Thursday, November 28, 2013

ನವೆಂಬರ್ ಚಿತ್ರಗಳು

ಎಲ್ಲೋ ಚಂಡಮಾರುತವೆದ್ದಿದ್ದಕ್ಕೆ ಇಲ್ಲಿ ಮಳೆಯಾಗುತ್ತಿದೆ
ಆಕಾಶಕ್ಕೆ ಮುಖ ಮಾಡಿ ನಿಂತ ಡಿಶ್ಶುಗಳು
ಧಾರಾವಾಹಿಯ ಸಿಗ್ನಲ್ಲುಗಳನ್ನು ಸ್ವೀಕರಿಸುತ್ತಿವೆ
ಬಚ್ಚಲ ಗೋಡೆಯಲ್ಲಿ ನೇತಾಡುತ್ತ ಪರಿಮಳ ಸೂಸುತ್ತಿರುವ
ಏರ್ ಫ್ರೆಶನರ್‌ನ ಮೈಮೇಲೆ ನೀರ ಹನಿಗಳು ನಿಂತಿವೆ
ಬಿಡಿಸಿದಾಗ ಪುಳಕ್ಕನೆ ಹೊರಬಂದ ಬಿಳಿಬಿಳಿ ಅವರೆಕಾಳುಗಳು
ಆಶ್ಚರ್ಯದಲ್ಲಿ ಕಣ್ ಕಣ್ ಬಿಟ್ಟು ನೋಡುತ್ತಿವೆ
ನೋಟ್‌ಬುಕ್ಕಿನ ಹಾಳೆಯಿಂದ ಯಾರೋ ಮಾಡಿ ಬಿಟ್ಟ ರಾಕೆಟ್
ಟೆರೇಸಿನಲ್ಲಿ ಗಾಳಿಗೆ ಅತ್ತಿತ್ತ ತುಯ್ಯುತ್ತಿದೆ
ಕಾರ್ತಿಕ ದೀಪೋತ್ಸವದಲ್ಲಿ ಉರಿಯುತ್ತಿರುವ ಸಾಲು ದೀಪಗಳಲ್ಲಿ
ಎಣ್ಣೆ ಖಾಲಿಯಾಗಿ ಆರಿರುವ ಹಣತೆಗೆ ಒಂಟಿತನ ಕಾಡುತ್ತಿದೆ
ಜಿಮೇಲಿನ ಸ್ಪಾಮ್ ಫೋಲ್ಡರಿನಲ್ಲಿ ಎನ್‌ಲಾರ್ಜ್‌ಮೆಂಟ್
ಟಿಪ್ಪುಗಳು ಅನಾಥವಾಗಿ ಬಂದು ಬಿದ್ದಿವೆ
ಸಿಕ್ಕಾಪಟ್ಟೆ ಕೆಮ್ಮು ಎಂಬ ಸ್ಟೇಟಸ್ಸಿಗೂ
ಫೇಸ್‌ಬುಕ್ಕಿನ ಗೋಡೆಯಲ್ಲಿ ನಾಲ್ಕು ಲೈಕು ಬಂದಿದೆ
ಕೆಂಪು ಸೇಬುಗಳ ಬದಿಗೆ ಸರಿಸಿ
ತಳ್ಳುಗಾಡಿಯ ಮೇಲೆ ಕಿತ್ತಳೆ ರಾರಾಜಿಸುತ್ತಿದೆ
ಮಟಮಟ ಮಧ್ಯಾಹ್ನವೇ ನ್ಯೂಸ್‌ಚಾನೆಲ್ಲಿನಲ್ಲಿ
ಅದದೇ ಜೋಕುಗಳ ಹಾಸ್ಯಸಂಜೆ ಬರುತ್ತಿದೆ
ಎಕ್ಸ್‌ಪ್ರೆಸ್ ರೈಲು ಸಾಗಿಹೋಗಲೆಂದು ಗೂಡ್ಸ್ ರೈಲು
ಜಂಕ್ಷನ್ನಿನಲ್ಲಿ ಗಂಟೆಯಿಂದ ಕಾದಿದೆ
ನಿದ್ದೆಯಿಂದೆದ್ದ ಸಚಿನ್ ತೆಂಡೂಲ್ಕರ್ ಮೈಮರೆವಿನಲ್ಲಿ
ಬ್ಯಾಟ್ ಹಿಡಿದು ಸ್ಟೇಡಿಯಂ ಕಡೆ ನಡೆದಿದ್ದಾನೆ.

