Thursday, December 16, 2010

ಆಯ್ಕೆ ಎಂಬುದು, ಕೆಲವೊಮ್ಮೆ

ಆಯ್ಕೆ ಎಲ್ಲಾ ಸಲ ಸೂಪರ್‌ಮಾರ್ಕೆಟ್ಟಿನ ವ್ಯಾಪಾರದ ಹಾಗಲ್ಲ
ಮುಟ್ಟಿ ಹಿಡಿದು ಒತ್ತಿ ನೋಡಿ ವಜನು ಪರಿಶೀಲಿಸಿ ಕೊಳ್ಳಲು
ಆಗುವುದಿಲ್ಲ. ಕೆಲವೊಮ್ಮೆ ಕಣ್ಣೆದುರಿಗೇ ಹೋದರೂ ಮೋಸ,
ಬಾಯ್ಮುಚ್ಚಿ ನಿಲ್ಲಬೇಕು.

ಆಯ್ಕೆ ಸಂತೆಯ ವ್ಯಾಪಾರದ ಹಾಗೂ ಅಲ್ಲ
ನಾಲ್ಕು ಕಡೆ ವಿಚಾರಿಸಿ ಗಂಟೆಗಟ್ಟಲೆ ನಿಂತು ಚೌಕಾಶಿ ಮಾಡಿ
ಸರೀ ರೇಟಿಗೆ ಕುದುರಿಸಿ ತರುವ ತರಕಾರಿ-
ಯಂತಲ್ಲ. ಕೆಲವೊಮ್ಮೆ ತಾಜಾ ಕಂಡ ಹಣ್ಣು
ಕತ್ತರಿಸಿದಾಗಲೇ ಬಣ್ಣ ಬಯಲು.

ಆಯ್ಕೆಯ ವಸ್ತು ದಿನಾ ಮನೆಬಾಗಿಲಿಗೆ ಬರುವುದಿಲ್ಲ
ತಳ್ಳುಗಾಡಿಯವನನ್ನು ಹೇಳಿ ನಿಲ್ಲಲು
ಬುಟ್ಟಿ ಹಿಡಿದು ಬಂದು ಕೊಳ್ಳುವಷ್ಟು ಸುಲಭ
ಅಲ್ಲ. ಕೆಲವೊಮ್ಮೆ ನಾವು ಕಾತರಿಸಿದ್ದು
ಮೆಟ್ಟಿಲಿಳಿದು ಬರುವಷ್ಟರಲ್ಲಿ ಬೇರೆ ಬೀದಿಯಲ್ಲಿ.

ಆಯ್ದದ್ದು ಈಬೇ ಅಮೆಜಾನುಗಳಲ್ಲಿ ಸಿಗಲೇಬೇಕೆಂದಿಲ್ಲ
ಸರೀ ಎನಿಸಿದ ಬೆಲೆಯ ಸಮಾ ಎನಿಸಿದ ಐಕಾನು ಕ್ಲಿಕ್ಕಿಸಿ,
ಒತ್ತಿ ಕಾರ್ಡಿನ ನಂಬರು ಹಾಕಿಕೊಂಡು ಕಾರ್ಟಿಗೆ, ಬರುವು
ಕಾದಂತಲ್ಲ. ಕೆಲವೊಮ್ಮೆ ಸರಕೇ ಇರುವುದಿಲ್ಲ, ಅಥವಾ
ಬಂದ ಮಾಲು ಚಿತ್ರದಲ್ಲಿದ್ದಂತಿರುವುದಿಲ್ಲ.

ಆಯ್ಕೆ ಎಂಬುದು ಶೆಟ್ಟರ ಅಂಗಡಿಯ ವ್ಯಾಪಾರದಂತೆ.
ನಮ್ಮೆಲ್ಲ ಪಟ್ಟಿ ಕೇಳಿ ಆತ ಚೀಲಕ್ಕೆ ತುಂಬಿ ಕೊಟ್ಟಂತೆ.
ತಕ್ಕಡಿಯ ತೂಕ ನಂಬಿದಂತೆ. ಹೇಳಿದ ಬೆಲೆ ತೆತ್ತಂತೆ.
ಕೊಂಡಾದ ನಂತರ ಖರೀದಿಯ ನೈಪುಣ್ಯತೆಯ ಬಗ್ಗೆ
ದಾರಿಯಿಡೀ ಯೋಚಿಸಿದಂತೆ. ತಲೆ ಸವರಿಕೊಂಡಂತೆ.

15 comments:

Harsha Bhat said...

Idu yava aayke bagge bardiddu guru... ? aayke mada sandharbha hatra bandange ide ;)

ಮನದಾಳದಿಂದ............ said...

ನಂಬಿಕೆಯೇ ಜೀವನ, ಭರವಸೆಯೆಯೇ ಬದುಕು!
ಅರ್ಥಗರ್ಭಿತ ಕವನ......

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
ಈ ಸಾಲು ಇಷ್ಟವಾಯ್ತು ಅಂತ ಹೇಳಿಬಿಡಬೇಕು ಅನ್ನಿಸಿತು. ಓದುತ್ತ ಓದುತ್ತ ಎಲ್ಲ ಸಾಲುಗಳೂ ಇಷ್ಟವಾಗಿ ಯಾವ ಸಾಲು ಇಷ್ಟವಾಯ್ತು ಅಂತ ಹೇಳೋದು ಕಷ್ಟವಾಗಿ ‘ಇಷ್ಟವಾಯ್ತು’ ಅನ್ನೋದಕ್ಕಿಂತಲೂ ಒಂದಷ್ಟು ಜಾಸ್ತಿ ಬೆಲೆತೂಗುವ ಬೇರೆ ಪದಾನೂ ಸಿಗದೇ ಇಷ್ಟೇ ಹೇಳುತ್ತಿದ್ದೇನೆ.

