ಕಲ್ಯಾಣ್,
:-) ಧನ್ಯವಾದಾ..

ಶಿವು,
ಹಂಗಂತೀರಾ? :O

Papre,
ಉಂಟು.

ಅನಾನಿಮಸ್,
ನಾ ಹರಿಸ್ತಾ ಇದ್ರೆ BLACK CADILAC ಕಂಪನಿಯವರ ಗತಿ ಏನು?!

ರಂಜನಾ,
ಥ್ಯಾಂಕ್ಸ್ ಡಿಯರ್..

ವಿದ್ಯಾ ದದಾತಿ 'ವಿನಯಂ' !! said...

Tumba chennagide. Kudidaaga nija baratte anntaare. Nanage gottilla. Kavite Bhinnavaagide, Sundaravaagide.

-Vinay

Anonymous said...

ಚೊಲೋ ಮಾಣಿ ಕಂಡಾಂಗ ಅನಿಸ್ತು, ಜಾತಕ ಕಳಿಸನ ಮಾಡಿದಿದ್ದಿ. ಎಂತೋ "ಲಾರ್ಜು, ಗೀರ್ಜು " ಎಲ್ಲಾ ಶುರು ಮಾಡಿಗಿದ್ಯ ?

ಸುಶ್ರುತ ದೊಡ್ಡೇರಿ said...

@ Vinay,
ಥ್ಯಾಂಕ್ಯೂ..!

ಅನಾನಿಮಸ್,
ಛೇ! ಚೊಲೋ ಮಾಣಿಗಳು ಕವನಾನೂ ಬರಿಲಾಗ್ದಾ? :(

ಸಿಂಧು Sindhu said...

ಪ್ರೀತಿಯ ಸು,

ಒಳ್ಳೆ ಕವಿತೆ.
ಇಷ್ಟ ಆತು.
ಹೂವೇ ಮುಗ್ಧ! ನಿಜ್ವಾಗ್ಲೂ.

ಮೊದಲನೇ ಲಾರ್ಜ್ ಗೆ ಆರ್ಡರ್ ಮಾಡುವ ಮುನ್ನ ಯೋಚಿಸಬಹ್ದು. ಇನ್ನೊಂದು ಮತ್ತೊಂದು ಮಾಡುವಾಗ ಯೋಚನೆ ಮಾಡಲು ಆಗ್ತಾ? ನಂಗೊತ್ತಿಲ್ಲೆ. ನಂದೇನಿದ್ರೂ ಕೇಸು ತಂದಿಟ್ಕಂಡು ಮನೆ ಮೂಲೆಯಲ್ಲಿ ಒಬ್ಬಳೇ ಖಾಲಿ ಮಾಡ ಜಾತಿ. :)

ಪ್ರೀತಿಯಿಂದ
ಸಿಂಧು