ಪೂರ್ತಿ ಮೂವತ್ತು ದಿವಸ ತುಂಬಿರುವ ಕ್ಯಾಲೆಂಡರಿನ
ನವೆಂಬರ್ ಹಾಳೆಯ ಮೇಲೆ ಚಿಟ್ಟೆಯೊಂದು ಕೂತಿದೆ
ಪಕ್ಕಕ್ಕೆ ಸರಿ ಪತಂಗವೇ, ನನಗೆ ಡಿಸೆಂಬರಿಗೆ ಹೋಗಬೇಕಿದೆ.

13 comments:

ಸಿಂಧು sindhu said...

ಚೆನಾಗಿದೆ ಸುಶ್ರುತ,

ಎಲ್ಲರೂ ಅವರವರದ್ದೇ ಲೋಕದಲ್ಲಿ ಮಗ್ನರು.
ಎಕ್ಸ್ ಪ್ರೆಸ್ಸು ವೇಗದಲ್ಲೂ ಗೂಡ್ಸು ನಿಧಾನದಲ್ಲೂ
ಪತಂಗ ಹಾರಿ ಸಾಕಾಗಿ ಕೂತಿರುವುದರಲ್ಲೂ.. ನಾವು ಓಡಿ ಸಾಕಾಗಿ ಕಾಲಪುಟ ತಿರುಗಿಸುವುದರಲ್ಲೂ...

ಚಂದ ಕವಿತೆ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ..
ಸಿಂಧು

nenapina sanchy inda said...

tumbaa chennagide Sushrutha!!
:-)
malathi akka

ವಾಣಿಶ್ರೀ ಭಟ್ said...

Tumba chennagide :)

umesh desai said...

ಹೌದೌದು ಇದೆಲ್ಲಾ ಇರತದ ನವೆಂಬರ್ ದಾಗ
ನೋಡಲಿಕ್ಕೆ ಸುಶ್ರುತ ನಯನ ಬೇಕು..!!

Dr. Kanada Narahari (Kanada Raghava) said...

ಇಬ್ಬರೂ ಕೂತು ಓದಿದ್ವಿ! ಗಟ್ಟಿಯಾಗಿ, ಖುಷ್ಯಾತು!

Anonymous said...

mast

Parisarapremi said...

he he maja ide.. :)

ಚೈತ್ರ ಬಿ . ಜಿ . said...

tumba chennagide kavite....

ಮನಸಿನ ಮಾತುಗಳು said...

Nice!! :-)

ಮನಸಿನ ಮಾತುಗಳು said...

Nice!!:-)

ನೀತಾ ರಾವ್ said...

Tumbaa chennagide. Nimma "Holebagilu" sankalan kooda tumba chennagide.

ನೀತಾ ರಾವ್ said...

Tumbaa chennagide. Nimma "Holebagilu" sankalan kooda tumba chennagide.

Sushrutha Dodderi said...

ಆಗೀಗ ಬ್ಲಾಗಿಸಿದರೂ ಓದಿ ಪ್ರತಿಕ್ರಿಯಿಸುವ ಎಲ್ಲರಿಗೂ ನಮಸ್ಕಾರ. ಧನ್ಯವಾದ. ಪ್ರೀತಿ. :-)

-ಸುಶ್ರುತ