ಪ್ರೀತಿಯಿಂದ,
-ಪುಟ್ಟಕ್ಕ

Dr.D.T.Krishna Murthy. said...

ಸುಶ್ರುತ ದೊಡ್ಡೇರಿ;ಸುಂದರ ಕವನ .ಇಷ್ಟ ಆಯ್ತು.

Narayan Bhat said...

ಆಯ್ಕೆಯಲ್ಲಿ "ಕೆಲವೊಮ್ಮೆ ಕಣ್ಣೆದುರಿಗೇ ಹೋದರೂ ಮೋಸ,ಬಾಯ್ಮುಚ್ಚಿ ನಿಲ್ಲಬೇಕು"...ನಿಮ್ಮ ಕವನದ ಸಾಲುಗಳು ನನ್ನ ಅನುಭವಕ್ಕೂ ದಕ್ಕಿದ ವಿಚಾರಗಳು...ಕವನ ಇಷ್ಟವಾಯ್ತು.

sunaath said...

ಒಳ್ಳೆಯ ಕವನದ ಆಯ್ಕೆಗೆ ಕಷ್ಟವಿಲ್ಲ;
ಈ ಕವನವನು ಎತ್ತಿ ತೋರಬಹುದಲ್ಲ!

Subrahmanya said...

sooper ..

ವಿ.ರಾ.ಹೆ. said...

Yes..Your poems like this make me to lv u sm times ;). Its super.

Shanmukharaja M said...

ನಿಜ, ಕವನ ನಿತ್ಯಕ್ಕೆ ಹತ್ತಿರವಾದುದು! ಆಯ್ಕೆಗೆ ಆಪ್ಷನ್ ಇಲ್ಲದಿದ್ದರೆ ಸುಲಭ. ಇದ್ದಷ್ಟು ಜಟಿಲವೇ!

Keshav.Kulkarni said...

ಕವನ ತುಂಬಾ ಚೆನ್ನಾಗಿದೆ. ಇನ್ನೂ ಚೆನ್ನಾಗಿ ಇರಬಹುದಿತ್ತು.

ಶಿವಪ್ರಕಾಶ್ said...

very nice one..

ಅನಿಕೇತನ ಸುನಿಲ್ said...

Exactly correct!!!! chendada padya ;-)

Sushrutha Dodderi said...

@ ಹರ್ಷ,
ಏ ಸುಮ್ನಿರಾ.. ಅದ್ನೆಲ್ಲ ಇಲ್ಲೆಲ್ಲ ಹೇಳಕ್ ಆಗ್ತಲ್ಲೆ. ;)

ಮನದಾಳದಿಂದ,
ಹ್ಮ್.. ನಿಜ.. ಥ್ಯಾಂಕ್ಸ್!

ಪುಟ್ಟಕ್ಕ,
ಯಾಕೋ ನೀನು ಸಿಕ್ಕಾಪಟ್ಟೆ ಹತ್ತಿಸ್ತಾ ಇದ್ದೆ.. ಇರ್ಲಿ ಇರ್ಲಿ.. ವಿಚಾರ್‌ಸ್ಕ್ಯಳ್ತಿ. :)

ಡಾಕ್ಟರ್,
ಥ್ಯಾಂಕ್ಯೂ!

ನಾರಾಯಣ ಭಟ್,
ಹ್ಮ್.. ಧನ್ಯವಾದ.

ಸುನಾಥ,
:-) ಲವ್ಯೂ ಕಾಕಾ. :-)

ಸುಬ್ರಹ್ಮಣ್ಯ,
:-)

ವಿ.ರಾ.ಹೆ.,
ಏನ್ ಚಿನ್ನಾ, ಸಿಕ್ಕಾಪಟ್ಟೆ ಡೈಲಾಗು? ;)

ಶಣ್ಮುಖರಾಜ,
ಸತ್ಯ!

ಕೇಶವ್,
ಮೇಬಿ! ಥ್ಯಾಂಕ್ಸ್ ಸರ್.. :)

ಶಿವಪ್ರಕಾಶ್,
ಥ್ಯಾಂಕ್ಸ್ ಶಿವು..

ಸುನಿಲ್,
ಧನ್ಯ ಬಾಸ್!

Unknown said...

ಕೆಲವೊಮ್ಮೆ ನಾವು ಕಾತರಿಸಿದ್ದು
ಮೆಟ್ಟಿಲಿಳಿದು ಬರುವಷ್ಟರಲ್ಲಿ ಬೇರೆ ಬೀದಿಯಲ್ಲಿ
wonderful lines....

Unknown said...

ಕೆಲವೊಮ್ಮೆ ನಾವು ಕಾತರಿಸಿದ್ದು
ಮೆಟ್ಟಿಲಿಳಿದು ಬರುವಷ್ಟರಲ್ಲಿ ಬೇರೆ ಬೀದಿಯಲ್ಲಿ
wonderful lines....